More

    ಕೃತಕ ಬಣ್ಣ ನಿಷೇಧದ ಎಫೆಕ್ಟ್; ಬೆಂಗಳೂರಿನಲ್ಲಿ ಗೋಬಿ ಮಂಚೂರಿ ಮಾರಾಟ ಶೇ.80 ಕುಸಿತ

    ಬೆಂಗಳೂರು: ಮಾರ್ಚ್ 11 ರಂದು ಕರ್ನಾಟಕ ಸರ್ಕಾರವು ರಾಜ್ಯದಲ್ಲಿ ಗೋಬಿ ಮಂಚೂರಿ ಮತ್ತು ಕಾಟನ್ ಕ್ಯಾಂಡಿಯಲ್ಲಿ ಕಂಡುಬರುವ ಕೃತಕ ಆಹಾರ ಬಣ್ಣಗಳನ್ನು ಬ್ಯಾನ್ ಮಾಡಿ ಆದೇಶ ಮಾಡಿತ್ತು. ಈ ಆದೇಶದ ಪರಿಣಾಮ ಬೆಂಗಳೂರಿನಲ್ಲಿ ಶೇ.80ರಷ್ಟು ಗೋಬಿ ಮಂಚೂರಿ ಮಾರಾಟದಲ್ಲಿ ಕುಸಿತ ಕಂಡಿದೆ. ವಿಶೇಷವಾಗಿ ರೋಡೋಮೈನ್-ಬಿ ಎಂಬ ರಾಸಾಯನಿಕ ಹೊಂದಿದ ಕೃತಕ ಬಣ್ಣಗಳನ್ನು ಬಳಸಿ ಮಾಡುವ ಆಹಾರದಿಂದ ಆರೋಗ್ಯದ ಮೇಲೆ ಉಂಟಾಗಬಹುದಾದ ಸಂಭಾವ್ಯ ದುಷ್ಪರಿಣಾಮಗಳ ಕಾರಣ ನೀಡಿ ಆರೋಗ್ಯ ಇಲಾಖೆಯು ಈ ಆದೇಶವನ್ನು ಹೊರಡಿಸಿತ್ತು.

    ಕೃತಕ ಬಣ್ಣಗಳ ಬಳಕೆಯ ಮೇಲಿನ ನಿಷೇಧವು ರಾಜಧಾನಿ ಬೆಂಗಳೂರಿನಲ್ಲಿ ನಿರೀಕ್ಷೆಗೂ ಮೀರಿದ ಪರಿಣಾಮ ಬೀರಿದೆ. ಸರ್ಕಾರ ಆದೇಶ ಹೊರಡಿಸಿದ ನಂತರ ಬೆಂಗಳೂರಿನಲ್ಲಿ ಗೋಬಿ ಮಂಚೂರಿಯನ್ ಮಾರಾಟ ವ್ಯವಹಾರವು ಶೇ.80 ರಷ್ಟು ಕುಸಿತ ಕಂಡಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

    ಗೋಬಿ ಮಂಚೂರಿಯನ್ ವ್ಯಾಪಾರಿಗಳು ಹೇಳುವ ಪ್ರಕಾರ ಸರ್ಕಾರದ ಆದೇಶದ ನಂತರ ಗ್ರಾಹಕರು ನಿಗದಿತವಾಗಿ ಕೃತಕ ಬಣ್ಣರಹಿತ ಗೋಬಿ ಮಂಚೂರಿಗೆ ಬೇಡಿಕೆ ಇಡುತ್ತಿದ್ದಾರೆ. ಜೊತೆಗೆ ಗೋಬಿ ಮಂಚೂರಿ ಸೇವಿಸುವವರ ಸಂಖ್ಯೆ ಗಮನಾರ್ಹವಾಗಿ ಕಡಿಮೆಯಾಗಿದ್ದು, ಇದರಿಂದ ವಹಿವಾಟು ಕಡಿಮೆಯಾಗಿದೆ.

    “ಸರ್ಕಾರದ ನಿರ್ದೇಶನದಂತೆ ಬಣ್ಣವಿಲ್ಲದಿರುವ ನೈಸರ್ಗಿಕ ಗೋಬಿಯನ್ನು ತಯಾರಿಸಿದರೂ ತಿನ್ನಲು ಯಾರೂ ಮುಂದೆ ಬರುತ್ತಿಲ್ಲ. ಈ ಹಿಂದೆ ದಿನಕ್ಕೆ 10 ಸಾವಿರ ವ್ಯಾಪಾರ ಮಾಡುತ್ತಿದ್ದೆವು ಆದರೆ ಈಗ ದಿನಕ್ಕೆ 5 ಸಾವಿರವು ವ್ಯಾಪಾರವಾಗುತ್ತಿಲ್ಲ. ಹಾಕಿದ ಬಂಡವಾಳವೂ ಬರುತ್ತಿಲ್ಲ. ಇದರಿಂದ ಜೀವನ ನಡೆಸುವುದು ಕಷ್ಟವಾಗಿದೆ”

    -ವೈ.ರಾಜೇಶ್, ಗೋಬಿ ವ್ಯಾಪಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts