More

    ಹೊಸ ಚಿತ್ರದಲ್ಲಿ ಮಾಸ್ಟರ್​ ಚೆಫ್​ ಆದ ಅನುಷ್ಕಾ ಶೆಟ್ಟಿ …

    ಹೈದರಾಬಾದ್: ಎರಡು ವರ್ಷಗಳ ಹಿಂದೆ ಬಿಡುಗಡೆಯಾದ ‘ನಿಶ್ಯಬ್ದಂ’ ಚಿತ್ರದ ನಂತರ ಅನುಷ್ಕಾ ಶೆಟ್ಟಿ ಅಭಿನಯದ ಯಾವೊಂದು ಚಿತ್ರ ಸಹ ಬಿಡುಗಡೆಯಾಗಿರಲಿಲ್ಲ. ನವೀನ್​ ಪೊಲಿಶೆಟ್ಟಿ ನಿರ್ದೇಶನದ ಹೊಸ ಚಿತ್ರದಲ್ಲಿ ಅವರು ನಟಿಸುವ ಸುದ್ದಿಯಾಗಿತ್ತಾದರೂ, ಆ ಚಿತ್ರದ ಹೆಸರೇನು? ಅದರಲ್ಲಿ ಅವರ ಪಾತ್ರವೇನು? ಮುಂತಾದ ಯಾವ ವಿಷಯಗಳಿಗೂ ಉತ್ತರ ಸಿಕ್ಕಿರಲಿಲ್ಲ. ಈಗ ಈ ಪ್ರಶ್ನೆಗಳಿಗೆ ಕೊನೆಗೂ ಉತ್ತರ ಸಿಕ್ಕಿದೆ.

    ಇದನ್ನೂ ಓದಿ: ಇದುವರೆಗೂ ನಾನು ಮಾಡಿದ ಪಾತ್ರಗಳಲ್ಲಿ ಇದೇ ಬೆಸ್ಟ್ … ‘ರೆಮೋ’ ಪಾತ್ರದ ಬಗ್ಗೆ ಆಶಿಕಾ

    ಸೋಮವಾರ ಅನುಷ್ಕಾ ಶೆಟ್ಟಿ ತಮ್ಮ 41ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಅವರು ತಮ್ಮ ಹೊಸ ಚಿತ್ರದ ಪೋಸ್ಟರ್​ವೊಂದನ್ನು ಸೋಷಿಯಲ್​ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ. ಅಂದಹಾಗೆ, ಈ ಚಿತ್ರದಲ್ಲಿ ಅವರು ಚೆಫ್​ ಆಗಿ ಅಭಿನಯಿಸುತ್ತಿರುವುದು ವಿಶೇಷ. ಅಷ್ಟೇ ಅಲ್ಲ, ಚಿತ್ರದಲ್ಲಿ ಅವರ ಹೆಸರು ಅನ್ವಿತಾ ರವಳಿ ಶೆಟ್ಟಿ ಎಂದಾಗಿರುತ್ತದೆ. ತಮ್ಮ ಪಾತ್ರವನ್ನು ಪರಿಚಯಿಸಿಕೊಂಡಿರುವ ಅನುಷ್ಕಾ, ಆದಷ್ಟು ಬೇಗ ತೆರೆಯ ಮೇಲೆ ಕಾಣಿಸಿಕೊಳ್ಳುವ ತಮ್ಮ ಆಸೆ ವ್ಯಕ್ತಪಡಿಸಿದ್ದಾರೆ.

    ಅನುಷ್ಕಾ ತಮ್ಮ ಹೊಸ ಚಿತ್ರದ ಪೋಸ್ಟರ್​ ಹಂಚಿಕೊಳ್ಳುತ್ತಿದ್ದಂತೆಯೇ, ಅವರ ಅಭಿಮಾನಿಗಳು ಖುಷಿಯಾದರು. ಚಿತ್ರಕ್ಕೆ ಕಾಯುತ್ತಿರುವುದಾಗಿ ಹೇಳಿದರು. ಆದಷ್ಟು ಬೇಗ ಚಿತ್ರವನ್ನು ಬಿಡುಗಡೆ ಮಾಡಬೇಕು ಎಂದು ಮನವಿ ಸಲ್ಲಿಸಿದರು.

    ಇದನ್ನೂ ಓದಿ: ವಿಜಯ್​ ಮಲ್ಯ ಪಾತ್ರದಲ್ಲಿ ಅನುರಾಗ್​ ಕಶ್ಯಪ್​? ‘ಫೈಲ್​ ನಂ 323’ ಚಿತ್ರದಲ್ಲಿ ನಟಿಸುವ ಸಾಧ್ಯತೆ …

    ಇನ್ನೂ ಹೆಸರಿಡದ ಈ ಚಿತ್ರವನ್ನು ಮಹೇಶ್​ ಬಾಬು ಪಚಿಗೊಲ್ಲ ನಿರ್ಮಿಸಿದರೆ, ನವೀನ್​ ಪೊಲಿಶೆಟ್ಟಿ ನಿರ್ದೇಶನ ಮಾಡುತ್ತಿದ್ದಾರೆ. ಯುವಿ ಕ್ರಿಯೇಷನ್ಸ್​ನಡಿ ಈ ಚಿತ್ರವು ನಿರ್ಮಾಣಗೊಳ್ಳುತ್ತಿದೆ.

    ‘ಕಾಂತಾರ’ ಸಹ ನನ್ನ ಚಿತ್ರವೇ ಎಂದ ಯಶ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts