More

    ಪುನೀತ್ ಮೊದಲ ವರ್ಷದ ಪುಣ್ಯತಿಥಿ; ಚಾಮುಂಡಿ ತಾಯಿಗೆ ಅಶ್ವಿನಿ ಪೂಜೆ

    ಬೆಂಗಳೂರು: ಇಂದು ನಟ ಪುನೀತ್ ರಾಜಕುಮಾರ್ ಅವರ ಮೊದಲ ವರ್ಷದ ಪುಣ್ಯತಿಥಿ. ರಾಜ್ಯದ ಮೂಲೆ ಮೂಲೆಗಳಿಂದ ಅಭಿಮಾನಿಗಳು ಕಂಠೀರವ ಸ್ಟುಡಿಯೋಗೆ ಆಗಮಿಸಲಿದ್ದಾರೆ. ಪುನೀತ್ ಸ್ಮಾರಕಕ್ಕೆ ನಮಿಸಿ, ಪುಷ್ಪನಮನ ಸಲ್ಲಿಸಲಿದ್ದಾರೆ. ಪುನೀತ್ ರಾಜಕುಮಾರ್ ಕುಟುಂಬದವರು, ಸಂಬಂಧಿಕರು ಬೆಳಗ್ಗೆ ಅಪು್ಪ ಸ್ಮಾರಕಕ್ಕೆ ಪೂಜೆ ಸಲ್ಲಿಸಲಿದ್ದಾರೆ. ಅಭಿಮಾನಿಗಳಿಂದ ರಕ್ತದಾನ, ನೇತ್ರದಾನ ಶಿಬಿರಗಳನ್ನು ಆಯೋಜಿಸಲಾಗಿದೆ. ಸುಮಾರು ಎರಡು ಲಕ್ಷಕ್ಕೂ ಹೆಚ್ಚು ಅಭಿಮಾನಿಗಳಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಕರ್ನಾಟಕ ಫಿಲಂಸ್ ಮ್ಯೂಸಿಕ್ ಅಸೋಸಿಯೇಷನ್ ಮತ್ತು ಚಲನಚಿತ್ರ ನಟ, ನಟಿಯರು ಹಾಗೂ ವಾದ್ಯಗೋಷ್ಠಿ ಕಲಾವಿದರಿಂದ ಸತತ 24 ತಾಸುಗಳ ಸಂಗೀತ ಕಾರ್ಯಕ್ರಮ ನಡೆಯಲಿದೆ. ಕಂಠೀರವ ಸ್ಟುಡಿಯೋದಲ್ಲಿ ಬರೋಬ್ಬರಿ 75 ಕಟೌಟ್​ಗಳನ್ನು ನಿರ್ವಿುಸಲಾಗಿದೆ. ಕಂಠೀರವ ಸ್ಟುಡಿಯೋ ಸುತ್ತಮುತ್ತ 500ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದ್ದು, ಬಿಗಿ ಬಂದೋಬಸ್ತ್ ಮಾಡಲಾಗಿದೆ.

    ಚಾಮುಂಡಿ ತಾಯಿಗೆ ಅಶ್ವಿನಿ ಪೂಜೆ

    ಮೈಸೂರು: ಅಶ್ವಿನಿ ಪುನೀತ್ ರಾಜ್​ಕುಮಾರ್ ಶುಕ್ರವಾರ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿದರು. ಶುಕ್ರವಾರ ‘ಗಂಧದ ಗುಡಿ’ ಚಿತ್ರ ಬಿಡುಗಡೆಯಾಗಿದ್ದು, ಇಂದು ಪುನೀತ್ ರಾಜಕುಮಾರ್​ರ ಮೊದಲ ವರ್ಷದ ಪುಣ್ಯತಿಥಿಯಿರುವುದರಿಂದ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ಚಾಮುಂಡಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದರು. ಚಾಮುಂಡೇಶ್ವರಿ ದೇವಿಯ ಮೇಲೆ ಅಪಾರ ಭಕ್ತಿ ಹೊಂದಿದ್ದ ಪುನೀತ್ ರಾಜಕುಮಾರ್ ಹಲವು ಬಾರಿ ಬರಿಗಾಲಿನಲ್ಲಿ ಮೆಟ್ಟಿಲುಗಳ ಮೂಲಕ ಚಾಮುಂಡಿ ಬೆಟ್ಟ ಹತ್ತಿದ್ದರು. ನಗರದಲ್ಲಿ ತಮ್ಮ ಚಿತ್ರಗಳ ಶೂಟಿಂಗ್ ವೇಳೆಯೂ ಚಾಮುಂಡಿ ಬೆಟ್ಟಕ್ಕೆ ಬಂದು ಪೂಜೆ ಸಲ್ಲಿಸುತ್ತಿದ್ದರು. ಚಾಮುಂಡಿ ದೇವಿಯ ದರ್ಶನದ ಬಳಿಕ ಅಶ್ವಿನಿ ಪುನೀತ್ ಶ್ರೀರಂಗಪಟ್ಟಣದಲ್ಲಿ ನಿಮಿಷಾಂಬ ದೇವಿಗೂ ಪೂಜೆ ಸಲ್ಲಿಸಿದರು.

    ಟ್ವಿಟರ್​ಗೆ ಎಲಾನ್ ಮಸ್ಕ್ ಮಾಲೀಕತ್ವ; ಮರಳಿ ಸಿಗುತ್ತಾ ನಟಿ ಕಂಗನಾಗೆ ಟ್ವಿಟರ್ ಅಕೌಂಟ್?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts