More

    ಆರು ಭಾಷೆಗಳಿಗೆ ರೀಮೇಕ್ ಆಗಿತ್ತು ಅಣ್ಣಾವ್ರ ಈ ಸಿನಿಮಾ!

    ಕನ್ನಡದಲ್ಲಿ ಕ್ಲಾಸಿಕ್ ಚಿತ್ರ ಎಂದು ಪರಿಗಣಿಸಲಾಗಿರುವ ‘ಸಂಸ್ಕಾರ’ 50 ವರ್ಷಗಳನ್ನು ಮುಗಿಸಿದೆ. ಇನ್ನು ‘ಓಂ’ ಬಿಡುಗಡೆಯಾಗಿ ಮೇ 19ಕ್ಕೆ 25 ವರ್ಷಗಳಾಗಿವೆ. ಈ ಮಧ್ಯೆ ಇನ್ನೂ ಒಂದು ಚಿತ್ರ ಸದ್ದಿಲ್ಲದೆ 34 ವರ್ಷಗಳನ್ನು ಯಶಸ್ವಿಯಾಗಿ ಮುಗಿಸಿದೆ. ಅದೇ ಡಾ. ರಾಜಕುಮಾರ್ ಅಭಿನಯದ ‘ಅನುರಾಗ ಅರಳಿತು’.

    ಆರು ಭಾಷೆಗಳಿಗೆ ರೀಮೇಕ್ ಆಗಿತ್ತು ಅಣ್ಣಾವ್ರ ಈ ಸಿನಿಮಾ!‘ಅನುರಾಗ ಅರಳಿತು’ ಚಿತ್ರವು 1986ರ ಮೇ 16ರಂದು ರಾಜ್ಯಾದ್ಯಂತ ಬಿಡುಗಡೆಯಾಗಿದ್ದಷ್ಟೇ ಅಲ್ಲ, 25 ವಾರಗಳ ಯಶಸ್ವಿ ಪ್ರದರ್ಶನವನ್ನೂ ಕಂಡಿತ್ತು. ಎಚ್.ಜಿ. ರಾಧಾದೇವಿ ಅವರ ‘ಅನುರಾಗದ ಅಂತಃಪುರ’ ಹೆಸರಿನ ಕಾದಂಬರಿಯನ್ನು ಆಧರಿಸಿದ ಈ ಚಿತ್ರದಲ್ಲಿ ಡಾ. ರಾಜಕುಮಾರ್, ಮಾಧವಿ, ಗೀತಾ, ಪಂಢರಿಬಾಯಿ, ಅಶ್ವತ್ಥ್ ಮುಂತಾದವರು ನಟಿಸಿದ್ದರು. ಇನ್ನು ಈ ಚಿತ್ರಕ್ಕೆ ಉಪೇಂದ್ರ ಕುಮಾರ್ ಅವರು ಸಂಯೋಜಿಸಿದ್ದ ‘ಶ್ರೀಕಂಠ ವಿಷಕಂಠ …’, ‘ಗಂಗಾ ಯಮುನಾ ಸಂಗಮ …’, ‘ನೀ ನಡೆದರೆ ಸೊಗಸು …’ ಮುಂತಾದ ಹಾಡುಗಳು ಈಗಲೂ ಜನಪ್ರಿಯ. ಎಲ್ಲಕ್ಕಿಂತ ಮುಖ್ಯವೆಂದರೆ, ಎಂ.ಎಸ್. ರಾಜಶೇಖರ್ ನಿರ್ದೇಶನದ ಈ ಚಿತ್ರ ಆರು ಭಾಷೆಗಳಿಗೆ ರೀಮೇಕ್ ಆಗಿರುವುದು.

    ಇದನ್ನೂ ಓದಿ: ಕರಾವಳಿ ಸೊಗಡಿನ ಮಡಿ

    ಹೌದು, ಕನ್ನಡದ ಯಾವೊಂದು ಚಿತ್ರ ಸಹ ಇಷ್ಟೊಂದು ಭಾಷೆಗಳಿಗೆ ರೀಮೇಕ್ ಆಗಿರಲಿಲ್ಲ. ಅಂಥದ್ದೊಂದು ಹೆಗ್ಗಳಿಗೆ ‘ಅನುರಾಗ ಅರಳಿತು’ ಚಿತ್ರಕ್ಕಿದೆ. ಈ ಚಿತ್ರ ಮೊದಲು ರೀಮೇಕ್ ಆಗಿದ್ದು ತಮಿಳಿಗೆ. ರಜನಿಕಾಂತ್ ಅಭಿನಯದಲ್ಲಿ ಈ ಚಿತ್ರವನ್ನು ‘ಮನ್ನನ್’ ಎಂಬ ಹೆಸರಿನಲ್ಲಿ ರೀಮೇಕ್ ಮಾಡಿದ್ದರು ಪಿ. ವಾಸು. ಆ ನಂತರ ಈ ಚಿತ್ರ ‘ಘರಾನಾ ಮೊಗುಡು’ ಎಂಬ ಹೆಸರಿನಲ್ಲಿ ತೆಲುಗಿಗೆ ರೀಮೇಕ್ ಆಯಿತು. ಚಿರಂಜೀವಿ ಅಭಿನಯದ ಈ ಚಿತ್ರ ಅಲ್ಲೂ ಸೂಪರ್ ಹಿಟ್ ಆಯಿತು. ಅಷ್ಟೇ ಅಲ್ಲ, ನಟಿ ನಗ್ಮಾಗೆ ತೆಲುಗಿನಲ್ಲಿ ಈ ಚಿತ್ರದ ನಂತರ ಜನಪ್ರಿಯತೆ ಸಾಕಷ್ಟು ಹೆಚ್ಚಾಯಿತು.

    ಇದನ್ನೂ ಓದಿ: ಈ ಕಾರಣಕ್ಕೆ ಇನ್ಸ್ಟಾಗ್ರಾಂ ಡಿ-ಆ್ಯಕ್ಟಿವೇಟ್​ ಮಾಡಿದ್ರಾ ಕಣ್ಸನ್ನೆ ಹುಡುಗಿ ಪ್ರಿಯಾ!

    ಅದಾದ ಎರಡು ವರ್ಷಗಳಲ್ಲೇ ಅನಿಲ್ ಕಪೂರ್, ಶ್ರೀದೇವಿ ಮತ್ತು ರವೀನಾ ಟಂಡನ್ ಅಭಿನಯದಲ್ಲಿ ‘ಲಾಡ್ಲಾ’ ಎಂಬ ಚಿತ್ರ ಹಿಂದಿಯಲ್ಲಿ ಬಂತು. ಈ ಚಿತ್ರ ಸಹ ‘ಅನುರಾಗ ಅರಳಿತು’ ಚಿತ್ರದ ರೀಮೇಕ್ ಆಗಿತ್ತು. ನಂತರದ ವರ್ಷಗಳಲ್ಲಿ ಬಂಗಾಲಿಯಲ್ಲಿ ‘ಜಮಾಯಿಬಾಬು ಜಿಂದಾಬಾದ್’ ಮತ್ತು ಒಡಿಯಾದಲ್ಲಿ ‘ಸಿಂಧೂರ ನುಹೇನ್ ಖೇಲಾ ಘರಾ’ ಎಂಬ ಹೆಸರಿನಲ್ಲಿ ರೀಮೇಕ್ ಆಗಿತ್ತು. ಇನ್ನೊಂದು ವಿಶೇಷತೆ ಎಂದರೆ, ಬಾಂಗ್ಲಾದೇಶದಲ್ಲೂ ‘ಶಮಿ ಸ್ತಿರ್ ಜುದ್ದೋ’ ಎಂಬ ಹೆಸರಿನಲ್ಲಿ ರೀಮೇಕ್ ಆಯಿತು ಎಂದು ಹೇಳಲಾಗುತ್ತದೆ.

    ಅಲ್ಲಿಗೆ, ಅಣ್ಣಾವ್ರ ಚಿತ್ರವೊಂದು ಇಲ್ಲಿ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿದ್ದಷ್ಟೇ ಅಲ್ಲ, ಆರು ಬಾರಿ ಬೇರೆ ಭಾಷೆಗಳಿಗೆ ರೀಮೇಕ್ ಆಗಿದ್ದು ವಿಶೇಷ.

    ಆನ್​ಲೈನ್​ನಲ್ಲೇ ಲಾಸ್ಯಾ ಡಯಟಿಕ್ಸ್ ಕೋರ್ಸ್; ಮನೆಯಲ್ಲಿದ್ದೇ ಸಾಕಷ್ಟು ಕಲಿಯಬಹುದು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts