More

    ಅಕ್ರಮ ಅಡಕೆ ಸಾಗಾಟ, 53 ಲಕ್ಷ ರೂ. ದಂಡ, ತೆರಿಗೆ ವಸೂಲು

    ಕುಂದಾಪುರ: ಮಂಗಳೂರು ಪಶ್ಚಿಮ ವಲಯ ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತರು (ಜಾರಿ) ಮೇ 23ರಂದು ವಂಡ್ಸೆಯಲ್ಲಿ ನಕಲಿ ದಾಖಲೆಗಳೊಂದಿಗೆ ಸಾಗಿಸುತ್ತಿದ್ದ 247 ಕ್ವಿಂಟಾಲ್ ಅಡಕೆ ವಶಪಡಿಸಿಕೊಂಡಿದ್ದು, ಪ್ರಕರಣ ವಿಚಾರಣೆ ನಡೆಸಿ ದಂಡ ಹಾಗೂ ತೆರಿಗೆ ಮೊತ್ತವಾಗಿ 53,10,500 ರೂ. ವಸೂಲು ಮಾಡಲಾಗಿದೆ.

    ಅಂಪಾರು-ಕೊಲ್ಲೂರು ರಸ್ತೆಯ ವಂಡ್ಸೆ ಎಂಬ ಸ್ಥಳದಲ್ಲಿ ಸರಕು ವಾಹನವನ್ನು ತಡೆದು ಪರಿಶೀಲಿಸಿದಾಗ ಅಕ್ರಮವಾಗಿ ಅಡಕೆ ಸಾಗಿಸುತ್ತಿರುವುದು ಪತ್ತೆಯಾಗಿತ್ತು. ವಶಪಡಿಸಿಕೊಂಡ ಸರಕು ಹಾಗೂ ಲಾರಿಯನ್ನು ಕೋಟ ಠಾಣೆ ವಶಕ್ಕೆ ಒಪ್ಪಿಸಲಾಗಿತ್ತು.

    ಸಾಗಣೆದಾರರು ಕರ್ನಾಟಕದಲ್ಲಿ ಅಡಕೆ ಪಡೆದು ಅದನ್ನು ಕೇರಳದ ವರ್ತಕರಿಗೆ ನಕಲಿ ದಾಖಲಿಗಳೊಂದಿಗೆ ಸಾಗಣೆ ಮಾಡುತ್ತಿರುವುದು ತಿಳಿದು ಬಂದಿತ್ತು. ಸರಕು ಮತ್ತು ಸೇವಾ ತೆರಿಗೆ ಕಾಯ್ದೆ 2017 ರ ಪ್ರಕರಣ 129(1)(ಬಿ) ಅಡಿಯಲ್ಲಿ ಆದೇಶ ಹೊರಡಿಸಿ ಸಾಗಣೆದಾರರಾದ ಪುತ್ತೂರಿನ ಮೆ ಯೂನಿಯನ್ ಕಾರ್ಗೋ ಮೂವರ್ಸ್‌ ಅವರಿಂದ ಒಟ್ಟು ತೆರಿಗೆ ಮತ್ತು ದಂಡ 53,10,500 ರೂ. ಪಾವತಿಗೆ ಆದೇಶಿಸಲಾಗಿತ್ತು. ಸಾಗಣೆದಾರರು ಸೋಮವಾರ ಈ ಮೊತ್ತ ಪಾವತಿಸಿದ್ದಾರೆ ಎಂದು ಮಂಗಳೂರು ಪಶ್ಚಿಮ ವಲಯದ ವಾಣಿಜ್ಯ ತೆರಿಗೆ ಜಂಟಿ ಆಯುಕ್ತ (ಜಾರಿ) ಉದಯಶಂಕರ್ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts