More

    ರಾಷ್ಟçಪತಿ ಮಧ್ಯಪ್ರವೇಶಿಸಲಿ

    ಶಿವಮೊಗ್ಗ: ಮಣಿಪುರದಲ್ಲಿ ಕುಕಿ ಸಮಾಜದ ಮಹಿಳೆಯರಿಬ್ಬರನ್ನು ಬೆತ್ತಲೆಗೊಳಿಸಿ ಸಾಮೂಹಿಕ ಅತ್ಯಾಚಾರ ಮಾಡಿದವರನ್ನು ಬಂಽಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಒತ್ತಾಯಿಸಿ ಬಿಎಸ್‌ಪಿ(ಬಹುಜನ ಸಮಾಜ ಪಾರ್ಟಿ) ಕಾರ್ಯಕರ್ತರು ಗುರುವಾರ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಕೃತ್ಯದಲ್ಲಿ ಮಹಿಳೆಯೊಬ್ಬರು ಮೃತಪಟ್ಟಿದ್ದು ೨೦೦ಕ್ಕೂ ಅಽಕ ಕಿಡಿಗೇಡಿಗಳು ಮಹಿಳೆಯರ ಮೇಲೆ ದೌರ್ಜನ್ಯ ನಡೆಸಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಮಣಿಪುರದಲ್ಲಿ ಬಿಜೆಪಿ ಸರ್ಕಾರ ಅಽಕಾರದಲ್ಲಿದ್ದು ಸಿಎಂ ಬೀರೇನ್ ಸಿಂಗ್ ಸಮರ್ಪಕ ಆಡಳಿತ ನಡೆಸುವಲ್ಲಿ ವಿ-Àಲರಾಗಿದ್ದಾರೆ. ಹಾಗಾಗಿ ತಕ್ಷಣವೇ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕು ಎಂದು ಒತ್ತಾಯಿಸಿದರು. ಇಷ್ಟೆಲ್ಲ ಅಹಿತಕರ ಘಟನೆಗಳು ನಡೆಯುತ್ತಿದ್ದರೂ ಪ್ರಧಾನಿ ನರೇಂದ್ರ ಮೋದಿ ಕಣ್ಮುಚ್ಚಿ ಕುಳಿತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ರಾಷ್ಟçಪತಿಗಳು ಮಧ್ಯೆಪ್ರವೇಶಿಸಿ ಮಣಿಪುರ ಜನರ ಪ್ರಾಣ ಮತ್ತು ಆಸ್ತಿಪಾಸ್ತಿಯನ್ನು ರಕ್ಷಣೆ ಮಾಡಬೇಕು ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಮನವಿ ಮಾಡಿದರು. ಜಿಲ್ಲಾಧ್ಯಕ್ಷ ಎ.ಡಿ.ಶಿವಪ್ಪ, ಉಪಾಧ್ಯಕ್ಷ ಪ್ರೊ. ಕೃಷ್ಣಪ್ಪ, ಸಂಯೋಜಕರಾದ ರಾಜಪ್ಪ, ಎಚ್.ಎನ್.ಶ್ರೀನಿವಾಸ್, ಖಜಾಂಚಿ ಎ.ಡಿ.ಲಕ್ಷಿ÷್ಮÃಪತಿ, ಸಂಘಟನಾ ಕಾರ್ಯದರ್ಶಿ ಮಂಜುನಾಥ, ನಗರ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಗುತ್ಯಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts