More

    ವಿಧಾನಸಭಾ ಚುನಾವಣೆ 2023: ತ್ರಿಪುರಾ, ಮೇಘಾಲಯ, ನಾಗಾಲ್ಯಾಂಡ್ ಚುನಾವಣೆಗೆ ದಿನಾಂಕ ಫಿಕ್ಸ್​

    ನವದೆಹಲಿ: ಕರ್ನಾಟಕವೂ ಸೇರಿದಂತೆ ಈ ಬಾರಿ 9 ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಮೂರು ರಾಜ್ಯಗಳ ಚುನಾವಣಾ ದಿನಾಂಕ ಇಂದು (ಜ. 18) ಪ್ರಕಟವಾಗಿದೆ. ತ್ರಿಪುರಾ, ಮೇಘಾಲಯ ಹಾಗೂ ನಾಗಾಲ್ಯಾಂಡ್ ವಿಧಾನಸಭಾ ಚುನಾವಣಾ ದಿನಾಂಕವನ್ನು ಕೇಂದ್ರ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಅಧಿಕಾರಿ ರಾಜೀವ್​ ಕುಮಾರ್​ ಘೋಷಣೆ ಮಾಡಿದ್ದಾರೆ.

    ಇಂದು ಸುದ್ದಿಗೋಷ್ಠಿ ನಡೆಸಿದ ಅವರು, ಫೆ.16ರಂದು ತ್ರಿಪುರಾ, ಫೆ.27ರಂದು ಮೇಘಾಲಯ ಹಾಗೂ ನಾಗಾಲ್ಯಾಂಡ್​ ವಿಧಾನಸಭಾ ಚುನಾವಣೆಗೆ ಮತದಾನ ನಡೆಯಲಿದ್ದು, ಮಾರ್ಚ್​ 2ರಂದು ಮೂರು ರಾಜ್ಯಗಳ ಚುನಾವಣಾ ಫಲಿತಾಂಶ ಹೊರಬೀಳಲಿದೆ ಎಂದು ರಾಜೀವ್​ ಕುಮಾರ್​ ತಿಳಿಸಿದರು.

    ಮೂರು ರಾಜ್ಯಗಳ ಶಾಸನ ಸಭೆಗಳ ಅವಧಿಯು ಕ್ರಮವಾಗಿ ಮಾರ್ಚ್ 12, ಮಾರ್ಚ್ 15 ಮತ್ತು ಮಾರ್ಚ್ 22 ರಂದು ಮುಕ್ತಾಯಗೊಳ್ಳಲಿದೆ. ಪ್ರತಿ ರಾಜ್ಯದಲ್ಲಿ 60 ವಿಧಾನಸಭಾ ಸ್ಥಾನಗಳಿಗೆ ಚುನಾವಣೆ ನಿಗದಿಪಡಿಸಲಾಗಿದೆ. ನಾಗಾಲ್ಯಾಂಡ್, ಮೇಘಾಲಯ ಮತ್ತು ತ್ರಿಪುರಾದಲ್ಲಿ ಒಟ್ಟು 62.8 ಲಕ್ಷಕ್ಕೂ ಹೆಚ್ಚು ಮತದಾರರಿದ್ದಾರೆ ಎಂದು ರಾಜೀವ್ ಕುಮಾರ್ ಹೇಳಿದರು.

    ವಿಧಾನಸಭಾ ಚುನಾವಣೆ 2023: ತ್ರಿಪುರಾ, ಮೇಘಾಲಯ, ನಾಗಾಲ್ಯಾಂಡ್ ಚುನಾವಣೆಗೆ ದಿನಾಂಕ ಫಿಕ್ಸ್​

    ಮದ್ವೆ ವೇಳೆ ರಾಜ್ಯದಲ್ಲೇ ಟ್ರೆಂಡ್​ ಆಗಿದ್ದ ಐಎಎಸ್​​ ಅಧಿಕಾರಿ ಮತ್ತು ರಾಜಕಾರಣಿಯ ಲವ್​ ಸ್ಟೋರಿ ಇಲ್ಲಿದೆ…

    KUWJ ವಾರ್ಷಿಕ ಪ್ರಶಸ್ತಿ: ವಿಜಯವಾಣಿ- ದಿಗ್ವಿಜಯ ಬಳಗದ ಸಿದ್ದು ಕಾಳೋಜಿ, ನಾಗರಾಜ್​ ಭಟ್, ಜಗನ್​, ಅವಿನಾಶ್​, ಹರೀಶ್​ ಸೇರಿ ಹಲವರಿಗೆ ಪ್ರಶಸ್ತಿ

    ಪೊಲೀಸರ ಯಶಸ್ವಿ ಕಾರ್ಯಾಚರಣೆ; ನಕಲಿ ಹಾರ್ಪಿಕ್, ಆಲ್​ಔಟ್ ಮಾರಾಟ ಮಾಡುತ್ತಿದ್ದ ವಂಚಕರು ಅಂದರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts