More

    ಕರಾವಳಿ ಸೊಗಡಿನ ಮಡಿ

    ಬೆಂಗಳೂರು: ಮಂಗಳೂರು ಮತ್ತು ಆ ಭಾಗದ ಆಟಿ ಕಳಂಜ ಎನ್ನುವ ಜನಪದ ಕಲೆಯನ್ನು ಪ್ರಧಾನವಾಗಿಸಿಕೊಂಡು ಸಿದ್ಧವಾಗಿದೆ ‘ಮಡಿ’ ಕಿರುಚಿತ್ರ. ಈಗಾಗಲೇ ಹಲವು ಧಾರಾವಾಹಿಗಳಿಗೆ ನಿರ್ದೇಶನ ಮಾಡಿದ ಅನುಭವ ಇರುವ ಸುಧೀರ್ ಅತ್ತಾವರ್ ‘ಮಡಿ’ ಕಿರುಚಿತ್ರಕ್ಕೆ ಆಕ್ಷನ್-ಕಟ್ ಹೇಳಿದ್ದು, ಭಾನುವಾರ ಈ ಚಿತ್ರ ಝುೂಮ್ ಮೂಲಕ ಆನ್​ಲೈನ್​ನಲ್ಲಿ ಪ್ರದರ್ಶನ ಕಂಡಿತು.

    ಹಾಗಾದರೆ ಏನಿದು ಮಡಿ? ‘ಊರಲ್ಲಿ ಕಾಣಿಸಿಕೊಳ್ಳುವ ಸಾಂಕ್ರಾಮಿಕ ರೋಗವನ್ನು ಹೊಡೆದೋಡಿಸಲು ಕರಾವಳಿ ಭಾಗದಲ್ಲಿ ಆಟಿ ಕಳಂಜ ಎನ್ನುವ ಶಕ್ತಿಯನ್ನು ಜನಪದ ಕಲೆಯ ರೂಪದಲ್ಲಿ ಪ್ರದರ್ಶಿಸಲಾಗುತ್ತದೆ. ಆ ಪ್ರದರ್ಶನವನ್ನು ನಲಿಕೆ ಜನಾಂಗದವರವಷ್ಟೇ ಪ್ರದರ್ಶಿಸಬೇಕೆಂಬುದು ಮೊದಲಿಂದಲೂ ನಡೆದುಕೊಂಡು ಬಂದಿರುವ ವಾಡಿಕೆ. ಆದರೆ, ಊರಿಗಾಗಿ ಒಳ್ಳೆಯದನ್ನು ಬಯಸುವ ಆ ಜನಾಂಗದವರನ್ನು ಯಾರೂ ಮುಟ್ಟಿಸಿಕೊಳ್ಳುವುದಿಲ್ಲ. ಯಾಕೆ ಎಂಬುದನ್ನು ಕಿರುಚಿತ್ರದಲ್ಲಿಯೇ ಹೇಳಿದ್ದೇನೆ’ ಎಂದು ಮಾಹಿತಿ ನೀಡುತ್ತಾರೆ ಸುಧೀರ್ ಅತ್ತಾವರ್.

    ಒಟ್ಟು 25 ನಿಮಿಷದ ಈ ಕಿರುಚಿತ್ರದಲ್ಲಿ ಗಾಯಕಿ ಎಂ.ಡಿ ಪಲ್ಲವಿ ಸೇರಿ ಹಲವರು ನಟಿಸಿದ್ದಾರೆ. ಸಕ್ಸಸ್ ಫಿಲಂಸ್ ಮತ್ತು ಸೂರಜ್ ವಿಷುವಲ್ಸ್ ಪ್ರೊಡಕ್ಷನ್ಸ್ ಅಡಿಯಲ್ಲಿ ಚಿತ್ರ ನಿರ್ವಣವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts