More

    ಇನ್ಮುಂದೆ ನಾವು ಇಬ್ಬರಲ್ಲ ಮೂವರು: ಮೊದಲ ಮಗುವಿನ ನಿರೀಕ್ಷೆಯಲ್ಲಿ ವಿರೂಷ್ಕಾ ದಂಪತಿ

    ನವದೆಹಲಿ: ಸ್ಟಾರ್​ ದಂಪತಿಯಾದ ವಿರಾಟ್​ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದು, ಈ ವಿಚಾರವನ್ನು ಅನುಷ್ಕಾ ಅವರು ಟ್ವಿಟರ್​ ಮೂಲಕ ಗುರುವಾರ ಹಂಚಿಕೊಂಡಿದ್ದಾರೆ.

    ಮೊದಲ ಬಾರಿ ಬೇಬಿ ಬಂಪ್​ ಫೋಟೋವನ್ನು ಅನುಷ್ಕಾ ಅವರು ಶೇರ್​ ಮಾಡಿಕೊಂಡಿದ್ದು, ಫೋಟೋದಲ್ಲಿ ವಿರಾಟ್​ ಸಹ ತಂದೆಯಾಗುತ್ತಿರುವ ಖುಷಿಯನ್ನು ವ್ಯಕ್ತಪಡಿಸಿದ್ದಾರೆ.

    ಇದನ್ನೂ ಓದಿ: ಪುಲ್ವಾಮಾ ದಾಳಿಯಲ್ಲಿ ಉಗ್ರರಿಗೆ ನೆರವಾಗಿದ್ದ ಮಹಿಳೆ: ಫಾರೂಕ್ ಖಾತೆಗೆ 10 ಲಕ್ಷ ರೂ. ಜಮಾ ಎಂದ ಎನ್​ಐಎ

    ಇನ್ನು ಮುಂದೆ ನಾವು ಇಬ್ಬರಲ್ಲ, ಮೂವರು. 2021 ಜನವರಿಗೆ ಬರುತ್ತಿದ್ದೇವೆ ಎಂದು ಅನುಷ್ಕಾ ಪೋಟೋ ಜತೆಗೆ ಶೇರ್​ ಮಾಡಿಕೊಂಡಿದ್ದಾರೆ.

    ಅನುಷ್ಕಾ ಮತ್ತು ವಿರಾಟ್​ 2017 ಡಿಸೆಂಬರ್​ನಲ್ಲಿ ಇಟಲಿಯಲ್ಲಿ ಸಪ್ತಪದಿ ತುಳಿದರು. ಸದ್ಯ ಇಬ್ಬರು ಮುಂಬೈ ನಿವಾಸದಲ್ಲಿ ಕ್ವಾರಂಟೈನ್​ನಲ್ಲಿದ್ದಾರೆ. ಝೀರೋ ಚಿತ್ರದ ಬಳಿಕ ಅನುಷ್ಕಾ ನಟನೆಯಲ್ಲಿ ಬ್ರೇಕ್​ ತೆಗೆದುಕೊಂಡಿರುವ ಅನುಷ್ಕಾ, ತಮ್ಮ ಸಿನಿಮಾ ನಿರ್ಮಾಣ ಸಂಸ್ಥೆಯ ಮೇಲೆ ಹೆಚ್ಚು ಗಮನ ಹರಿಸಿದ್ದಾರೆ.

    ಇದನ್ನೂ ಓದಿ: ಪ್ರಿಯಕರನ ಮನೆ ಹತ್ತಿರವೇ ಎಂಬಿಎ ವಿದ್ಯಾರ್ಥಿನಿ ಆತ್ಮಹತ್ಯೆ: ಡೆತ್​ನೋಟ್​ನಲ್ಲಿ ಕಳಚಿಬಿತ್ತು ಲವ್ವರ್ ಮುಖವಾಡ!

    ಇನ್ನು ವಿರಾಟ್​ ದುಬೈನಲ್ಲಿ ನಡೆಯಲಿರುವ ಐಪಿಎಲ್​ಗೆ ಸಿದ್ಧತೆ ಮಾಡಿಕೊಂಡಿದ್ದಾರೆ. ಕರೊನಾ ವೈರಸ್​ ಹಿನ್ನೆಲೆಯಲ್ಲಿ ದೇಶದಲ್ಲಿ ನಡೆಯಬೇಕಿದ್ದ ಐಪಿಎಲ್​ ಟೂರ್ನಿಯನ್ನು ದುಬೈಗೆ ಸ್ಥಳಾಂತರಿಸಲಾಗಿದೆ. (ಏಜೆನ್ಸೀಸ್​)

    ದುಬಾರಿ ಬೆಲೆಯ 15 ಸಾವಿರ ಮೊಬೈಲ್​ ಸಾಗಿಸ್ತಿದ್ದ ಟ್ರಕ್​ ಆಂಧ್ರ ಗಡಿ ಪ್ರವೇಶಿಸುತ್ತಿದ್ದಂತೆ ಹೈಜಾಕ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts