More

    Asian Games 2023: ಸೆಮಿಫೈನಲ್​ನಲ್ಲಿ ಬಾಂಗ್ಲಾವನ್ನು ಬಗ್ಗುಬಡಿದ ಭಾರತ: ಪದಕ ಖಚಿತ, ಚಿನ್ನದ ಮೇಲೆ ಕಣ್ಣು

    ಹಾಂಗ್​ಝೌ: ಇಂದು (ಸೆ.24) ನಡೆದ ಏಷ್ಯನ್ ಗೇಮ್ಸ್ ಮಹಿಳಾ ಟಿ20 ಸೆಮಿಫೈನಲ್​ 2023 ಪಂದ್ಯದಲ್ಲಿ ಎದುರಾಳಿ ಬಾಂಗ್ಲಾದೇಶ ತಂಡವನ್ನು 8 ವಿಕೆಟ್​ಗಳಿಂದ ಮಣಿಸುವ ಮೂಲಕ ಭಾರತ ಮಹಿಳಾ ಕ್ರಿಕೆಟ್ ತಂಡ ದೇಶಕ್ಕೆ ಪದಕವನ್ನು ಖಚಿತಪಡಿಸಿದೆ.

    ಹ್ಯಾಂಗ್‌ಝೌನ ಪಿಂಗ್‌ಫೆಂಗ್ ಕ್ಯಾಂಪಸ್ ಕ್ರಿಕೆಟ್ ಫೀಲ್ಡ್​ನಲ್ಲಿ ಇಂದು ಬೆಳಗ್ಗೆ 6.30ಕ್ಕೆ ಆರಂಭವಾದ ಪಂದ್ಯದಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್​ ಆರಂಭಿಸಿದ ಬಾಂಗ್ಲಾ ಮಹಿಳಾ ಕ್ರಿಕೆಟ್​ ತಂಡ ಭಾರತದ ತಂಡದ ಬೌಲಿಂಗ್​ ದಾಳಿಗೆ ತತ್ತರಿಸಿ 17.5 ಓವರ್​ಗಳಲ್ಲಿ ಕೇವಲ 51 ರನ್​ಗೆ ಸರ್ವಪತನ ಕಂಡಿತು.

    ಭಾರತದ ಪರ ಮಾರಕ ಬೌಲಿಂಗ್​ ದಾಳಿ ಪ್ರದರ್ಶನ ಮಾಡಿದ ಪೂಜಾ ವಸ್ತ್ರಕರ್ ಪ್ರಮುಖ 4 ವಿಕೆಟ್​ ಕಬಳಿಸಿದರು. ಉಳಿದಂತೆ ತಿತಾಸ್​ ಸಾಧು, ಅಮನ್ಜೋತ್ ಕೌರ್, ಗಾಯಕ್ವಾಡ್ ಹಾಗೂ ದೇವಿಕಾ ವೈದ್ಯ ತಲಾ ಒಂದು ವಿಕೆಟ್​ ಪಡೆದರು.

    ಇದನ್ನೂ ಓದಿ: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿದ ನಿರ್ಮಾಪಕ ಎಂ.ಎನ್. ಸುರೇಶ್

    ಬಾಂಗ್ಲಾ ನೀಡಿದ 52 ರನ್​ಗಳ ಸುಲಭ ಗುರಿ ಬೆನ್ನತ್ತಿದ ಭಾರತ ಕೇವಲ 8.2 ಓವರ್​ಗಳಲ್ಲಿ 2 ವಿಕೆಟ್​ ನಷ್ಟಕ್ಕೆ 52 ರನ್​ ಕಲೆಹಾಕುವ ಮೂಲಕ ಸುಲಭ ಜಯ ಸಾಧಿಸಿತು. ಭಾರತದ ಪರ ಜೆಮಿಮಾ ರಾಡ್ರಿಗಸ್ (ಅಜೇಯ 20 ರನ್​), ಶಫಾಲಿ ವರ್ಮಾ (17) ರನ್​ ಗಳಿಸಿದರು. ನಾಯಕಿ ಸ್ಮೃತಿ ಮಂದಾನ 7 ನರ್​ ಕಲೆಹಾಕಿದರು.

    8 ವಿಕೆಟ್​ಗಳ ಜಯ ದಾಖಲಿಸುವುದರೊಂದಿಗೆ ಭಾರತ ಫೈನಲ್​ ಪ್ರವೇಶ ಮಾಡಿದ್ದು, ಏಷ್ಯನ್ ಗೇಮ್ಸ್​ನಲ್ಲಿ ಭಾರತಕ್ಕೆ ಪದಕ ಖಚಿತವಾಗಿದೆ. ಬಾಂಗ್ಲಾ ಈ ಹಿಂದೆ 2 ಬಾರಿ ಬೆಳ್ಳಿ ಗೆದ್ದಿದ್ದರೆ, ಕ್ರೀಡಾಕೂಟದಲ್ಲಿ ಇದೇ ಮೊದಲ ಬಾರಿಗೆ ಕಣಕ್ಕಿಳಿದಿರುವ ಭಾರತ ಕ್ರಿಕೆಟ್ ತಂಡ ಚಿನ್ನ ಪದಕ ಗೆಲ್ಲುವ ಫೇವರಿಟ್ ಎನಿಸಿದೆ.

    ಇಂದು ಮತ್ತೊಂದು ಸೆಮಿಫೈನಲ್‌ನಲ್ಲಿ ಪಾಕಿಸ್ತಾನ ಮತ್ತು ಶ್ರೀಲಂಕಾ ಮುಖಾಮುಖಿಯಾಗಲಿದ್ದು, ಇಲ್ಲಿ ಗೆಲುವು ಸಾಧಿಸುವ ತಂಡ ಫೈನಲ್​ನಲ್ಲಿ ಭಾರತವನ್ನು ಎದುರಿಸಲಿದೆ. (ಏಜೆನ್ಸೀಸ್​)

    ಪರಪ್ಪನ ಅಗ್ರಹಾರ ಜೈಲಿನಲ್ಲಿ ನಿದ್ದೆ ಇಲ್ಲದೆ ಚಿಂತೆಯಲ್ಲೇ ರಾತ್ರಿ ಕಳೆದ ಚೈತ್ರಾ ಕುಂದಾಪುರ!

    VIDEO| ಗಣಪತಿ ವಿಸರ್ಜನೆ ಕಾರ್ಯಕ್ರದಲ್ಲಿ ಬಾಯ್​ಫ್ರೆಂಡ್ ಜೊತೆ ಭರ್ಜರಿ ಸ್ಟೆಪ್ಸ್​ ಹಾಕಿದ ಜಾಹ್ನವಿ ಕಪೂರ್

    ಗ್ಯಾಸ್​ ಸೊರಿಕೆಯಾಗಿ ಸಿಲಿಂಡರ್ ಸ್ಫೋಟ; ಮೂವರು ಮೃತ್ಯು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts