More

    ಚುನಾವಣೆ ಬಂಪರ್​ : 18 ಕೋಟಿ ರೂ.ಗಳಷ್ಟು ನಗದು, ಸರಕು ಜಪ್ತಿ

    ದಿಸ್​ಪುರ್: ಚುನಾವಣೆಯ ಸಮಯದಲ್ಲಿ ಜಪ್ತಿಯಾಗುವ ಹಣ, ಅಕ್ರಮ ಮದ್ಯ, ಇತರ ಸಾಮಾನುಗಳ ವಿಚಾರದಲ್ಲಿ ಅಸ್ಸಾಂ ಈ ಬಾರಿ ದಾಖಲೆ ನಿರ್ಮಿಸಿದೆ. ಮತದಾರರಿಗೆ ಹಂಚಲು ಸಂಗ್ರಹಿಸಿದ ಮತ್ತು ಸಾಗಣೆ ಮಾಡುತ್ತಿದ್ದ ಅತ್ಯಧಿಕ ಪ್ರಮಾಣದ ನಗದು ಮತ್ತು ಸರಕು-ಸಾಮಗ್ರಿಗಳನ್ನು ಚುನಾವಣಾ ಜಾಗೃತ ದಳದ ಅಧಿಕಾರಿಗಳು ರಾಜ್ಯದ ವಿವಿಧ ಭಾಗಗಳಿಂದ ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.

    ಫೆಬ್ರವರಿ 26 ಕ್ಕೆ ಚುನಾವಣೆಯ ದಿನಾಂಕಗಳು ಘೋಷಣೆಯಾದ ನಂತರ ಕಳೆದ 11 ದಿನಗಳಲ್ಲಿ, ವಿವಿಧ ಏಜೆನ್ಸಿಗಳು ನಡೆಸಿರುವ ಕಾರ್ಯಾಚರಣೆಯಲ್ಲಿ , ಒಟ್ಟು 18.31 ಕೋಟಿ ರೂ.ಗಳಷ್ಟು ಮೌಲ್ಯದ ಸರಕುಗಳನ್ನು ಜಪ್ತಿ ಮಾಡಲಾಗಿದೆ. ಈ ಸಂಬಂಧವಾಗಿ 110 ಜನರನ್ನು ಬಂಧಿಸಲಾಗಿದ್ದು, ದಾಖಲೆ ಮಟ್ಟದಲ್ಲಿ ಈ ಚುನಾವಣೆಯಲ್ಲಿ ಹಣ ಮತ್ತು ಮದ್ಯಗಳ ಹರಿವು ಕಂಡುಬಂದಿದೆ ಎನ್ನಲಾಗಿದೆ.

    ಇದನ್ನೂ ಓದಿ: “ಟಿಎಂಸಿ ಸೃಷ್ಟಿ ಮಾಡಿರುವ ಕೊಚ್ಚೆಯಿಂದಾಗಿ ಕಮಲ ಅರಳಲಿದೆ” : ಕೊಲ್ಕತಾದಲ್ಲಿ ಮೋದಿ

    ಇದರಲ್ಲಿ 4.27 ಕೋಟಿ ರೂ. ನಗದು, 5.52 ಕೋಟಿ ರೂ. ಮೌಲ್ಯದ ಮದ್ಯ(3.58 ಲಕ್ಷ ಲೀಟರ್), 4 ಕೋಟಿ ರೂ. ಮೌಲ್ಯದ ಡ್ರಗ್ಸ್​ ಮತ್ತು ಇತರ ಮಾದಕ ವಸ್ತುಗಳು, 1 ಕೋಟಿ ಮೌಲ್ಯದ ಚಿನ್ನ ಮತ್ತು ಬೆಳ್ಳಿ ಸಾಮಾನುಗಳು ಮತ್ತು ಮತದಾರರಿಗೆ ಹಂಚಲು ಕೂಡಿಸಿಟ್ಟ 3.52 ಕೋಟಿ ರೂ. ಮೌಲ್ಯದ ಇತರ ಸಾಮಗ್ರಿಗಳು ಜಪ್ತಿಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭಾನುವಾರ 9 ಗಂಟೆಯಿಂದ ಸೋಮವಾರ 9 ಗಂಟೆಯವರೆಗಿನ 24 ಗಂಟೆಗಳಲ್ಲಿ ಅತಿ ಹೆಚ್ಚು ಜಪ್ತಿ ಕಾರ್ಯಗಳು ನಡೆದಿದ್ದು, 5.72 ಕೋಟಿ ರೂ. ಮೌಲ್ಯದ ನಗದು ಮತ್ತು ಸರಕನ್ನು ವಶಕ್ಕೆ ಪಡೆಯಲಾಗಿದೆ ಎಂದು ಹೇಳಿದ್ದಾರೆ.

    ಅಸ್ಸಾಂನಲ್ಲಿ ನಡೆಯಲಿರುವ ಮೊದಲ ಹಂತದ ವಿಧಾನಸಭಾ ಚುನಾವಣೆಯಲ್ಲಿ, 47 ಕ್ಷೇತ್ರಗಳಿಗೆ ಮಾರ್ಚ್ 27 ರಂದು ಮತದಾನ ನಡೆಯಲಿದೆ. ಈ ಪೈಕಿ, ಅಸ್ಸಾಂನ ಮುಖ್ಯಮಂತ್ರಿಯಾಗಿರುವ ಬಿಜೆಪಿಯ ಸರ್ಬಾನಂದ್ ಸೊನೊವಾಲ್​ ಅವರ ಕ್ಷೇತ್ರವಾದ ಮಜೂಲಿ ಕೂಡ ಇದೆ. ಸೊನೊವಾಲ್​ ಅವರು ಮಂಗಳವಾರ ಮಜೂಲಿ ಜಿಲ್ಲಾಧಿಕಾರಿಗಳಿಗೆ ತಮ್ಮ ನಾಮಪತ್ರವನ್ನು ಸಲ್ಲಿಸಿದ್ದಾರೆ.(ಏಜೆನ್ಸೀಸ್)

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    ಗೀರ್ ಅರಣ್ಯ ಪ್ರದೇಶದಲ್ಲಿ ‘ಲಯನ್​ ಶೋ’ : ಏಳು ಜನರಿಗೆ ಜೈಲು ಶಿಕ್ಷೆ

    ಹೆಚ್ಚಿದ ಕರೊನಾ : ಮದುವೆ ಸಮಾರಂಭಗಳಿಗೆ ಪೊಲೀಸರಾಗಲಿದ್ದಾರೆ ವಿಶೇಷ ಅತಿಥಿಗಳು !

    ರಾಹುಲ್ ಗಾಂಧಿ v/s ಜ್ಯೋತಿರಾದಿತ್ಯ ಸಿಂದಿಯಾ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts