More

    ಟ್ರೇನಿಂಗ್ ಮುಗಿಸಿ ಲ್ಯಾಂಡ್ ಮಾಡುವಾಗ ದೇವಸ್ಥಾನಕ್ಕೆ ಅಪ್ಪಳಿಸಿದ ವಿಮಾನ..!

    ಮಧ್ಯಪ್ರದೇಶ: ಮಧ್ಯಪ್ರದೇಶದ ರೇವಾದಲ್ಲಿ ಭಾರೀ ಪ್ರಮಾಣದ ಅಪಘಾತವೊಂದು ಸಂಭವಿಸಿದ್ದು ಟ್ರೈನಿಂಗ್ ಗಾಗಿ ಮೀಸಲು ಇರಿಸಲಾಗಿದ್ದ ವಿಮಾನವೊಂದು ದೇವಾಲಯದ ಗುಮ್ಮಟಕ್ಕೆ ಅಪ್ಪಳಿಸಿದೆ. ಇದರಿದಿಂದಾಗಿ, ವಿಮಾನದಲ್ಲಿದ್ದ ಪೈಲಟ್ ಮತ್ತು ತರಬೇತುದಾರರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅಪಘಾತದಲ್ಲಿ ಹಿರಿಯ ಪೈಲಟ್ ಸಾವಿಗೀಡಾಗಿದ್ದಾರೆ.

    ಖಾಸಗಿ ವಿಮಾನಯಾನ ತರಬೇತಿ ಅಕಾಡೆಮಿಗೆ ಸೇರಿದ್ದ ವಿಮಾನವು ರಾತ್ರಿ ಇದ್ದ ದಟ್ಟವಾದ ಮಂಜಿನಲ್ಲಿ ಲ್ಯಾಂಡ್ ಮಾಡಲು ಪ್ರಯತ್ನಿಸಿದಾಗ ಈ ಅಪಘಾತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಂಜು ಮುಸುಕಿದ ವಾತಾವರಣದಲ್ಲಿ ಇಳಿಯುವಾಗ ವಿಮಾನವು ದೇವಾಲಯದ ಗುಮ್ಮಟ ಮತ್ತು ವಿದ್ಯುತ್ ತಂತಿಗಳಿಗೆ ಡಿಕ್ಕಿ ಹೊಡೆದಿದೆ ಎಂದು ಮಧ್ಯಪ್ರದೇಶದ ಗೃಹಸಚಿವ ನರೋತ್ತಮ್ ಮಿಶ್ರಾ ಮಾಹಿತಿ ನೀಡಿದ್ದಾರೆ. ಅಪಘಾತದ ಸ್ಥಳವು ಚೋರ್ಹಟ್ಟಾ ಏರ್ಸ್ಟ್ರಿಪ್ನಿಂದ ಮೂರು ಕಿಲೋಮೀಟರ್ ದೂರದಲ್ಲಿದೆ ಎಂದು ಚೋರ್ಹಟ್ಟಾ ಪೊಲೀಸ್ ಠಾಣೆಯ ಉಸ್ತುವಾರಿ ಜೆ.ಪಿ.ಪಟೇಲ್ ತಿಳಿಸಿದ್ದಾರೆ.

    ಪಟನಾ ನಿವಾಸಿ ಕ್ಯಾಪ್ಟನ್ ವಿಮಲ್ ಕುಮಾರ್ (50) ಸಾವಿಗೀಡಾಗಿದ್ದು, ಜೈಪುರದ ನಿವಾಸಿ, ಟ್ರೈನಿ ಪೈಲಟ್ ಸೋನು ಯಾದವ್ (23) ಗಾಯಗೊಂಡಿದ್ದಾರೆ. ಅವರನ್ನು ಸರ್ಕಾರಿ ಸ್ವಾಮ್ಯದ ಸಂಜಯ್ ಗಾಂಧಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ರೇವಾ ಜಿಲ್ಲಾಧಿಕಾರಿ ಮನೋಜ್ ಪುಷ್ಪ್ ಮಾಹಿತಿ ನೀಡಿದ್ದಾರೆ.

    ಘಟನೆ ಹೇಗೆ ಆಯಿತು ಎಂದು ತನಿಖೆಗೆ ಆದೇಶಿಸಲಾಗಿದ್ದು ಮುಂಬೈನಿಂದ ವಾಯುಯಾನ ತಜ್ಞರು ಅಪಘಾತದ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ ಎಂದು ಸಚಿವ ಮಿಶ್ರಾ ತಿಳಿಸಿದರು.

    ವಿಮಾನವು ಫಾಲ್ಕನ್ ಏವಿಯೇಷನ್ ಅಕಾಡೆಮಿಗೆ ಸೇರಿದ್ದು ಈ ವಿಮಾನ ದಟ್ಟವಾದ ಮಂಜಿನಲ್ಲಿ ಲ್ಯಾಂಡ್ ಮಾಡಲು ಪ್ರಯತ್ನಿಸುವ ಮೊದಲು ಹಲವಾರು ಬಾರಿ ವೃತ್ತಾಕಾರವಾಗಿ ಹಾರಿತ್ತು. ಅಪಘಾತದಲ್ಲಿ ಯಾವುದೇ ಸ್ಥಳೀಯರಿಗೆ ಗಾಯಗಳಾಗಿಲ್ಲ, ಆದರೆ ಟ್ರೈನಿಂಗ್ ಪಡೆಯುತ್ತಿದ್ದ ಪೈಲಟ್ ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts