More

    ಫಾಕ್ಸ್‌ಕಾನ್, ಸ್ಯಾಮ್‌ಸಂಗ್‌ ಸೇರಿದಂತೆ 5 ಕಂಪನಿಗಳಿಗೆ ಪಿಎಲ್‌ಐ ಯೋಜನೆಯಡಿ 4400 ಕೋಟಿ ರೂ.

    ಬೆಂಗಳೂರು: ಆ್ಯಪಲ್ ಭಾರತದಲ್ಲಿ 3 ಗುತ್ತಿಗೆ ತಯಾರಕರನ್ನು ಹೊಂದಿದೆ. ಇವುಗಳಲ್ಲಿ ಫಾಕ್ಸ್​​​​ಕಾನ್ (ಹಾನ್ ಹೈ), ವಿಸ್ಟ್ರಾನ್​​​​ (ಈಗ ಟಾಟಾ ಗ್ರೂಪ್‌ನ ಓವರ್‌ಶಿಪ್ ಅಡಿಯಲ್ಲಿ) ಮತ್ತು ಪೆಗಾಟ್ರಾನ್ ಸೇರಿವೆ. ಇದೀಗ ದಕ್ಷಿಣ ಕೊರಿಯಾದ ಸ್ಯಾಮ್‌ಸಂಗ್ ಮತ್ತು ದೇಶೀಯ ಎಲೆಕ್ಟ್ರಾನಿಕ್ಸ್ ಕಂಪನಿ ಡಿಕ್ಸನ್ ಟೆಕ್ನಾಲಜೀಸ್ ಸೇರಿದಂತೆ ಈ ಮೂರು ಕಂಪನಿಗಳು ಪಿಎಲ್‌ಐ ಯೋಜನೆಯಡಿ 4,400 ಕೋಟಿ ರೂ.ಗಿಂತ ಹೆಚ್ಚಿನ ಪ್ರೋತ್ಸಾಹಕ ಪಡೆಯಲಿವೆ.

    2022-23ರ ಅರ್ಥಿಕ ವರ್ಷದಲ್ಲಿ ಗುರಿಯನ್ನು ಪೂರ್ಣಗೊಳಿಸಲು ಈ ಕಂಪನಿಗಳು ಹಣವನ್ನು ಪಡೆಯುತ್ತವೆ. ಆದರೆ ಕೆಲವು ಆಯ್ದ 10 ಕಂಪನಿಗಳು ಯೋಜನೆಯಲ್ಲಿ ನಿಗದಿಪಡಿಸಿದ ಉತ್ಪಾದನಾ ಗುರಿಗಳನ್ನು ಪೂರೈಸದ ಕಾರಣ, 2023-24 ಕ್ಕೆ ಮೂಲ ಹಂಚಿಕೆಯಾದ 6,504 ಕೋಟಿ ರೂ.ಗಳನ್ನು ಸಂಪೂರ್ಣವಾಗಿ ಬಳಸಲಾಗುವುದಿಲ್ಲ.

    ಪ್ರೋತ್ಸಾಹಕ ಮೊತ್ತದ ನಿಯಮವೇನು?
    ಗುರಿಯನ್ನು ಸಾಧಿಸಿದ ಒಂದು ವರ್ಷದ ನಂತರ ಕಂಪನಿಗಳು ಪ್ರೋತ್ಸಾಹಕ ಪಡೆಯುತ್ತವೆ. ಗುರಿಗಿಂತ ಹೆಚ್ಚು ಉತ್ಪಾದಿಸುವ ಕಂಪನಿಗಳು ಗುರಿಯನ್ನು ತಲುಪದ ಕಂಪನಿಗಳಿಗೆ ನೀಡದ ಮೊತ್ತಕ್ಕೆ ಕ್ಲೈಮ್ ಮಾಡಬಹುದು.

    Xiaomi ಗುರಿ ತಲುಪಲಿಲ್ಲ
    ಜಾಗತಿಕ ಕಂಪನಿಗಳಲ್ಲಿ, ಚೀನಾದ Xiaomi ಸ್ಮಾರ್ಟ್‌ ಫೋನ್ ಗುತ್ತಿಗೆ ತಯಾರಕ ರೈಸಿಂಗ್ ಸ್ಟಾರ್ (ಇಂಡಿಯಾ FIH), FY21 ರಲ್ಲಿ PLI ಯೋಜನೆಯನ್ನು ಪ್ರಾರಂಭಿಸಿದ ನಂತರ ಗುರಿಯನ್ನು ತಲುಪಲು ವಿಫಲವಾಗಿದೆ. ಇದಕ್ಕಾಗಿ ಎಫ್‌ 23ರಲ್ಲೂ ಗುರಿ ಸಾಧಿಸಲಾಗುವುದಿಲ್ಲ ಎಂದು ಅಂದಾಜಿಸಲಾಗಿದೆ.

    ಈ ಭಾರತೀಯ ಕಂಪನಿಗಳಿಗೂ ಪ್ರೋತ್ಸಾಹಕ ಮೊತ್ತವಿಲ್ಲ
    ವರದಿಯ ಪ್ರಕಾರ, ಒಂದು ಬಾರಿಯೂ ಪಿಎಲ್‌ಐ ಗುರಿಯನ್ನು ತಲುಪದ ಲಾವಾ ಮತ್ತು ಆಪ್ಟಿಮಸ್ ಎಲೆಕ್ಟ್ರಾನಿಕ್ಸ್‌ ನಂತಹ ಭಾರತೀಯ ಕಂಪನಿಗಳು ಸಹ ಪ್ರೋತ್ಸಾಹಕವನ್ನು ಪಡೆಯದಿರುವ ಸಾಧ್ಯತೆಯಿದೆ. 2022-23ರ ಹಣಕಾಸು ವರ್ಷದಲ್ಲಿ ಐದು ಜಾಗತಿಕ ಸಂಸ್ಥೆಗಳು ಗುರಿ ಸಾಧಿಸಿವೆ.

    ಡಿಜಿಟಲ್ ಪಾವತಿಯಲ್ಲಿ ಭಾರತಕ್ಕೆ ಅಗ್ರಸ್ಥಾನ: ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts