More

    ಗೋಪಾಷ್ಟಮಿ ದಿನವೇ ಅಸ್ಸಾಂನಲ್ಲಿ ಶುರುವಾಯಿತೊಂದು ಗೋಆಸ್ಪತ್ರೆ !: ಈಶಾನ್ಯ ರಾಜ್ಯಗಳಲ್ಲಿ ಮೊದಲನೇಯದು

    ಗುವಾಹಟಿ: ಈಶಾನ್ಯ ರಾಜ್ಯಗಳ ಪೈಕಿ ಅಸ್ಸಾಂ ತನ್ನ ಮೊದಲ ಗೋ ದವಾಖಾನೆಯನ್ನು ಗೋಪಾಷ್ಟಮಿ ದಿನವಾದ ಭಾನುವಾರ ಪಡೆದುಕೊಂಡಿದೆ. ಅಸ್ಸಾಂನ ದಿಬ್ರುಗಡದಲ್ಲಿ ವಿಶೇಷವಾಗಿ ಗೋವುಗಳಿಗಷ್ಟೇ ಚಿಕಿತ್ಸೆ ನೀಡುವ ಆಸ್ಪತ್ರೆ ಶುರುವಾಗಿದೆ.

    ಈ ಹೊಸ ಆಸ್ಪತ್ರೆ ದಿಬ್ರುಗಢ ಪಟ್ಟಣದ ಗೋಪಾಲ ಗೋಶಾಲೆ ಆವರಣದಲ್ಲಿ ಆರಂಭವಾಗಿದ್ದು, ಸಾಮಾಜಿಕ ಕಾರ್ಯಕರ್ತ ಸುನಿಲ್ ಅಗರವಾಲ್​ ಉದ್ಘಾಟಿಸಿದರು. ಗೋಪಾಷ್ಟಮಿ ಹಬ್ಬದ ದಿನವೇ ಇದನ್ನು ಆರಂಭಿಸಲಾಗಿದೆ. ಗೋಪಾಲ ಗೋಶಾಲೆಯ ಅಧ್ಯಕ್ಷ ನಿರ್ಮಲ್ ಬೆರಿಯಾ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಈಶಾನ್ಯ ರಾಜ್ಯಗಳ ಪೈಕಿ ಇದುವೇ ಮೊದಲನೇ ಗೋ ಆಸ್ಪತ್ರೆ. ಇಲ್ಲಿ ಶಸ್ತ್ರಚಿಕಿತ್ಸೆ ನಡೆಸುವ ಸೌಲಭ್ಯಗಳೂ ಇದ್ದು ಉತ್ತಮ ಮೂಲಸೌಕರ್ಯಗಳನ್ನು ಹೊಂದಿದ್ದು, ಗೋವುಗಳಿಗೆ ಸೂಕ್ತ ಚಿಕಿತ್ಸೆ ಇಲ್ಲೇ ಸಿಗಲಿದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

    ಇದನ್ನೂ ಓದಿ:  ಲವ್​ ಜಿಹಾದ್ ಕಾನೂನು- ವಿವಾಹದ ಹಿಂದಿನ ಪಿತೂರಿ ತಡೆಯುವ ಉದ್ದೇಶದ್ದು ಬಿಜೆಪಿ ನಾಯಕ ವಿಜಯವರ್ಗೀಯ

    ಅಸಹಾಯಕ ಗೋವುಗಳ ಪಾಲನೆಗಾಗಿ ಗೋಶಾಲೆಯನ್ನು ಬಹಳ ವರ್ಷಗಳ ಹಿಂದೆಯೇ ಆರಂಭಿಸಲಾಗಿದೆ. ಈ ಗೋಶಾಲೆಯನ್ನು ನಿರ್ವಹಿಸುವುದಕ್ಕೆಂದೇ ಒಂದು ಸಮಿತಿ ಇದೆ. ಗೋಶಾಲೆಯಲ್ಲಿ ಸದ್ಯ 368 ಹಸು, ಹೋರಿ, ಕರುಗಳಿವೆ. (ಏಜೆನ್ಸೀಸ್)

    ಐಎಂಎ ಬಹುಕೋಟಿ ಹಗರಣ- ಮಾಜಿ ಸಚಿವ ರೋಷನ್ ಬೇಗ್ ನಿವಾಸದಲ್ಲಿ ಸಿಬಿಐ ಶೋಧ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts