More

    ತುಮಕೂರು | 500 ರೂ. ವಿಚಾರಕ್ಕೆ ಗಲಾಟೆ; ಸಿಟ್ಟಿನಲ್ಲಿ ಹೆಂಡತಿ, ಮಕ್ಕಳಿಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದವನ ಬಂಧನ!

    ತುಮಕೂರು: ಹೆಂಡತಿ, ಮಕ್ಕಳು ಮಲಗಿದ್ದ ವೇಳೆ ಪೆಟ್ರೋಲ್ ಸುರಿದು ಬೆಂಕಿ ಹೆಚ್ಚಿ ನಾಪತ್ತೆಯಾಗಿದ್ದ ಪಾಪಿ‌ ಪತಿಯನ್ನು ಪತ್ತೆ ಮಾಡಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆಂಧ್ರಪ್ರದೇಶ ಪರಗಿ ಎಂಬಲ್ಲಿ ಮಿಡಿಗೇಶಿ ಪೊಲೀಸರು ನಾಪತ್ತೆಯಾಗಿದ್ದ ಆರೋಪಿ ರಾಮಾಂಜನಪ್ಪನನ್ನು ಬಂಧಿಸಿದ್ದಾರೆ.

    15 ವರ್ಷಗಳ ಹಿಂದೆ ಶಾಂತಮ್ಮ ಎಂಬಾಕೆಯನ್ನು ಮದುವೆಯಾಗಿದ್ದ ರಾಮಾಂಜನಪ್ಪ, ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಮುದ್ದನೇರಳೆಕೆರೆ ಗ್ರಾಮದಲ್ಲಿ ವಾಸಿಸುತ್ತಿದ್ದ. ಇವರಿಬ್ಬರಿಗೆ ಮೂವರು ಹೆಣ್ಣು ಮಕ್ಕಳಿದ್ದು. ಇತ್ತಿಚೆಗೆ ಹೆಂಡತಿಯೊಂದಿಗೆ ಗಲಾಟೆ ಮಾಡುತ್ತಿದ್ದ. ನಿನ್ನೆ ರಾತ್ರಿ (ಮಾ.13) ರಂದು 500 ರೂಪಾಯಿ ವಿಚಾರವಾಗಿ ಮತ್ತೆ ದಂಪತಿಗಳ ನಡುವೆ ಗಲಾಟೆ ನಡೆದಿದೆ.

    ಇದನ್ನೂ ಓದಿ: ಅಪ್ಪು ಪುತ್ಥಳಿ ಮೆರವಣಿಗೆ ವೇಳೆ ಜೆಡಿಎಸ್ ಕಾರ್ಯಕರ್ತರು – ಪೊಲೀಸರ ಮಧ್ಯೆ ವಾಗ್ವಾದ; ಪಿಎಸ್‌ಐ ಕಾಲರ್ ಎಳೆದು ಹಲ್ಲೆ ಮಾಡಿದ ಶಾಸಕರ ಪುತ್ರ

    ಗಲಾಟೆಯ ಬಳಿಕ ಎಂದಿನಂತೆ ಊಟ ಮಾಡಿ ಮಲಗಿದ್ದ ಪತ್ನಿ ಹಾಗೂ ಮೂವರು ಮಕ್ಕಳ ಮೇಲೆ ಮಧ್ಯರಾತ್ರಿ 3 ಗಂಟೆ ಸುಮಾರಿಗೆ ರಾಮಾಂಜನಪ್ಪ ಪೆಟ್ರೋಲ್ ಸುರಿದು ಬೆಂಕಿ ಹಾಕಿದ್ದಾನೆ, ಬಳಿಕ ಮನೆಯ ಕೋಣೆಗೆ ಬೀಗ ಹಾಕಿ ಪರಾರಿಯಾಗಿದ್ದ. ಮನೆಗೆ ಬೆಂಕಿ ತಗುಲಿರುವುದ ಗೊತ್ತಾಗುತ್ತಿದ್ದಂತೆ ಸ್ಥಳೀಯರು ಬೆಂಕಿ ನಂದಿಸುವ ಕೆಲಸಕ್ಕೆ ಮುಂದಾಗಿದ್ದಾರೆ.

    ಆದರೆ ದುರಾದೃಷ್ಟವಶಾತ್ ಬೆಂಕಿಯ ಕೆನ್ನಾಲಿಗೆಗೆ ರಾಮಾಂಜನಪ್ಪ ಪತ್ನಿ ಶಾಂತಮ್ಮ(35) ಸ್ಥಳದಲ್ಲೇ ಸಾವನ್ನಪ್ಪಿದ್ದು, ಇಬ್ಬರು ಹೆಣ್ಣು ಮಕ್ಕಳಾದ ಅಕ್ಷಯ (17), ಅಕ್ಷಿತಾ (13), ಗಂಭೀರ ಗಾಯಗೊಂಡು ಆಸ್ಪತ್ರೆ ಸೇರಿದ್ದರು. ಮತ್ತೋರ್ವ ಹೆಣ್ಣು ಮಗಳು ಅಮೃತ (10) ಸಣ್ಣಪುಟ್ಟ ಗಾಯಕ್ಕೆ ತತ್ತಾಗಿದ್ದಳು. ಗಂಭೀರ ಗಾಯಗೊಂಡವರನ್ನು ಬೆಂಗಳೂರಿನ‌ ವಿಕ್ಟೋರಿಯ ಆಸ್ಪತ್ರೆಗೆ ಹಾಗೂ ಸಣ್ಣಪುಟ್ಟ ಗಾಯಗಳಾಗಿದ್ದ ಹೆಣ್ಣು ಮಗಳಿಗೆ ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.

    ಇದನ್ನೂ ಓದಿ: ಹಾಸನ | ಫೋನ್​ನಲ್ಲಿ ಮಾತನಾಡುತ್ತಿದ್ದಾಗಲೇ ಹೃದಯಾಘಾತದಿಂದ ಪ್ರಾಣ ಬಿಟ್ಟ ಮೆಡಿಕಲ್ ಅಂಗಡಿ ಮಾಲೀಕ

    ಘಟನೆ ಸಂಬಂಧ ಮಿಡಿಗೇಶಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಪತಿಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದರು. ಇದೀಗ ರಾಮಾಂಜನಪ್ಪನನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದು, ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ. ಟ್ರ್ಯಾಕ್ಟರ್ ಜತೆಗೆ ಸ್ಕೂಲ್ ಬಸ್ ಚಾಲಕನಾಗಿದ್ದ ರಾಮಾಂಜನಪ್ಪ, ಕಳೆದ ಎರಡು ತಿಂಗಳ ಹಿಂದೆ ಸ್ಕೂಲ್ ಬಸ್ ಆಕ್ಸಿಡೆಂಟ್ ಮಾಡಿದ್ದು, ಹೀಗಾಗಿ ಎರಡು ತಿಂಗಳಿಂದ ಸಂಬಳ‌ ಲಭಿಸಿರಲಿಲ್ಲ. ಇದು ರಾಮಾಂಜನಪ್ಪನನ್ನು ಹಣಕಾಸಿನ ಅಭಾವಕ್ಕೆ ಸಿಲುಕಿಸಿತ್ತು. ಇದೇ ವಿಚಾರವಾಗಿ ಹಲವು ಬಾರಿ ಪತ್ನಿಯೊಂದಿಗೆ ಗಲಾಟೆ ಮಾಡಿಕೊಂಡಿದ್ದ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts