ಶಿವಮೊಗ್ಗ: ಉಡುಪಿಯ ಕಾಲೇಜಿನ ಶೌಚಗೃಹದಲ್ಲಿ ವಿದ್ಯಾರ್ಥಿನಿಯರ ಅಶ್ಲೀಲ ದೃಶ್ಯಗಳನ್ನು ಗುಪ್ತ ಕ್ಯಾಮರಾ ಮೂಲಕ ಸೆರೆ ಹಿಡಿದವರನ್ನು ಬಂಽಸಬೇಕು ಎಂದು ಆಗ್ರಹಿಸಿ ಬಿಜೆಪಿ ನಗರದ ಘಟಕದ ಕಾರ್ಯಕರ್ತರು ಗುರುವಾರ ಜಿಲ್ಲಾಽಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಉಡುಪಿಯಲ್ಲಿ ಆಗಿರುವ ಘಟನೆಯ ಬಗ್ಗೆ ಎ-ïಐಆರ್ ದಾಖಲಾಗಿದ್ದು ಆರೋಪಿಗಳನ್ನು ತಕ್ಷಣವೇ ಬಂಽಸಬೇಕು. ಇದರಲ್ಲಿ ಅನ್ಯಕೋಮಿನ ವಿದ್ಯಾರ್ಥಿನಿಯರೇ ಆರೋಪಿಗಳಾಗಿರುವ ಕಾರಣ ಪ್ರಕರಣ ಮುಚ್ಚಿ ಹಾಕುವ ಪ್ರಯತ್ನ ನಡೆದಿದೆ. ಈ ಬಗ್ಗೆ ಧ್ವನಿ ಎತ್ತಿದ ಮಹಿಳಾ ಹಕ್ಕುಗಳ ಹೋರಾಟಗಾರ್ತಿ ರಶ್ಮಿ ಸಾಮಂತ್ ಅವರ ಮನೆಗೆ ಪೊಲೀಸರನ್ನು ಕಳುಹಿಸಿ ಬೆದರಿಸುವ ಪ್ರಯತ್ನ ನಡೆದಿದೆ ಎಂದು ದೂರಿದರು. ಪ್ರಕರಣಕ್ಕೆ ಜಿಹಾದಿ ನಂಟು ಇರಬಹುದೆಂದು ಅನುಮಾನ ವ್ಯಕ್ತವಾಗುತ್ತಿದೆ. ಈ ಕೃತ್ಯದಿಂದ ಹಿಂದೂ ಯುವತಿಯರು ಶೋಷಣೆಗೆ ಒಳಗಾಗುತ್ತಿದ್ದಾರೆ. ಇಂತಹ ಕೃತ್ಯಗಳಿಂದ ಮಹಿಳಾ ಸಂಕುಲವೇ ತಲೆ ತಗ್ಗಿಸುವಂತಾಗಿದೆ. ಈ ವಿಡಿಯೋಗಳ ಒಳಸಂಚು ಏನೆಂಬುದರ ಬಗ್ಗೆ ಸಮಗ್ರವಾಗಿ ತನಿಖೆ ಆಗಬೇಕು ಎಂದು ಒತ್ತಾಯಿಸಿದರು.
ರಾಜ್ಯ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಮಂಜುಳಾ ಮಾತನಾಡಿ, ರಾಜ್ಯದಲ್ಲಿ ಮತ್ತೆ ಕ್ರಿಯಾಶೀಲವಾಗಿರುವ ಜಿಹಾದಿ ಶಕ್ತಿಗಳನ್ನು ನಿಷ್ಕಿçಯಗೊಳಿಸಬೇಕಿದೆ. ಶೌಚಗೃಹದÀಲ್ಲಿ ಕ್ಯಾಮರಾ ಇಟ್ಟು ಚಿತ್ರೀಕರಣಗೊಳಿಸಿ ವಾಟ್ಸ್ಆ್ಯಪ್‌ನಲ್ಲಿ ಹಂಚಿರುವುದು ಗಂಭೀರ ವಿಷಯವಾಗಿದೆ. ಶೌಚಗೃಹದಲ್ಲಿ ಮೊಬೈಲï ಇಟ್ಟು ಚಿತ್ರೀಕರಿಸಿದ ಬಗ್ಗೆ ಗೃಹ ಸಚಿವ ಡಾ. ಜಿ.ಪರಮೇಶ್ವರ್ ಅವರು ಅಸಡ್ಡೆಯಾಗಿ ಹೇಳಿಕೆ ನೀಡಿದ್ದು ತಕ್ಷಣವೇ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಕಾಂಗ್ರೆಸ್ ನಾಯಕರಾದ ರಾಹುಲï ಗಾಂಽ ಮತ್ತು ಪ್ರಿಯಾಂಕಾ ಗಾಂಽ ಅವರು ಉಡುಪಿ ಪ್ರಕರಣದ ಬಗ್ಗೆ ಮಾತನಾಡಬೇಕು. ಮಣಿಪುರದ ವಿಷಯ ಮಾತನಾಡುವ ಕಾಂಗ್ರೆಸ್ ಉಡುಪಿ ಬಗ್ಗೆ ಮೌನ ಮುರಿಯಬೇಕು ಎಂದು ಆಗ್ರಹಿಸಿದರು. ಮಹಿಳಾ ಮೋರ್ಚಾ ನಗರಾಧ್ಯಕ್ಷೆ ಸುರೇಖಾ ಮುರಳೀಧರ್, ಪ್ರಧಾನ ಕಾರ್ಯದರ್ಶಿಗಳಾದ ರಶ್ಮಿ, ಆರತಿ, ನಗರ ಅಧ್ಯಕ್ಷ ಎನ್.ಕೆ.ಜಗದೀಶ್, ಪ್ರಧಾನ ಕಾರ್ಯದರ್ಶಿಗಳಾದ ಡಿ. ಮೋಹನ್ ರೆಡ್ಡಿ, ಸಂತೋಷ್ ಬಳ್ಳೆಕೆರೆ, ಮುಖಂಡರಾದ ಎಸ್.ದತ್ತಾತ್ರಿ, ಎನ್.ಜಿ.ನಾಗರಾಜ್, ಮಾಲ್ತೇಶ್, ಸೀತಾಲಕ್ಷಿ÷್ಮÃ ಇತರರಿದ್ದರು.