More

    ಮೂರು ವಿಶೇಷ ವಿಮಾನ, ಐಷಾರಾಮಿ ರೆಸಾರ್ಟ್​, ಪಂಚಾತಾರಾ ಹೋಟೆಲ್​; ಇವರಿಗೆ ಇನ್ನೂ 15 ದಿನ ರಾಜವೈಭೋಗ

    ಜೈಪುರ: ರಾಜಕೀಯ ಬಿಕ್ಕಟ್ಟು ಬಂತೆಂದರೆ ಶಾಸಕರಿಗೆ ನಿಜಕ್ಕೂ ಹಬ್ಬವೇ ಸರಿ. ಬಂಡಾಯವೇ ಆಗಿರಲಿ; ಸರ್ಕಾರದ ಪರವೇ ಇರಲಿ. ಇವರಿಗಂತೂ ರಾಜವೈಭೋಗ ತಪ್ಪಿದ್ದಲ್ಲ.

    ಜುಲೈ 13ರಿಂದ ರಾಜಸ್ಥಾನ ಶಾಸಕರು ರೆಸಾರ್ಟ್​, ಪಂಚತಾರಾ ಹೋಟೇಲ್​ಗಳಲ್ಲಿಯೇ ಬೀಡು ಬಿಟ್ಟಿದ್ದಾರೆ. ಗೆಹ್ಲೋಟ್​ ಪರ ಶಾಸಕರು ಜೈಪುರ ಹೊರವಲಯದಲ್ಲಿರುವ ಫೇರ್​ಮೌಂಟ್​ ಹೋಟೆಲ್​ನಲ್ಲಿದ್ದಾರೆ. ಅತ್ತ ಸಚಿನ್​ ಪೈಲಟ್​ ಬಣದವರು ಹರಿಯಾಣದ ಮಾನೇಸರ್​ನಲ್ಲಿ ಸಕಲ ಐಷಾರಾಮ ಅನುಭವಿಸುತ್ತಿದ್ದಾರೆ.

    ಇದನ್ನೂ ಓದಿ; ಸುಶಾಂತ್​ ಸಿಂಗ್​ ರಜಪೂತ್​ ಆತ್ಮಹತ್ಯೆ: ಐಷಾರಾಮಿ ಕಾರುಗಳಲ್ಲಿ ಬಿಹಾರ ಪೊಲೀಸರ ತಿರುಗಾಟ

    ಇದೀಗ, ಆಗಸ್ಟ್​ 14ಕ್ಕೆ ವಿಧಾನಸಭೆ ಅಧಿವೇಶನ ಆರಂಭವಾಗಲಿದೆ. ಹೀಗಾಗಿ ಅಲ್ಲಿಯವರೆಗೂ ಅವರನ್ನು ಕಾದಿಡುವುದು ಭಾರಿ ಸವಾಲಿನ ಕೆಲಸವೇ ಅಗಿದೆ. ಗೆಹ್ಲೋಟ್​ ಬೆಂಬಲಿಗರನ್ನು ಜೈಪುರದಿಂದ 550 ಕಿ.ಮೀ. ದೂರದಲ್ಲಿರುವ ಜೈಸಲ್ಮೇರ್​ನ ಮಾರಿಯಟ್​ ರೆಸಾರ್ಟ್​ ಹಾಗೂ ಸೂರ್ಯಗಢ್​ ಹೋಟೆಲ್​ಗೆ ಸ್ಥಳಾಂತರಿಸಲಾಗಿದೆ.

    ಶಾಸಕರನ್ನು ಕರೆದೊಯ್ಯಲು ಮೂರು ವಿಶೇಷ ವಿಮಾನಗಳನ್ನು ಬುಕ್​ ಮಾಡಲಾಗಿತ್ತು. ಜೈಸಲ್ಮೇರ್​ನ ಎರಡೂ ವಾಸ್ತವ್ಯಗಳು ಕೂಡ ಐಷಾರಾಮಿ ಸೌಲಭ್ಯ ಹೊಂದಿವೆ. ಪ್ರತಿ ದಿನದ ಬಾಡಿಗೆ 10,000 ರೂ.ಗಳಿಂದ ಹಲವು ಲಕ್ಷ ರೂ. ಬಾಡಿಗೆಯ ಕೊಠಡಿಗಳು ಇಲ್ಲಿವೆ.

    ಇದನ್ನೂ ಓದಿ; ರಾಜಸ್ಥಾನದಲ್ಲಿ ‘ಕುದುರೆ ವ್ಯಾಪಾರ’ಕ್ಕೆ ಅನ್​ಲಿಮಿಟೆಡ್​ ಆಫರ್​; ವಿಧಾನಸಭೆ ಅಧಿವೇಶನ ನಿಗದಿ ಬಳಿಕ ಬೆಲೆಯಲ್ಲಿ ಭಾರಿ ಏರಿಕೆ

    ಜೈಪುರ ಹೋಟೆಲ್​ ಗೆಹ್ಲೋಟ್​ ಆಪ್ತರಿಗೆ ಸೇರಿದ್ದು ಎನ್ನಲಾಗಿತ್ತು. ಇಲ್ಲಿಯೂ ಕೂಡ ಸರ್ಕಾರದ ಪರ ಇರುವ ಉದ್ಯಮಿಯೊಬ್ಬರು ಶಾಸಕರ ವಾಸ್ತವ್ಯದ ಉಸ್ತುವಾರಿ ವಹಿಸಿಕೊಂಡಿದ್ದಾರೆ ಎಂದೇ ಹೇಳಲಾಗಿದೆ.

    ಕರೊನಾ ಚಿಕಿತ್ಸೆಗೆ ಬೆಡ್​ಗಳಿವೆ ; ರೋಗಿಗಳೇ ಇಲ್ಲ; ಒಂದೇ ತಿಂಗಳಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಏನಿದು ಬದಲಾವಣೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts