More

    55 ಲಕ್ಷ ರೂ. ವಿತ್​ಡ್ರಾಯಲ್​ ಬಿಟ್ಟರೆ, ರಿಯಾ ಅಥವಾ ಸಂಬಂಧಿಕರ ಖಾತೆಗೆ ದೊಡ್ಡ ಮೊತ್ತ ವರ್ಗಾವಣೆಗೊಂಡಿಲ್ಲ

    ಮುಂಬೈ: ಬಾಲಿವುಡ್​ ನಟರಾಗಿದ್ದ ಸುಶಾಂತ್​ ಸಿಂಗ್​ ರಜಪೂರ್​ ಅವರ ಬ್ಯಾಂಕ್​ ಖಾತೆಯಿಂದ ಒಮ್ಮೆ 55 ಲಕ್ಷ ರೂ. ಅನ್ನು ಹಿಂಪಡೆದುಕೊಂಡಿರುವುದು ಹೊರತುಪಡಿಸಿದರೆ, ಬಾಲಿವುಡ್​ ನಟಿ ರಿಯಾ ಚಕ್ರವರ್ತಿ ಅಥವಾ ಅವರ ಸಂಬಂಧಿಕರ ಖಾತೆಗೆ ಭಾರಿ ದೊಡ್ಡ ಮೊತ್ತದ ನಗದು ವರ್ಗಾವಣೆಗೊಂಡಿಲ್ಲ ಎಂದು ಜಾರಿ ನಿರ್ದೇಶನಾಲಯ (ಇಡಿ) ಮೂಲಗಳು ತಿಳಿಸಿವೆ.

    ಇಡಿ ಅಧಿಕಾರಿಗಳು ರಿಯಾ ಅವರನ್ನು ಸತತ 18 ಗಂಟೆ ವಿಚಾರಣೆ ನಡೆಸಿ, ದೊಡ್ಡ ಮೊತ್ತದ ಹಣ ಅವರ ಅಥವಾ ಅವರ ಸಂಬಂಧಿಕರ ಖಾತೆಗಳಿಗೆ ವರ್ಗಾವಣೆಗೊಂಡಿರುವ ಕುರಿತು ಮಾಹಿತಿ ಪಡೆದುಕೊಳ್ಳಲು ಪ್ರಯತ್ನಿಸಿದರು. ಕಳೆದ ಒಂದು ವರ್ಷದ ಅವಧಿಯಲ್ಲಿನ ಸುಶಾಂತ್​ ಬ್ಯಾಂಕ್​ ಖಾತೆಯ ವಹಿವಾಟನ್ನು ಗಮನಿಸುತ್ತಿರುವ ಅವರು, ಸುಶಾಂತ್​ ಅವರು ಕೊಟಾಕ್​ ಬ್ಯಾಂಕ್​ನಲ್ಲಿ ಹೊಂದಿದ್ದ ಖಾತೆಯಿಂದ 55 ಲಕ್ಷ ರೂ. ಅನ್ನು ಹಿಂಪಡೆದುಕೊಂಡಿದ್ದು ಬಿಟ್ಟರೆ, ಬೇರಾವುದೇ ದೊಡ್ಡ ಮೊತ್ತದ ವಹಿವಾಟು ನಡೆದಿರುವುದು ಕಂಡುಬಂದಿಲ್ಲ ಎನ್ನಲಾಗಿದೆ.

    ಕಳೆದ ವಿತ್ತ ವರ್ಷದ ಆರಂಭದಲ್ಲಿ ಸುಶಾಂತ್​ ಖಾತೆಯಲ್ಲಿ 15 ಕೋಟಿ ರೂ. ನಗದು ಇತ್ತು. ಅದರಲ್ಲಿ ಬಹುತೇಕ ಭಾಗದ ಹಣವನ್ನು ತೆರಿಗೆ ಪಾವತಿ ಮತ್ತು ಪ್ರವಾಸ ಸಂಬಂಧಿತ ಪಾವತಿಗಳು ಸೇರಿ ಇತರೆ ಕಾರಣಗಳಿಗಾಗಿ ಬಳಸಲಾಗಿದೆ. ರಿಯಾ ಅವರು ಸುಶಾಂತ್​ ಜತೆ ಯಾವುದೇ ಜಂಟಿ ಖಾತೆ ಹೊಂದಿರಲಿಲ್ಲ ಎಂಬುದು ಕೂಡ ವಿಚಾರಣೆ ವೇಳೆ ಗೊತ್ತಾಗಿರುವುದಾಗಿ ಇಡಿ ಮೂಲಗಳು ಹೇಳಿವೆ.

    ಇದನ್ನೂ ಓದಿ: ದನಗಳ ಹಿಂಬದಿಯಲ್ಲಿ ಕಣ್ಣಿನ ಚಿತ್ರ: ಕಾರಣ ಕೇಳಿದ್ರೆ ಅಚ್ಚರಿಯಾಗೋದು ಖಂಡಿತ

    ತಮ್ಮ ಆದಾಯ ಮತ್ತು ಖರ್ಚಿನ ನಡುವೆ ಅಗಾಧ ವ್ಯತ್ಯಾಸ ಇರುವ ಬಗ್ಗೆ ರಿಯಾ ಅವರನ್ನು ಪ್ರಶ್ನಿಸಲಾಗಿದೆ. ಅಲ್ಲದೆ, ಅವರ ಆದಾಯ ಮತ್ತು ಹೂಡಿಕೆ ಕುರಿತ ಮಾಹಿತಿಯನ್ನು ಸಲ್ಲಿಸುವಂತೆ ಸೂಚಿಸಲಾಗಿದೆ ಎಂದು ತಿಳಿಸಿವೆ.

    ಸುಶಾಂತ್​ ಆರಂಭಿಸಿದ್ದ ಫ್ರಂಟ್​ ಇಂಡಿಯಾ ಫಾರ್​ ವರ್ಲ್ಡ್​ ಫೌಂಡೇಷನ್​ ಮತ್ತು ವಿವಿಡ್​ರೇಜ್​ ರಿಯಾಲಿಟಿಎಕ್ಸ್​ ಪ್ರೈವೇಟ್​ ಲಿಮಿಟೆಡ್​ ಕಂಪನಿಗಳಲ್ಲಿ ರಿಯಾ ಮತ್ತು ಅವರ ಸಹೋದರ ಶೌವಿಕ್​ ಚಕ್ರವರ್ತಿ ನಿರ್ದೇಶಕರಾಗಿದ್ದಾರೆ. ಫ್ರಂಟ್​ ಇಂಡಿಯಾವನ್ನು 2020ರ ಜನವರಿಯಲ್ಲಿ ಆರಂಭಿಸಲಾಗಿದ್ದರೆ, ವಿವಿಡ್​​ರೇಜ್​ ಸಂಸ್ಥೆಯನ್ನು 2019ರ ಸೆಪ್ಟೆಂಬರ್​ನಲ್ಲಿ ಆರಂಭಿಸಲಾಗಿದೆ.

    ರಿಯಾ ಮತ್ತು ಅವರ ಸಂಬಂಧಿಕರ ವಿರುದ್ಧ ಸುಶಾಂತ್​ ಅವರ ತಂದೆ ಕೆ.ಕೆ. ಸಿಂಗ್​ 15 ಕೋಟಿ ರೂ.ಗೂ ಹೆಚ್ಚಿನ ಮೊತ್ತವನ್ನು ತಮ್ಮ ಖಾತೆಗಳಿಗೆ ವರ್ಗಾಯಿಸಿಕೊಂಡಿರುವ ಆರೋಪ ಮಾಡಿದ್ದರು. ಇದನ್ನು ಆಧರಿಸಿ ಇಡಿ ಅಧಿಕಾರಿಗಳು ರಿಯಾ ಮತ್ತು ಅವರ ಕುಟುಂಬ ವರ್ಗದವರ ವಿರುದ್ಧ ಅಕ್ರಮ ನಗದು ವಹಿವಾಟು ನಡೆಸಿದ ಆರೋಪದಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಡಿಜೆ ಹಳ್ಳಿ ಗಲಭೆಯಲ್ಲಿ ಎಸ್​ಡಿಪಿಐ ಪಾತ್ರ ಖಚಿತ, ಸಂಘಟನೆ ನಿಷೇಧಕ್ಕೆ ಸಜ್ಜು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts