More

    ಅರುಣೋದಯ ವಿಶೇಷ ಅಗತ್ಯವುಳ್ಳ ಮಕ್ಕಳ ಶಾಲೆಯಲ್ಲಿ ಪಾಲಕರ ಸಭೆ, ಮಕ್ಕಳ ಕ್ಷೇಮಾಭಿವೃದ್ಧಿಯೊಂದಿಗೆ ಶಿಕ್ಷಣಕ್ಕೆ ಒತ್ತು- ತುಕಾರಾಮಸಿಂಗ್ ಜಮಾದಾರ

    ಗದಗ: ವಿಶೇಷ ಅಗತ್ಯವುಳ್ಳ ಮಕ್ಕಳ ಕ್ಷೇಮಾಭಿವೃದ್ಧಿಯೊಂದಿಗೆ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುವಲ್ಲಿ ಅರುಣೋದಯ ಶಾಲೆ ಬದ್ಧತೆಯಿಂದ ಕಾರ್ಯ ನಿರ್ವಹಿಸುತ್ತಿದೆ ಎಂದು ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ತುಕಾರಾಮಸಿಂಗ್ ಜಮಾದಾರ ಹೇಳಿದರು.
    ಅವರು ಮಂಗಳವಾರ ನಗರದ ಅರುಣೋದಯ ವಿಶೇಷ ಅಗತ್ಯವುಳ್ಳ ಮಕ್ಕಳ ಶಾಲೆಯಲ್ಲಿ ಪಾಲಕರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
    ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಅಗತ್ಯವಿರುವ ಆರೋಗ್ಯ ಕಾಳಜಿ, ಅವರಿಗೆ ಮನವರಿಕೆಯಾಗುವ ರೀತಿಯಲ್ಲಿ ಬೋಧನೆ, ದೈಹಿಕ ಚಟುವಟಿಕೆಗಳತ್ತ ಗಮನ ನೀಡಲಾಗುತ್ತಿದೆ. ಅನುಭವಿಕ ಶಿಕ್ಷಕ ಶಿಕ್ಷಕಿಯರಿಂದ ಹಾಗೂ ತಜ್ಞ ವೈದ್ಯರಿಂದ ಆರೋಗ್ಯ ತಪಾಸಣೆ, ಫಿಜಿಯೋಥೇರಪಿ ಮುಂತಾದವುಗಳ ಬಗ್ಗೆ ಕಾಳಜಿ ವಹಿಸಲಾಗುತ್ತಿದ್ದು ಇದಕ್ಕೆ ಮಕ್ಕಳ ಪಾಲಕ ಪೋಷಕರೂ ಸಹಕಾರ ಸ್ಪಂದನೆ ಅಗತ್ಯ ಎಂದರು.
    ಶಾಲೆಯ ಶಿಕ್ಷಕ ಸಿಬ್ಬಂದಿ ನಿತ್ಯ ಮಕ್ಕಳ ಪಾಲಕ ಪೋಷಕರೊಂದಿಗೆ ಸಂಪರ್ಕದಲ್ಲಿದ್ದು ಕೆಲವೊಂದಿಷ್ಟು ಮಾರ್ಪಾಡುಗಳನ್ನು ಮಾಡಿಕೊಂಡು ಬಂದಿದ್ದು ವಿಶೇಷ ಅಗತ್ಯವುಳ್ಳ ಮಕ್ಕಳ ಸೇವೆ ಮಾಡುವುದೆಂದರೆ ದೇವರ ಸೇವೆ ಮಾಡಿದಂತೆ ಎಂಬ ಹಿರಿದಾದ ಧ್ಯೇಯ ಇಟ್ಟುಕೊಂಡು ಸಂಸ್ಥೆ ಕಾರ್ಯ ನಿರ್ವಹಿಸುತ್ತಿದೆ ಎಂದರು.
    ಫಿಜಿಯೋಥೇರಪಿ ತಜ್ಞರಾದ ಡಾ. ದಾನೇಶ್ವರಿ ಕೊಕ್ಕಳಕಿ ಅವರು ಮಾತನಾಡಿ ಅಗತ್ಯತೆಯುಳ್ಳ ಮಕ್ಕಳಿಗೆ ಸಕಾಲಕ್ಕೆ ಫಿಜಿಯೋಥೇರಪಿ ಮಾಡಬೇಕು ಈ ಬಗ್ಗೆ ಪಾಲಕ ಪೋಷಕರು ಹೆಚ್ಚಿನ ಮಹತ್ವ ನೀಡಬೇಕೆಂದರು.
    ಆಪ್ತ ಸಮಾಲೋಚಕರಾದ ಡಾ.ನಿಶ್ಚಿತಾ ಬಿ.ಎಲ್ ಮಾತನಾಡಿ ವಿಶೇಷ ಅಗತ್ಯವುಳ್ಳ ಮಕ್ಕಳಲ್ಲಿ ಕೆಲವು ಮಕ್ಕಳಿಗೆ ಶಿಕ್ಷಕರು, ಪಾಲಕರನ್ನು ಒಳಗೊಂಡು ಆಪ್ತ ಸಮಾಲೋಚನೆ ಅಗತ್ಯ ಇರುತ್ತದೆ, ಇದು ಮಕ್ಕಳ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.
    ಶಾಲಾ ಮುಖ್ಯೋಪಾಧ್ಯಾಯ ಮಲ್ಲಪ್ಪ ಹಕ್ಕಿ ಅವರು ಮಾತನಾಡಿ ಫಿಜಿಯೋಥೇರಫಿಸ್ಟ ಹಾಗೂ ಆಪ್ತ ಸಮಾಲೋಚಕರು ಪ್ರತಿ ತಿಂಗಳ ೨ ಮತ್ತು ೪ನೇ ಮಂಗಳವಾರ ಶಾಲೆಗೆ ಭೇಟಿ ನೀಡುವರು ಅಗತ್ಯವುಳ್ಳವರು ಅವರ ಸೇವೆಯನ್ನು ಪಡೆಯಬಹುದು ಎಂದರು.
    ಸಭೆಯಲ್ಲಿ ಪಾಲಕ ಪೋಷಕರು ಸಲಹೆ ಸೂಚನೆ ನೀಡಿದರು. ವೇದಿಕೆಯ ಮೇಲೆ ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿ ಜಯರಾಜ ಮುಳಗುಂದ ಉಪಸ್ಥಿತರಿದ್ದರು. ಮಲ್ಲಿಕಾರ್ಜುನ ನಾಗಲಾಪೂರ ಸೇರಿದಂತೆ ಶಾಲೆಯ ಶಿಕ್ಷಕ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts