More

    ಪತ್ರಕರ್ತ ಅರ್ನಬ್​ ಹಲ್ಲೆಗೆ ಯತ್ನಿಸಿದ ಆರೋಪಿಗಳಿಬ್ಬರನ್ನು ಬಂಧಿಸಿದ ಮುಂಬೈ ಪೊಲೀಸರು

    ಮುಂಬೈ: ರಿಪಬ್ಲಿಕ್​ ಟಿವಿ ಸಂಸ್ಥಾಪಕ ಮತ್ತು ಸಂಪಾದಕರಾಗಿರುವ ಪತ್ರಕರ್ತ ಅರ್ನಬ್​ ಗೋಸ್ವಾಮಿ ಹಾಗೂ ಅವರ ಪತ್ನಿಯ ಮೇಲೆ ಹಲ್ಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿರುವುದಾಗಿ ಜಂಟಿ ಪೊಲೀಸ್​ ಆಯುಕ್ತ (ಕಾನೂನು ಮತ್ತು ಸುವ್ಯವಸ್ಥೆ) ವಿನೊಯ್​ ಛೌಬೆ ತಿಳಿಸಿದ್ದಾರೆ.

    ನಾನು ಮತ್ತು ನನ್ನ ಪತ್ನಿ ಬುಧವಾರ ರಾತ್ರಿ ಸ್ಟುಡಿಯೋದಿಂದ ಮನೆಗೆ ಮರಳುವಾಗ ಬೈಕ್​ನಲ್ಲಿ ಬಂದ ಇಬ್ಬರು ನಮ್ಮನ್ನು ಓವರ್​ಟೇಕ್​ ಮಾಡಿ, ದಾಳಿ ನಡೆಸಲು ಯತ್ನಿಸಿದರು. ಅವರಿಂದ ಬಚಾವ್​ ಆಗಿ ಮನೆಗೆ ಬಂದಾಗ ಅವರು ಯೂತ್​ ಕಾಂಗ್ರೆಸ್ ಕಾರ್ಯಕರ್ತರು ಎಂಬುದು ಸೆಕ್ಯುರಿಟಿ ಗಾರ್ಡ್​ಗಳಿಂದ ತಿಳಿಯಿತು ಎಂದು ಆರೋಪಿಸಿ ಅರ್ನಬ್​ ಲಿಖಿತ ದೂರು ದಾಖಲಿಸಿದ್ದರು.

    ಅರ್ನಬ್​ ದೂರಿನ ಆಧಾರದ ಮೇಲೆ ಇಬ್ಬರು ಆರೋಪಿಗಳ ವಿರುದ್ಧ ಎನ್​ಎಂ ಜೋಷಿ ಮಾರ್ಗ್​ ಪೊಲೀಸ್​ ಠಾಣೆಯಲ್ಲಿ ಐಪಿಸಿ ಸೆಕ್ಷನ್​ 341 (ತಪ್ಪಾಗಿ ಅಡ್ಡಿಪಡಿಸಿದ್ದಕ್ಕಾಗಿ ಶಿಕ್ಷೆ) ಮತ್ತು 504 (ಶಾಂತಿ ಕದಡಲು ಪ್ರಚೋದಿಸಿದಲ್ಲದೆ, ಉದ್ದೇಶಪೂರ್ವಕವಾಗಿ ಅವಮಾನ) ಅಡಿಯಲ್ಲಿ ಎಫ್​ಐಆರ್​ ದಾಖಲಿಸಲಾಯಿತು.

    ಅರ್ನಬ್​ ಕಾರನ್ನು ಓವರ್​ಟೇಕ್​ ಮಾಡಿದ ಇಬ್ಬರು ದುಷ್ಕರ್ಮಿಗಳಲ್ಲಿ ಓರ್ವ ಕಾರಿನ ಕಿಟಕಿ ಗಾಜನ್ನು ಹೊಡೆಯಲು ಯತ್ನಿಸಿದ್ದಾನೆ. ಅಲ್ಲದೆ, ಇಂಕ್​ ಬಾಟಲ್ ಅನ್ನು ಜತೆಗೆ ತಂದಿದ್ದ ಅವರು ಕಾರಿನ ಮೇಲೆಸೆದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಅರ್ನಬ್​ ಹಿಂದೆ ಮತ್ತೊಂದು ಕಾರಿನಲ್ಲಿ ಆಗಮಿಸುತ್ತಿದ್ದ ಸೆಕ್ಯುರಿಟಿ ಸಿಬ್ಬಂದಿ ಆರೋಪಿಗಳನ್ನು ಹಿಡಿದು, ಅವರಿಬ್ಬರನ್ನು ಎನ್​ಎಂ ಜೋಶಿ ಮಾರ್ಗ್​ ಪೊಲೀಸ್​ ಠಾಣೆಯ ವಶಕ್ಕೆ ಒಪ್ಪಿಸಿದ್ದಾರೆ.

    ಪಾಲ್ಘಾರ್​ ಗುಂಪು ಹತ್ಯೆ ಪ್ರಕರಣವನ್ನು ಕಾಂಗ್ರೆಸ್​ ಅಧ್ಯಕ್ಷೆ ಸೋನಿಯಾ ಗಾಂಧಿ ತಳುಕು ಹಾಕಿ, ಟಿವಿ ಕಾರ್ಯಕ್ರಮದಲ್ಲಿ ಅವರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಾರೆಂದು ಆರೋಪಿಸಿ ಅರ್ನಬ್​ ವಿರುದ್ಧ ಕಾಂಗ್ರೆಸ್​ ನಾಯಕರುಗಳು ವಿವಿಧೆಡೆ ದೂರು ದಾಖಲಿಸಿದ್ದು, ಇದಾದ ಬೆನ್ನಲ್ಲೇ ದಾಳಿ ಯತ್ನ ನಡೆದಿದೆ ಎಂದು ಅರ್ನಬ್​ ಆರೋಪಿಸಿದ್ದಾರೆ. (ಏಜೆನ್ಸೀಸ್​)

    ಸೋನಿಯಾ ಗಾಂಧಿಗೆ ಅವಹೇಳನ ಆರೋಪ: ಪತ್ರಕರ್ತ ಅರ್ನಬ್​ ಗೋಸ್ವಾಮಿ ವಿರುದ್ಧ ದೇಶದ ಹಲವೆಡೆ ದೂರು ದಾಖಲು

    ‘ನೀವು ಈ ದೇಶದ ಅತಿ ದೊಡ್ಡ ಹೇಡಿ, ನಿಮ್ಮ ಸುಳ್ಳಗಳನ್ನೆಲ್ಲ ಬಯಲಿಗೆಳೆಯುವೆ’ ಎಂದು ಸೋನಿಯಾ ಗಾಂಧಿಗೆ ಸವಾಲ್‌ ಹಾಕಿದವರು ಯಾರು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts