More

    ಮಿಜೊರಾಂ ಸಂಸದರ ವಿರುದ್ಧದ ಕೇಸ್ ವಾಪಸ್​ : ಅಸ್ಸಾಂ ಸಿಎಂ

    ನವದೆಹಲಿ : ಭಾರತದ ಈಶಾನ್ಯ ಪ್ರದೇಶದ ಚೈತನ್ಯವನ್ನು ಜೀವಂತವಾಗಿಡಲು ‘ಗುಡ್​ವಿಲ್​ ಜೆಸ್ಚರ್’​ ಆಗಿ ಮಿಜೊರಾಮ್​ ಸಂಸದರ ಮೇಲೆ ದಾಖಲಿಸಲಾಗಿರುವ ಎಫ್​ಐಆರ್​ಅನ್ನು ವಾಪಸ್​ ಪಡೆಯಲಾಗುವುದು ಎಂದು ಅಸ್ಸಾಂ ಸಿಎಂ ಹಿಮಂತ ಬಿಸ್ವ ಸರ್ಮ ಇಂದು ಹೇಳಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಸರ್ಮ, ಆದಾಗ್ಯೂ ಜುಲೈ 26 ರಂದು ನಡೆದ ಉಭಯ ರಾಜ್ಯಗಳ ಗಡಿಕಲಹದ ಪ್ರಕರಣದಲ್ಲಿ ಇತರ ಆರೋಪಿಗಳಾದ ಪೊಲೀಸ್ ಅಧಿಕಾರಿಗಳ ವಿರುದ್ಧ ಕಾರ್ಯಾಚರಣೆ ನಡೆಸಲಾಗುವುದು ಎಂದಿದ್ದಾರೆ.

    ಜುಲೈ 26 ರ ಗಡಿ ಗಲಾಟೆಯಲ್ಲಿ ಅಸ್ಸಾಂನ ಆರು ಪೊಲೀಸ್​ ಸಿಬ್ಬಂದಿ ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಮಿಜೊರಾಮ್​ನ ಪೊಲೀಸ್​ ಅಧಿಕಾರಿಗಳ ವಿರುದ್ಧ ಮತ್ತು ಮಿಜೊ ನ್ಯಾಷನಲ್ ಫ್ರಂಟ್​ನ ರಾಜ್ಯಸಭಾ ಸಂಸದ ಕೆ.ವನ್​ಲಾಲ್​ವೆನ ಅವರ ವಿರುದ್ಧ ಎಫ್​ಐಆರ್​ ದಾಖಲಿಸಲಾಗಿತ್ತು. ಮತ್ತೊಂದೆಡೆ, ಮಿಜೊರಾಂ ಪೊಲೀಸರು ಅಸ್ಸಾಂ ಸಿಎಂ ಸರ್ಮ ಅವರ ಹೆಸರನ್ನೂ ಸೇರಿಸಿ ಹಲವರ ವಿರುದ್ಧ ಎಫ್​ಐಆರ್​ ದಾಖಲಿಸಿದ್ದರು.

    ಇದನ್ನೂ ಓದಿ: 40,134 ಹೊಸ ಕರೊನಾ ಪ್ರಕರಣ; ಅರ್ಧಕ್ಕೂ ಹೆಚ್ಚು ಕೇರಳದಲ್ಲೇ ಪತ್ತೆ!

    ಆದರೆ, ನಿನ್ನೆಯ ದಿನ ಮಿಜೊರಾಮ್​ ಸಿಎಂ ಜೊರಂತಂಗ ಅವರು, ಅಸ್ಸಾಂನೊಂದಿಗಿನ ಗಡಿ ವಿವಾದವನ್ನು ಮಾತುಕತೆಯ ಮೂಲಕ ಸೌಹಾರ್ದಯುತವಾಗಿ ಬಗೆಹರಿಸಲಾಗುವುದು ಎಂದು ಹೇಳಿಕೆ ನೀಡಿದ್ದರು. ಕೇಂದ್ರ ಗೃಹ ಸಚಿವ ಅಮಿತ್ ಷಾ ಮತ್ತು ಅಸ್ಸಾಂ ಸಿಎಂ ಸರ್ಮಾ ಅವರೊಂದಿಗೆ ದೂರವಾಣಿ ಮೂಲಕ ಚರ್ಚೆ ನಡೆಸಿದ್ದಲ್ಲದೆ, ಪರಿಸ್ಥಿತಿ ಹದಗೆಡುವಂತಹ ಯಾವುದೇ ಹೆಜ್ಜೆಗಳನ್ನು ತೆಗೆದುಕೊಳ್ಳಬಾರದೆಂದು ಮಿಜೋರಾಂ ಜನರಿಗೆ ಮನವಿ ಮಾಡಿದ್ದರು. ಇದರೊಂದಿಗೆ ಸರ್ಮ ಅವರ ವಿರುದ್ಧದ ಎಫ್​ಐಆರ್​ಅನ್ನು ಕೈಬಿಡಲಾಗುವುದು ಎಂದಿದ್ದರು.

    ಮಿಜೋರಾಂನ ಕೊಲಾಸಿಬ್ ಮತ್ತು ಅಸ್ಸಾಂನ ಕ್ಯಾಚಾರ್ ಜಿಲ್ಲೆಗಳ ನಡುವಿನ ಗಡಿಯಲ್ಲಿನ ಸಂಘರ್ಷ ವಲಯಕ್ಕೆ ಭೇಟಿ ನೀಡುವಾಗ ಉಭಯರಾಜ್ಯಗಳ ಅಧಿಕಾರಿಗಳು ಮತ್ತು ಪಡೆಗಳಿಗೆ ಶಸ್ತ್ರಾಸ್ತ್ರಗಳನ್ನು ಒಯ್ಯಲು ಅನುಮತಿಸುವುದಿಲ್ಲ ಎಂದು ಕೇಂದ್ರ ಎರಡೂ ರಾಜ್ಯಗಳಿಗೆ ಹೇಳಿದೆ. (ಏಜೆನ್ಸೀಸ್)

    ಕೇರಳ ಗಡಿಯಲ್ಲಿ ಚುರುಕುಗೊಂಡ ತಪಾಸಣೆ; ಕರೊನಾ ನೆಗೆಟಿವ್ ವರದಿ ಇದ್ದರಷ್ಟೇ ಪ್ರವೇಶ

    ಗ್ಯಾಸ್ಟ್ರಿಕ್ ಸಮಸ್ಯೆಗೆ, ಮಧುಮೇಹ ನಿಯಂತ್ರಣಕ್ಕೆ ಇದು ಬಲು ಉಪಯುಕ್ತ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts