More

    ಐಫೋನ್​, ಐಪಾಡ್​ ಡಿಸೈನ್​ ಮಾಡಿದವರೇ ಫೇಸ್​ ಮಾಸ್ಕ್​ ತಯಾರಿಸಿದ್ರು; ಆ್ಯಪಲ್​ನಿಂದ ಹೊಸ ಉತ್ಪನ್ನ…!

    ನವದೆಹಲಿ: ಮ್ಯಾಕ್​, ಐಫೋನ್​, ಐಪ್ಯಾಡ್​, ಆ್ಯಪಲ್​ ವಾಚ್​, ಏರ್​ಪಾಡ್​…. ಹೀಗೆ ಆ್ಯಪಲ್​ ಕಂಪನಿಯ ಉತ್ಪನ್ನಗಳನ್ನು ಹೆಸರಿಸಬಹುದು. ಇದಕ್ಕೆ ಹೊಸದೊಂದು ಸೇರ್ಪಡೆಯಾಗಿದೆ. ಏನು ಗೊತ್ತೆ?

    ಆ್ಯಪಲ್​ ಫೇಸ್​ ಮಾಸ್ಕ್​…! ಹೌದು. ಐಫೋನ್​, ಐಪ್ಯಾಡ್​ ವಿನ್ಯಾಸ ಮಾಡಿ ಉತ್ಪಾದಿಸಿದ ಇಂಜಿನಿಯರ್​ಗಳೇ ಇದನ್ನು ವಿನ್ಯಾಸಗೊಳಿಸಿ ತಯಾರಿಸಿದ್ದಾರೆ ಎನ್ನುವುದು ಇನ್ನೂ ವಿಶೇಷ ಸಂಗತಿಯಾಗಿದೆ. ಈ ಫೇಸ್​ ಮಾಸ್ಕ್​ಗಳನ್ನು ಸದ್ಯವೇ ತನ್ನ ಕಾರ್ಪೋರೇಟ್​ ಕಚೇರಿ ಹಾಗೂ ರಿಟೇಲ್​ ಮಳಿಗೆಗಳ ಸಿಬ್ಬಂದಿಗೆ ಕಳುಹಿಸಿ ಕೊಡಲಿದೆ.

    ಇದನ್ನೂ ಓದಿ; ಅಕ್ಟೋಬರ್​ ಅಂತ್ಯಕ್ಕೆ ಕರೊನಾ ಲಸಿಕೆ; ಸಾಧ್ಯತೆ ತಳ್ಳಿ ಹಾಕಲಾಗದು; ಹೀಗಿದೆ ತಜ್ಞರ ವಿಶ್ಲೇಷಣೆ 

    ಸದ್ಯ ಎರಡು ಬಗೆಯ ಫೇಸ್​ ಮಾಸ್ಕ್​ಗಳನ್ನು ತಯಾರಿಸಲಾಗಿದೆ. ಆ್ಯಪಲ್​ ಫೇಸ್​ ಮಾಸ್ಕ್​ ಹಾಗೂ ಆ್ಯಪಲ್​ ಕ್ಲಿಯರ್​ ಮಾಸ್ಕ್​. ಫೇಸ್​ಮಾಸ್ಕ್​ ಮೂರು ಪದರಗಳನ್ನು ಹೊಂದಿದ್ದು, ಸರಾಗವಾಗಿ ಉಸಿರಾಡಬಹುದು. ಇದನ್ನು ತೊಳೆದು ಐದು ಬಾರಿ ಮರುಬಳಕೆ ಮಾಡಬಹುದು ಕಂಪನಿ ಹೇಳಿದೆ.

    ಆ್ಯಪಲ್​ ಕಂಪನಿಯ ಇಂಜಿನಿಯರಿಂಗ್​ ಹಾಗೂ ಇಂಡಸ್ಟ್ರೀಯಲ್​ ಇಂಜಿಯರಿಂಗ್​ ತಂಡವೇ ಇದನ್ನು ಸಂಪೂರ್ಣವಾಗಿ ಅಭಿವೃದ್ಧಿಪಡಿಸಿದೆ. ಇದಕ್ಕಾಗಿ ಮೂಗ ಮತ್ತು ಕಿವುಡ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ವಾಷಿಂಗ್ಟನ್​ನ ಗಲ್ಲಾಡೆಟ್​ ಯುನಿವರ್ಸಿಟಿ ಜತೆಗೆ ಕೈಜೋಡಿಸಿದೆ.

    ಇದನ್ನೂ ಓದಿ; ಒಂದೇ ದಿನಕ್ಕೆ 1.19 ಲಕ್ಷ ಕೋಟಿ ರೂ. ಕಳೆದುಕೊಂಡ ಎಲಾನ್​ ಮಸ್ಕ್​; ಟೆಸ್ಲಾ ಒಡೆಯನ ಎಡವಟ್ಟೇನು? 

    ಆ್ಯಪಲ್​ ಕ್ಲಿಯರ್​ ಮಾಸ್ಕ್​ ಪಾರದರ್ಶಕವಾಗಿದ್ದು, ವೈದ್ಯಕೀಯ ಬಳಕೆಯ ಗುಣಮಟ್ಟದ್ದಾಗಿದೆ. ಅಮೆರಿಕದ ಆಹಾರ ಮತ್ತು ಔಷಧ ಇಲಾಖೆಯ ಮಾನ್ಯತೆಯನ್ನು ಪಡೆದಿರುವುದು ಇದರ ಹೆಗ್ಗಳಿಕೆ.  ಸದ್ಯ ಇದು ಆ್ಯಪಲ್​ ಉದ್ಯೋಗಿಗಳಿಗೆ ಮಾತ್ರ ಎನ್ನಲಾಗಿದ್ದು, ಸಾರ್ವಜನಿಕರಿಗೆ ದೊರೆಯಲಿದೆಯೇ ಎಂಬುದು ಇನ್ನೂ ಖಚಿತಪಟ್ಟಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿವೆ. ಇದರ ಚಿತ್ರಗಳು ಇನ್ನಷ್ಟೇ ಬಿಡುಗಡೆಯಾಗಬೇಕಿದೆ ಎಂದು ಹೇಳಲಾಗಿದೆ.

    ಪಿಎಫ್​ ಗ್ರಾಹಕರಿಗೆ ಸಿಗಲಿದೆ ಏಳು ಲಕ್ಷ ರೂ. ವಿಮಾ ಹಣ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts