More

    ಕಲಾ ಶಿಬಿರಗಳು ಮಕ್ಕಳ ಪ್ರತಿಭಾನ್ವೇಷಣೆಗೆ ಪೂರಕ

    ಸಿಂದಗಿ: ವಿಭಿನ್ನ ಚಟುವಟಿಕೆಗಳ ಮೂಲಕ ರಂಗ ಕಲಾಸಕ್ತಿ ಬೆಳೆಸಲು, ಮಕ್ಕಳಲ್ಲಿನ ಪ್ರತಿಭಾನ್ವೇಷಣೆಗೆ ಕಲಾ ಶಿಬಿರಗಳು ಪೂರಕವಾಗಿವೆ ಎಂದು ಗುರುದೇವಾಶ್ರಮದ ಶಾಂತಗಂಗಾಧರ ಸ್ವಾಮೀಜಿ ಹೇಳಿದರು.

    ಮಾಧ್ಯಮರಂಗ ಫೌಂಡೇಷನ್ ಭಾನುವಾರ ಹಮ್ಮಿಕೊಂಡಿದ್ದ ಮೂರು ವಾರದ ಬೇಸಿಗೆ ಕಲಾ ಮೇಳದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿ, ಮಕ್ಕಳಲ್ಲಿ ಪಾಲಕರು ಕೇವಲ ಓದಿನತ್ತ ಹೊರಳಿಸದೇ, ಅವರಲ್ಲಿನ ನೈಜ ಚಟುವಟಿಕೆ, ಆಸಕ್ತಿಗಳನ್ನು ಗಮನಿಸಿ, ಕಲಾ ಶಿಬಿರಗಳಿಗೆ ಸೇರಿಸಿ ಅವರ ಭವಿಷ್ಯ ಸೃಜಿಸಬೇಕು ಎಂದರು.

    ರಾಗರಂಜಿನಿ ಸಂಗೀತ ಅಕಾಡೆಮಿ ಮುಖ್ಯಸ್ಥ ಡಾ. ಪ್ರಕಾಶ, ಮಾಧ್ಯಮರಂಗದ ಅಧ್ಯಕ್ಷ, ಪತ್ರಕರ್ತ ನಾಗೇಶ ತಳವಾರ ಮಾತನಾಡಿದರು.

    ಶಿಬಿರದಲ್ಲಿ ಅಸ್ಮಿತಾ, ತೇಜಶ್ವಿನಿ, ಅನುಶ್ರೀ, ಶ್ರಾವಣಿ, ವೈಷ್ಣವಿ, ಶಿವಾನಂದ, ಅಖಿಲಕುಮಾರ, ಸಾತ್ವಿಕ, ಶಂಶಾಕ ಹಾಗೂ ಪುಟಾಣಿಗಳು ಹಾಡು, ನೃತ್ಯ ಹಾಗೂ ಕಿರುನಾಟಕ ಪ್ರದರ್ಶಿಸಿದರು.

    ಶಿಕ್ಷಕ ಗುರುನಾಥ ಅರಳಗುಂಡಗಿ, ಬಸವರಾಜ ಭೂತಿ, ಪತ್ರಕರ್ತ ಸಂಗಮೇಶ ಡಿಗ್ಗಿ, ವಿಜು ಪತ್ತಾರ, ಫೌಂಡೇಷನ್ ಸದಸ್ಯ ಮಲ್ಲು ಹಿರೊಳ್ಳಿ, ರೇಣುಕಾ, ಸುದೀಪ ಇತರರಿದ್ದರು. ಶಿಬಿರಾರ್ಥಿ ಸಹನಾ ನಿರೂಪಿಸಿದರು. ಶ್ರೇಯಸ್ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts