More

    ದುರ್ಗಮ್ಮ ಜಾತ್ರೆಗೆ ತೆರೆ

    ಅರಸೀಕೆರೆ: ಇಲ್ಲಿನ ದುರ್ಗಮ್ಮ ದೇವಿ ಜಾತ್ರೋತ್ಸವ ಭಾನುವಾರ ಸಂಪನ್ನಗೊಂಡಿದೆ. ಬೆಳಗ್ಗೆ ಧಾರ್ಮಿಕ ವಿಧಿ-ವಿಧಾನಗಳ ಮೂಲಕ ಭಕ್ತರು ಈ ವರ್ಷದ ಉತ್ಸವಕ್ಕೆ ತೆರೆ ಎಳೆದರು.

    ಹೊಳೆ ಪೂಜೆ ಮುಗಿಸಿ ವಾಪಸಾಗುವಾಗ ದೇವರ ಸಾಮಗ್ರಿಗಳನ್ನು ಹೊತ್ತು ದೇವಸ್ಥಾನಕ್ಕೆ ಬರುತ್ತಿದ್ದ ಪೂಜಾರಿಗೆ ದಾರಿಯುದ್ದಕ್ಕೂ ಭಕ್ತರು ಬೋರಲಾಗಿ ಮಲಗಿದ್ದರು. ಪೂಜಾರಿಯ ಪಾದಸ್ಪರ್ಷ ಪಡೆದು ಭಕ್ತರು ತಮ್ಮ ಸಂಕಲ್ಪ ಈಡೇರಿಸಿಕೊಂಡರು. ರೋಗ-ರುಜಿನಗಳಿಗೆ ತುತ್ತಾಗಿ ಜನ-ಜಾನುವಾರುಗಳಿಗೆ ಸಮಸ್ಯೆ ಈಡಾದಾಗ ಭಕ್ತರು ಇಂಥ ಹರಕೆ ಹೊತ್ತಿರುತ್ತಾರೆ. ಸಮಸ್ಯೆ ಬಗೆಹರಿದ ನಂತರ ಈ ಹರಕೆ ತೀರಿಸುತ್ತಾರೆ. ನೂರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts