More

    ಅರ್ಚಕನ ವಿರುದ್ಧ ಲಾಕ್‌ಡೌನ್ ಉಲ್ಲಂಘನೆ ಪ್ರಕರಣ

    ಕನಕಪುರ: ಕರೊನಾ ತೊಲಗಿಸುವ ನಿಟ್ಟಿನಲ್ಲಿ ಕೋಡಿಹಳ್ಳಿ ಠಾಣಾ ವ್ಯಾಪ್ತಿಯ ಕೊಳಗೊಂಡನಹಳ್ಳಿಯಲ್ಲಿ ಜನರು ಲಾಕ್‌ಡೌನ್ ಉಲ್ಲಂಸಿ ದೇವಿಯ ಆರಾಧನೆ ಮಾಡಿದ ಆರೋಪದ ಮೇಲೆ ಅರ್ಚಕನ ಮೇಲೆ ಪ್ರಕರಣ ದಾಖಲಿಸಿರುವುದು ತಡವಾಗಿ ಬೆಳಕಿಗೆ ಬಂದಿದೆ.

    ಗ್ರಾಮದ ಮಾರಮ್ಮನಗುಡಿ ಅರ್ಚಕ ಚಿಕ್ಕಮರಿಗೌಡ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.
    ಹಿಂದಿನ ದಿನಗಳಲ್ಲಿ ಪ್ಲೇಗ್, ಕಾಲರಾದಂತಹ ಮಾರಕ ರೋಗಗಳಿಂದ ಮುಕ್ತರಾಗಲು ಗ್ರಾಮದೇವತೆ ಆರಾಧನೆ ಮಾಡುವುದು ರೂಢಿಯಲ್ಲಿತ್ತು. ದೇವಿಯನ್ನು ಪೂಜಿಸಿದರೆ ರೋಗ ತೊಲಗುತ್ತದೆ ಎಂದೂ ಜನರು ನಂಬಿದ್ದರು. ಅದೇ ರೀತಿ ಕೊಳಗೊಂಡನಹಳ್ಳಿ ಮೇ 12ರಂದು ಕರೊನಾ ಮಹಾಮಾರಿಯನ್ನು ತೊಲಗಿಸಲು ಗ್ರಾಮದ ಮಾರಮ್ಮನ ಗುಡಿ ಎದುರು ನೂರಾರು ಸಂಖ್ಯೆಯಲ್ಲಿ ಗ್ರಾಮಸ್ಥರು ಸೇರಿ ದೇವಿಯ ಪೂಜೆಗೆ ಸೇರಿದ್ದರು. ಈ ಸಂಬಂಧ ಮಾಹಿತಿ ಆಧರಿಸಿ, ತಹಸೀಲ್ದಾರ್ ವರ್ಷಾ ಒಡೆಯರ್, ಕೋಡಿಹಳ್ಳಿ ಎಸ್‌ಐ ನಂಜುಂಡಸ್ವಾಮಿ ಮತ್ತು ಸಿಬ್ಬಂದಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಗ್ರಾಮಸ್ಥರು ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಕಾರ್ಯಕ್ರಮ ನಡೆಸಿದ ಆರೋಪದ ಮೇಲೆ ಪ್ರಕರಣ ದಾಖಲಿಸಿದ್ದಾರೆ.

    ಕಾರ್ಯಪಡೆ ಏನು ಮಾಡುತ್ತಿತ್ತು?: ಪ್ರಕರಣಕ್ಕೆ ಸಂಬಂಧಿಸಿದಂತೆ ದೇವಾಲಯದ ಅರ್ಚಕ ಚಿಕ್ಕ ಮರಿಗೌಡ ವಿರುದ್ಧ ಮಾತ್ರ ಪ್ರಕರಣ ದಾಖಲಿಸಿ ಬಲಿಪಶು ಮಾಡಿರುವುದು ಖಂಡನೀಯ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗ್ರಾಮದಲ್ಲಿ ಕಾರ್ಯಕ್ರಮ ನಡೆಯುವ ಮುನ್ನವೇ ಪೊಲೀಸರಾಗಲೀ, ಗ್ರಾಮ ಮಟ್ಟದ ಕರೊನಾ ಟಾಸ್‌‌ಕೆೆರ್ಸ್ ಸಮಿತಿಯಾಗಲೀ ಈ ಬಗ್ಗೆ ಮಾಹಿತಿ ಕಲೆಹಾಕಿ ತಡೆಯಬಹುದಾಗಿತ್ತು. ಆದರೆ ಇದಾವುದನ್ನೂ ಮಾಡದ ತಾಲೂಕು ಆಡಳಿತ ಯಾರೋ ಕೊಟ್ಟ ದೂರು ಆಧರಿಸಿ ಪ್ರಕರಣ ದಾಖಲಿಸಿರುವುದು ಸರಿಯಲ್ಲ. ತಮ್ಮ ಕಾರ್ಯದಲ್ಲಿ ನಿರ್ಲಕ್ಷ್ಯ ತೋರಿರುವ ಸಂಬಂಧಪಟ್ಟ ಇಲಾಖೆ ಸಿಬ್ಬಂದಿ ಮೇಲೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

    ಕರ್ತವ್ಯಲೋಪ ಹಿನ್ನೆಲೆ ಗ್ರಾಮಲೆಕ್ಕಿಗ ಅಮಾನತು: ಕೋವಿಡ್-19 ರೋಗವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಣೆ ಮಾಡಿದ್ದು, ಇಂತಹ ತುರ್ತು ಪರಿಸ್ಥಿತಿಯಲ್ಲಿ ಕೇಂದ್ರ ಸ್ಥಾನದಲ್ಲಿದ್ದು, ಕರ್ತವ್ಯ ನಿರ್ವಹಿಸುವಲ್ಲಿ ವಿಫಲವಾದ ಕನಕಪುರ ತಾಲೂಕು ಬನ್ನಿಮುಕ್ಕೋಡ್ಲು ಕಂದಾಯ ವೃತ್ತ ಗ್ರಾಮ ಲೆಕ್ಕಿಗ ಎನ್.ಸಿ. ಕಲ್ಮಟ್‌ಕರ್ ಅವರನ್ನು ಅಮಾನತುಗೊಳಿಸಿ ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಆದೇಶಿಸಿದ್ದಾರೆ.

    ಕೊಳಗೊಂಡನ ಹಳ್ಳಿ ಗ್ರಾಮದಲ್ಲಿ ಮೇ 12ರಂದು ನಡೆದ ಗ್ರಾಮದ ಮಾರಮ್ಮ ದೇವಿ ಪೂಜೆಯನ್ನು ತಡೆಯಲು ಕ್ರಮ ಕೈಗೊಳ್ಳುವುದಾಗಲೀ, ಅಥವಾ ಈ ವಿಚಾರವನ್ನು ಮೇಲಧಿಕಾರಿಗಳ ಗಮನಕ್ಕೆ ತರಲು ವಿಫಲರಾಗಿದ್ದು, ಕರ್ತವ್ಯ ಲೋಪ ಎಸಗಿರುತ್ತಾರೆ. ಆದ್ದರಿಂದ ಇವರನ್ನು ಕರ್ತವ್ಯದಿಂದ ಅಮಾನತುಗೊಳಿಸಬೇಕೆಂದು ಕನಕಪುರ ತಹಶೀಲ್ದಾರ್ ವರ್ಷಾ ಒಡೆಯರ್ ಶಿಾರಸು ಮಾಡಿ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಿದ್ದರು. ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಿ ಕಲ್ಮಟ್‌ಕರ್ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts