More

    3 ಲಕ್ಷ ಭಕ್ತರಿಂದ ಬಾಲರಾಮನ ದರ್ಶನ, ದಾಖಲೆ ಬರೆದ ಅಯೋಧ್ಯೆ!

    ಅಯೋಧ್ಯೆ: 500 ವರ್ಷಗಳ ಕನಸು ನನಸಾಗಿದೆ. ಅಯೋಧ್ಯೆಯಲ್ಲಿ ಪುನರ್ ನಿರ್ಮಾಣವಾದ ಭಗವಾನ್ ಶ್ರೀರಾಮನ ಮಂದಿರ ಲೋಕಾರ್ಪಣೆಗೊಂಡಿದೆ. ಈ ಅಭೂತಪೂರ್ವ ಸನ್ನಿವೇಶಕ್ಕೆ ವಿಶ್ವದ 50 ದೇಶಗಳ 92 ಗಣ್ಯ ಅತಿಥಿಗಳು ಸಾಕ್ಷಿಯಾದರು.

    ಇದನ್ನೂ ಓದಿ:ಹಾಸ್ಯನಟ ವಡಿವೇಲು ಬಗ್ಗೆ ಹೀಗೆಲ್ಲಾ ಹೇಳಿದ್ದಾನೆ ಮಗ ಸುಬ್ರಮಣಿ!

    ಭಾರತದ ಉದ್ಯಮಿಗಳು, ಸಿನೆಮಾ ಹಾಗೂ ಕ್ರಿಕೆಟ್ ತಾರೆಗಳು, ಹಲವು ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಕೇಂದ್ರ ಸಚಿವರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

    ರಾಮಜನ್ಮಭೂಮಿ ಟ್ರಸ್ಟ್ ಮೊದಲೇ ಘೋಷಿಸಿದಂತೆ ಜನವರಿ 23ರಿಂದ ಮಂದಿರ ಸಾರ್ವಜನಿಕ ಪ್ರವೇಶಕ್ಕೆ ಮುಕ್ತವಾಗಿದೆ. ಇಂದು ಬೆಳಗ್ಗೆಯಿಂದ ಆಯೋಧ್ಯೆಗೆ ಲಕ್ಷಾಂತರ ಭಕ್ತರು ಆಗಮಿಸಿದ್ದಾರೆ. ಬೆಳಗ್ಗೆಯಿಂದ ಇದುವರೆಗೆ ಭವ್ಯ ರಾಮ ಮಂದಿರಕ್ಕೆ ತೆರಳಿದ ರಾಮಲಲ್ಲಾ ದರ್ಶನ ಪಡೆದ ಭಕ್ತರ ಸಂಖ್ಯೆ 3 ಲಕ್ಷ ದಾಟಿದೆ. ಈ ಮೂಲಕ ಅತೀ ಕಡಿಮೆ ಅವಧಿಯಲ್ಲಿ ಗರಿಷ್ಠ ಭಕ್ತರಿಗೆ ದರ್ಶನ ನೀಡಿದ ಹೆಗ್ಗಳಿಕೆಗೆ ಬಾಲರಾಮ ಪಾತ್ರರಾಗಿದ್ದಾನೆ.

    Ayodhya

    ಪ್ರತಿ ದಿನ ರಾಮಮಂದಿರ ಬೆಳಗ್ಗೆ 7 ಗಂಟೆಗೆ ಭಕ್ತರ ದರ್ಶನಕ್ಕೆ ತೆರೆದುಕೊಳ್ಳಲಿದೆ. ಬೆಳಗ್ಗೆ 7 ರಿಂದ 11.30ರ ವರೆಗೆ ವಿಶೇಷ ಪೂಜೆ, ಮಂಗಳಾರತಿ, ಅಭಿಷೇಖಗಳು ನಡೆಯಲಿದೆ. ಬಳಿಕ 2 ಗಂಟೆಯಿಂದ ಸಂಜೆ 7 ಗಂಟೆವರೆಗೆ ಭಕ್ತರ ದರ್ಶನಕ್ಕೆ ಅವಕಾಶವಿದೆ ಎಂದು ಟ್ರಸ್ಟ್​ ಹೇಳಿದೆ.

    ಒಂದು ತಿಂಗಳು ಮೊಬೈಲ್​ ದೂರವಿಟ್ಟರೆ ಸಿಗಲಿದೆ ಭರ್ಜರಿ ಬಹುಮಾನ? ಆದರೆ ಷರತ್ತುಗಳು ಅನ್ವಯ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts