ಕಾಗವಾಡ : ಕಳೆದ 24 ವರ್ಷಗಳಿಂದ ಶ್ರೀ ಶ್ರದ್ಧಾ ಕ್ರೆಡಿಟ್ ಸೌಹಾರ್ದ ಸಹಕಾರಿ ಪಾರದರ್ಶಕ ಸೇವೆ ಸಲ್ಲಿಸುತ್ತಿದೆ ಎಂದು ಶ್ರೀ ಶ್ರದ್ಧಾ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಸ್ಥಾಪಕ ಕಾರ್ಯಾಧ್ಯಕ್ಷ ಚಂದ್ರಕಾಂತ ಕೋಠಿವಾಲೆ ಹೇಳಿದರು.
ಸ್ಥಳೀಯ ಚನ್ನಮ್ಮ ವೃತ್ತದ ಹತ್ತಿರ ನಿಪ್ಪಾಣಿಯ ಶ್ರೀ ಶ್ರದ್ಧಾ ಕ್ರೆಡಿಟ್ ಸೌಹಾರ್ದ ಸಹಕಾರಿಯ 11ನೇ ಶಾಖೆಯನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.
ನಿಡಸೋಸಿ ದುರದುಂಡೀಶ್ವರ ಸಿದ್ಧಸಂಸ್ಥಾನಮಠದ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಶಾಖೆಯನ್ನು ಉದ್ಘಾಟಿಸಿದರು. ಗುರುದೇವ ಆಶ್ರಮದ ಯತೀಶ್ವರಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಾಖೆ ಚೇರ್ಮನ್ ಬಸಗೌಡ ಪಾಟೀಲ ದಂಪತಿ ಪೂಜೆ ನೆರವೇರಿಸಿದರು.
ಸಹಕಾರಿ ಉಪಕಾರ್ಯಾಧ್ಯಕ್ಷ ಶಿವಮೂರ್ತಿ ಸ್ವಾಮಿ, ಸಂಚಾಲಕ ಸುರೇಶ ಕೋಠಿವಾಲೆ, ಶಶಿಕಾಂತ ಕೋಠಿವಾಲೆ, ಪಪ್ಪು ಪಾಟೀಲ, ರಾವಸಾಹೇಬ ಪಾಟೀಲ, ರಾಜಶೇಖರ ಹಿರೇಕೊಡಿ, ನರಸಗೊಂಡ ಪಾಟೀಲ, ರಾಜೇಶ ತಿಳವೆ, ಪಿಕೆಪಿಎಸ್ ಅಧ್ಯಕ್ಷ ಜ್ಯೋತಿಕುಮಾರ ಪಾಟೀಲ, ಸುಭಾಷ ಕಠಾರೆ, ರಮೇಶ ಚೌಗುಲೆ, ಸ್ವಪ್ನೀಲ್ ಪಾಟೀಲ, ಶಾಖೆ ಸಂಚಾಲಕ ಬಾಳಗೌಡ ಪಾಟೀಲ, ರಾಜಗೌಡ ಪಾಟೀಲ, ಸಂತೋಷ ಪಾಟೀಲ, ಅಶೋಕ ಕಮತಗೌಡರ, ಪೋಪಟ ಉಪಾಧ್ಯೆ, ಮೃತ್ಯುಂಜಯ ಮಠಪತಿ, ಪ್ರಭುಲಿಂಗ ಪಾಲಭಾವಿ, ಶಿವರಾಮ ಯಲಡಗಿ ಇತರರು ಇದ್ದರು.