More

    ಜಕಣಾಚಾರಿ ಸರ್ವಕಾಲಕ್ಕೂ ಚಿರಸ್ಥಾಯಿ

    ಶಿವಮೊಗ್ಗ: ಶಿಲೆಯಲ್ಲಿ ಕಲೆಯನ್ನು ಅರಳಿಸುವ ಮೂಲಕ ಜಗದ್ವಿಖ್ಯಾತನಾದ ಅಪ್ರತಿಮ ಕಲಾವಿದ ಜಕಣಾಚಾರಿ ಸರ್ವಕಾಲಕ್ಕೂ ಚಿರಸ್ಥಾಯಿಯಾಗಿ ಉಳಿದಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಜಿ.ಅನುರಾಧಾ ಅಭಿಪ್ರಾಯಪಟ್ಟರು.

    ಜಿಲ್ಲಾಡಳಿತ ಹಾಗೂ ಜಿಲ್ಲಾ ವಿಶ್ವಕರ್ಮ ಸಮಾಜದಿಂದ ನಗರದ ಕುವೆಂಪು ರಂಗಮಂದಿರದಲ್ಲಿ ಶುಕ್ರವಾರ ಏರ್ಪಡಿಸಿದ್ದ ಅಮರಶಿಲ್ಪಿ ಜಕಣಾಚಾರಿ ಅವರ ಮೊದಲ ಸಂಸ್ಮರಣಾ ಜಯಂತ್ಯುತ್ಸವದಲ್ಲಿ ಪಾಲ್ಗೊಂಡು ಮಾತನಾಡಿ, ಕಲ್ಯಾಣಿ ಚಾಲುಕ್ಯ ಮತ್ತು ಹೊಯ್ಸಳರ ಶೈಲಿಯ ದೇಗುಲಗಳನ್ನು ಬೇಲೂರು ಮತ್ತು ಹಳೇಬೀಡುಗಳಲ್ಲಿ ಅತ್ಯಂತ ನಾಜೂಕಾದ ಕುಸುರಿ ಕೆತ್ತನೆಗಳಿಂದ ನಿರ್ವಿುಸಿರುವುದು ಜಕಣಾಚಾರಿ ಪ್ರತಿಭೆಗೆ ನಿದರ್ಶನ ಎಂದರು.

    ಸರ್ಕಾರ ಶಿಲ್ಪಿ ಜಕಣಾಚಾರಿ ಹೆಸರಿನಲ್ಲಿ ಶಿಲ್ಪಕಲೆಗೆ ಅತಿ ಹೆಚ್ಚಿನ ಕೊಡುಗೆ ನೀಡಿದ ಕಲೆಗಾರನಿಗೆ ಜಕಣಾಚಾರಿ ಪ್ರಶಸ್ತಿ ನೀಡಿ ಗೌರವಿಸುತ್ತಿದೆ. ಶಿಲ್ಪಿ ಎಂದರೆ ಪ್ರಮುಖವಾಗಿ ರೂಪ ನೀಡುವ, ಜನರಲ್ಲಿ ಶ್ರದ್ಧೆ, ಭಕ್ತಿಭಾವ ಮೂಡಿಸುವ ಕಲಾಕೃತಿ ನಿರ್ವಿುಸುವವನು ಎಂದರ್ಥ. ಜಕಣಾಚಾರಿ ಈ ವಿಷಯದಲ್ಲಿ ಅಂಗ್ರಪಂಕ್ತಿಯಲ್ಲಿ ಕಾಣಿಸಿಕೊಳ್ಳುತ್ತಾರೆ ಎಂದು ಹೇಳಿದರು.

    ಪಾಲಿಕೆ ಸದಸ್ಯರಾದ ಕಲ್ಪನಾ ರಮೇಶ್, ಆರತಿ ಪ್ರಕಾಶ್, ಪಾಲಿಕೆ ನಾಮನಿರ್ದೇಶಿತ ಸದಸ್ಯೆ ಸೀತಾಲಕ್ಷ್ಮೀ, ವಿಶ್ವಕರ್ಮ ಸಮಾಜದ ಪ್ರಮುಖರಾದ ಎಸ್.ರಮೇಶ್, ವೀರಭದ್ರಾಚಾರ್, ಸತೀಶ್, ಪ್ರದೀಪ್ ನಾಗರಾಜಾಚಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಚ್.ಉಮೇಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts