More

    ವಿವಿಧ ಬೇಡಿಕೆ ಈಡೇರಿಸಲು ಕಲಾವಿದರ ಮನವಿ

    ಹಾನಗಲ್ಲ: ತಾಲೂಕಿನ ಕಲಾವಿದರ ಸಂಘದ ಪದಾಧಿಕಾರಿಗಳು ವಿವಿಧ ಬೇಡಿಕೆಗಳಿಗಾಗಿ ಆಗ್ರಹಿಸಿ ಸಂಘದ ತಾಲೂಕು ಅಧ್ಯಕ್ಷ ಎಸ್.ಎಸ್. ಮೂರಮಟ್ಟಿ ನೇತೃತ್ವದಲ್ಲಿ ತಹಸೀಲ್ದಾರ್ ಸಿ.ಎಸ್. ಭಂಗಿ ಅವರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

    ಸಾಂಸ್ಕೃತಿಕ ಕಲೆಗಳಾದ ಸಂಗೀತ, ತಬಲಾ, ದೊಡ್ಡಾಟ, ಸಣ್ಣಾಟ, ರಂಗಭೂಮಿ, ಡೊಳ್ಳುಕುಣಿತ, ಗೀಗೀ ಪದ, ಸೋಬಾನೆ ಪದ ಸೇರಿದಂತೆ ಗ್ರಾಮೀಣ ಸಂಸ್ಕೃತಿಗಳನ್ನು ಹಲವು ದಶಕಗಳಿಂದ ಜೀವಂತವಾಗಿ ಉಳಿಸಿಕೊಂಡು ಬರಲಾಗಿದೆ. ಆದರೆ, ಇತ್ತೀಚೆಗೆ ಸರ್ಕಾರ ಕಲಾವಿದರಿಗೆ ವೇದಿಕೆ, ಅವಕಾಶಗಳನ್ನು ಸಮರ್ಪಕವಾಗಿ ನೀಡದಿರುವುದರಿಂದ ಕಲಾವಿದರ ಪ್ರತಿಭೆಗಳನ್ನು ಪ್ರದರ್ಶಿಸಲು ಹಿನ್ನಡೆಯಾಗುತ್ತಿದೆ.

    ಸರ್ಕಾರ ನೀಡುತ್ತಿರುವ ಮಾಶಾಸನ ಇಂದಿನ ಬೆಲೆ ಏರಿಕೆ ಕಾಲದಲ್ಲಿ ಜೀವನ ನಿರ್ವಹಣೆಗೆ ಸಾಲದಂತಾಗಿದೆ. ಇದನ್ನು 5 ಸಾವಿರ ರೂ.ಗಳಿಗೆ ಏರಿಸಬೇಕು. ಕಲಾವಿದರಿಗೆ ಮಾಸಾಶನ ನೀಡುವುದಕ್ಕೆ 55 ವರ್ಷಗಳ ಮಿತಿ ನಿಗದಿಪಡಿಸಿದೆ. ಅದನ್ನು 45 ವರ್ಷಗಳಿಗೆ ಇಳಿಸಿ ಆದೇಶಿಸಬೇಕು. ಕಲಾವಿದರಿಗೆ ವಾದ್ಯ ಪರಿಕರಗಳ ಕೊರತೆಯಿದ್ದು, ಅವುಗಳನ್ನು ಸರ್ಕಾರದಿಂದ ವಿಶೇಷ ಅನುದಾನದಲ್ಲಿ ಕೊಡುಗೆಯಾಗಿ ನೀಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

    ಜಿಲ್ಲಾಧ್ಯಕ್ಷ ಡಾ.ತಿಪ್ಪೇಸ್ವಾಮಿ ಹೊಸಮನಿ, ಕೃಷ್ಟಾಚಾರ್ಯ ಉಪಾಧ್ಯಾಯ, ದೇವೇಂದ್ರಪ್ಪ ಮಂಟೂರ, ನಾಗನಗೌಡ್ರ ಪಾಟೀಲ, ಗುಡ್ಡಪ್ಪ ಬಂಗೇರ, ಸುಭಾಸ ಕುರುಬರ, ಸುಭಾಸ ಕಮ್ಮಾರ, ಯಲ್ಲಪ್ಪ ಮಂಟೂರ, ಜಯಮ್ಮ ಮಳ್ಳಣ್ಣನವರ, ನೀಲಮ್ಮ ಗೊಂದಿ, ಬಸವರಾಜ ಕೋಡಿಹಳ್ಳಿ, ನಾಗಪ್ಪ ಮೆಳ್ಳಿಹಳ್ಳಿ, ಪ್ರೇಮಾ ಕ್ಯಾಸನೂರ, ಗಂಗವ್ವ ಬಣಕಾರ, ಪುಟ್ಟವ್ವ ಹಿರೇಮಠ, ಶಾರದಾ ಬಡಿಗೇರ, ರತ್ನವ್ವ ಕೋಟಿ, ರೇಣುಕಾ ಆಲದಕಟ್ಟಿ, ಹನುಮಂತಪ್ಪ ಬುಳ್ಳಣ್ಣನವರ ಇತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts