More

    ಸೇನೆ ಸೇರಲು ಅವಕಾಶ: ಜೂನಿಯರ್​ ಕಮಿಷನ್ಡ್​ ಅಧಿಕಾರಿಯಾಗಲು ಅರ್ಜಿ ಆಹ್ವಾನ

    ಬೆಂಗಳೂರು: ಯುವಜನರಿಗೆ ಭಾರತೀಯ ಸೇನೆ ಸೇರಿ ದೇಶ ಸೇವೆ ಮಾಡಲು ಉತ್ತಮ ಅವಕಾಶ ಒದಗಿಬಂದಿದೆ. ಸೇನೆಯಲ್ಲಿ ಜೂನಿಯರ್ ಕಮಿಶನ್ಡ್ ಅಧಿಕಾರಿ ಮತ್ತು ಕಮಿಶನ್ಡ್ ಅಧಿಕಾರಿ ಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಬಗ್ಗೆ ಕರ್ನಾಟಕ ವಾರ್ತಾ ಇಲಾಖೆ ವಿವರಗಳನ್ನು ಪ್ರಕಟಿಸಿದೆ.

    ಹದಿನೇಳೂವರೆ ವರ್ಷದಿಂದ 23 ವರ್ಷ ವಯೋಮಾನದವರಿಗೆ ಎರಡು ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅವಕಾಶವಿದೆ –

    1) 12ನೇ ತರಗತಿ ಅಥವಾ ವಿಜ್ಞಾನ, ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ, ಇಂಗ್ಲಿಷ್​ ವಿಷಯದ ಇಂಟರ್​ಮೀಡಿಯೇಟ್ ಪರೀಕ್ಷೆಯಲ್ಲಿ ಒಟ್ಟು ಶೇ.50 ಮತ್ತು ಪ್ರತಿ ವಿಷಯದಲ್ಲಿ ಶೇ.40 ಅಂಕ ಗಳಿಸಿ ಉತ್ತೀರ್ಣರಾಗಿರುವವರು ಸೋಲ್ಜರ್​ ಟೆಕ್​ ಎನ್​ ಎ(ಎಎಂಸಿ) ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ.

    ಇದನ್ನೂ ಓದಿ: ‘ಅಪ್ಪು’ ಬದುಕಿದ ಪ್ರತಿ ವಸಂತಕ್ಕೂ ಒಂದೊಂದು ಗಿಡ ನೆಟ್ಟು ಶ್ರದ್ಧಾಂಜಲಿ

    2) 12ನೇ ತರಗತಿ ಅಥವಾ ವಾಣಿಜ್ಯ ಅಥವಾ ವಿಜ್ಞಾನ ವಿಷಯದಲ್ಲಿ ಒಟ್ಟು ಶೇ.60 ಅಂಕ ಗಳಿಸಿ ಮತ್ತು ಪ್ರತಿ ವಿಷಯದಲ್ಲಿ ಶೇ.50 ಅಂಕ ಗಳಿಸಿ ಉತ್ತೀರ್ಣರಾಗಿರುವವರು ಸೋಲ್ಜರ್ ಕ್ಲರ್ಕ್​/ಸ್ಟೋರ್​ ಕೀಪರ್​ ಟೆಕ್ನಿಕಲ್​ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ.

    ಹತ್ತೊಂಭತ್ತರಿಂದ 25 ವರ್ಷ ವಯೋಮಾನದವರು – 12 ನೇ ತರಗತಿ ಅಥವಾ ಡಿ.ಫಾರ್ಮದಲ್ಲಿ ಶೇ.55 ಅಂಕದೊಂದಿಗೆ ಉತ್ತೀರ್ಣರಾಗಿದ್ದು ರಾಜ್ಯ ಫಾರ್ಮಸಿ ಕೌನ್ಸಿಲ್​ನಲ್ಲಿ ನೋಂದಣಿ ಪಡೆದಿದ್ದಲ್ಲಿ, ಅಥವಾ ಶೇ.50 ಅಂಕಗಳೊಂದಿಗೆ ಬಿ.ಫಾರ್ಮದಲ್ಲಿ ಉತ್ತೀರ್ಣರಾಗಿದ್ದಲ್ಲಿ ಸಿಪಾಯಿ ಫಾರ್ಮ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ.

    ಹೆಚ್ಚಿನ ವಿವರಗಳಿಗೆ www.joinindianarmy.nic.in ಲಿಂಕ್​ಅನ್ನು ಕ್ಲಿಕ್ಕಿಸಿ.

    ಮರಳಿ ಮನೆ ತಲುಪಿದ ಆರ್ಯನ್​ ಖಾನ್​; ಶಾರುಖ್​ ಅಭಿಮಾನಿಗಳ ಹರ್ಷೋತ್ಸವ

    ಛೇ, ಇದೆಂಥಾ ಶಾಲೆ?! ಚೇಷ್ಟೆ ಮಾಡಿದ ವಿದ್ಯಾರ್ಥಿಯನ್ನು ನೇತಾಡಿಸಿ ಶಿಕ್ಷೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts