More

    5.2 ಕೆಜಿ ತೂಕದ ಮಗುವಿಗೆ ಜನ್ಮ ನೀಡಿದ ತಾಯಿ! ರಾಜ್ಯದಲ್ಲಿ ದಾಖಲೆ ಎಂದ ವೈದ್ಯರು

    ದಿಸ್ಪುರ: ಸಾಮಾನ್ಯವಾಗಿ ನವಜಾತ ಶಿಶುವಿನ ತೂಕ 2.5ರಿಂದ 3 ಕೆಜಿ ಇರುತ್ತದೆ. ಆದರೆ ಇಲ್ಲೊಬ್ಬ ಮಹಿಳೆ ಬರೋಬ್ಬರಿ 5.2 ಕೆಜಿ ತೂಕವಿರುವ ಮಗುವಿಗೆ ಜನ್ಮ ನೀಡುವ ಮೂಲಕ ದಾಖಲೆ ಬರೆದಿದ್ದಾಳೆ.

    ಅಸ್ಸಾಂನ ಕ್ಯಾಚರ್ ಜಿಲ್ಲೆಯಲ್ಲಿ ಇಂತದ್ದೊಂದು ಹೆರಿಗೆಯಾಗಿದೆ. 27 ವರ್ಷದ ಗರ್ಭಿಣಿಗೆ ಮೇ 29ರಂದೇ ಹೆರಿಗೆಗೆ ಆಸ್ಪತ್ರೆಗೆ ದಾಖಲಾಗಲು ಸೂಚಿಸಲಾಗಿತ್ತಂತೆ. ಆದರೆ ಕಾರಣಾಂತರಗಳಿಂದ ಆಕೆ ಆಗ ಅಡ್ಮಿಟ್ ಆಗಿಲ್ಲ. ಜೂನ್ 17ರಂದು ಆಕೆಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಸತೀಂದ್ರ ಮೋಹನ್ ದೇವ್ ಸಿವಿಲ್ ಆಸ್ಪತ್ರೆಗೆ ದಾಖಲಾಗಿದ್ದಾಳೆ. ಆಕೆಯ ಮೊದಲನೇ ಮಗುವನ್ನು ಸಿಜರಿಯನ್ ಮಾಡಿಯೇ ಹೊರತೆಗೆದಿದ್ದರಿಂದಾಗಿ ಎರಡನೇ ಮಗುವಿಗೂ ಸಿಜರಿಯನ್ ಮಾಡಲಾಗಿದೆ.

    ಆಪರೇಷನ್ ಮಾಡಿ ಮಗು ಹೊರ ತೆಗೆದಾಗ ಅದರ ತೂಕ 5.2 ಕೆಜಿ ಇತ್ತು ಎಂದು ಆಪರೇಷನ್ ಮಾಡಿದ ಡಾಕ್ಟರ್ ಹನೀಫ್ ಮೊಹಮದ್ ಅಫ್ಸರ್ ಅಲಂ ತಿಳಿಸಿದ್ದಾರೆ. ಹೆರಿಗೆಯಾದ ನಂತರ ನಾವು ಎಲ್ಲ ಆಸ್ಪತ್ರೆಗಳಿಗೆ ಕರೆ ಮಾಡಿ ಅಲ್ಲಿ ಹೆರಿಗೆಯಾದ ಮಗುವಿನ ಹೆಚ್ಚಿನ ತೂಕ ಏನೆಂದು ವಿಚಾರಿಸಿದ್ದೇವೆ. ನಮ್ಮ ರಾಜ್ಯದಲ್ಲಿ ಜನ್ಮ ಪಡೆದ ಅತಿ ಹೆಚ್ಚು ತೂಕ ಮಗು ಇದೇ ಎನ್ನುವುದು ದೃಢವಾಗಿದೆ ಎಂದು ಅವರು ತಿಳಿಸಿದ್ದಾರೆ. ಈವರೆಗೆ ಈ ದಾಖಲೆಯಲ್ಲಿ 3.8 ಕೆಜಿಯ ಮಗುವೇ ಮೊದಲನೇ ಸ್ಥಾನದಲ್ಲಿತ್ತು ಎಂದು ಅವರು ಮಾಹಿತಿ ನೀಡಿದ್ದಾರೆ. (ಏಜೆನ್ಸೀಸ್)

    ಶಿಕ್ಷಕಿಯೊಂದಿಗೆ ಅಕ್ರಮ ಸಂಬಂಧ ಬೆಳೆಸಿದ ವ್ಯಕ್ತಿ! ಆಕೆಯ ಟಾರ್ಚರ್​ ತಾಳಲಾರದೆ ಆತ್ಮಹತ್ಯೆ!

    ಗಂಡನೊಂದಿಗೆ ಫೋನ್​ನಲ್ಲಿ ಮಾತನಾಡುತ್ತಾ ಹೊರಹೋದವಳು ದೂರದ ರೈಲ್ವೆ ಹಳಿ ಬಳಿ ಮಾಂಸವಾಗಿ ಪತ್ತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts