More

    ಆನ್​ಲೈನ್​ನಲ್ಲೇ ಲಾಸ್ಯಾ ಡಯಟಿಕ್ಸ್ ಕೋರ್ಸ್; ಮನೆಯಲ್ಲಿದ್ದೇ ಸಾಕಷ್ಟು ಕಲಿಯಬಹುದು

    ಬೆಂಗಳೂರು: ಸಿನಿಮಾ, ಶೂಟಿಂಗ್, ಪ್ರವಾಸ ಅಂದುಕೊಂಡಿದ್ದ ಸೆಲೆಬ್ರಿಟಿಗಳು ಈಗ ಮನೆಯಲ್ಲೇ ಲಾಕ್​ಡೌನ್ ಆಗಿದ್ದಾರೆ. ಅದೂ ಬರೋಬ್ಬರಿ ಒಂದೂವರೆ ತಿಂಗಳಿಂದ ಮನೆಯಲ್ಲೇ ಕುಳಿತು ಹೊರಗಿನ ಮಾಹಿತಿ ತಿಳಿದುಕೊಳ್ಳುತ್ತಿದ್ದಾರೆ. ಇನ್ನು ಕೆಲವರು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿದ್ದಾರೆ. ಇನ್ನು ಅನೇಕ ಮಂದಿಗೆ ಕುಟುಂಬದೊಂದಿಗೆ ಇಷ್ಟು ದಿನಗಳ ಕಾಲ ಒಟ್ಟಿಗೆ ಕಳೆಯುವ ಅವಕಾಶ ಸಿಕ್ಕಿದೆ. ಇದರೊಂದಿಗೆ ಹೊರ ಹೋಗುವಾಗ ಹೇಗೆ ಸುರಕ್ಷಿತವಾಗಿರಬೇಕು ಎಂಬುದನ್ನು ಚಾಚೂ ತಪ್ಪದೆ ಪಾಲಿಸುತ್ತಿದ್ದಾರೆ. ಕರೊನಾ ತಡೆಗೆ ಸುರಕ್ಷತೆ ಅನುಸರಿಸುವ ಜತೆಗೆ ಒಂದೂವರೆ ತಿಂಗಳಿಂದ ಮನೆಯಲ್ಲೇ ಇದ್ದು ಹೊರಗಿನ ಪ್ರಪಂಚವನ್ನು ಮಿಸ್ ಮಾಡಿಕೊಳ್ಳುತ್ತಿರುವ ಲಾಸ್ಯಾ ನಾಗರಾಜ್, ಸದ್ಯ ಆನ್​ಲೈನ್​ನಲ್ಲಿ ಡಿಪ್ಲೋಮಾ ಇನ್ ನ್ಯೂಟ್ರಿಷಿಯನ್ ಆಂಡ್ ಡಯಟಿಕ್ಸ್ ಕೋರ್ಸ್ ಮಾಡುತ್ತಿದ್ದಾರೆ.

    ‘ಸಿನಿಮಾ, ಶೂಟಿಂಗ್ ಅಂತ ಪ್ರತಿದಿನ ಓಡಾಡುತ್ತಿದ್ದ ನನಗೆ ಬೇರೆ ಕೆಲಸಕ್ಕೆ ಸಮಯ ಸಿಗುತ್ತಿರಲಿಲ್ಲ. ಒಂದರ್ಥದಲ್ಲಿ ಲಾಕ್​ಡೌನ್ ನನಗೆ ಸಹಕಾರಿಯಾಯಿತು. ಡಯಟ್ ಬಗ್ಗೆ ಒಬ್ಬೊಬ್ಬರು ಒಂದೊಂದು ರೀತಿ ಮಾತನಾಡುತ್ತಿದ್ದರು. ಇದನ್ನು ತಿಳಿದುಕೊಳ್ಳುವ ಸಲುವಾಗಿಯೇ ಕೋರ್ಸ್​ಗೆ ಸೇರಿದೆ. ಈಗ ಡಯಟ್, ನ್ಯೂಟ್ರಿಷಿಯನ್ ಫುಡ್ ಬಗ್ಗೆ ಆನ್​ಲೈನ್ ಕ್ಲಾಸ್ ಮೂಲಕ ತಿಳಿದುಕೊಳ್ಳುತ್ತಿದ್ದೇನೆ. ಎಲ್ಲವನ್ನೂ ಮನೆಯಿಂದ ಹೊರ ಹೋಗಿಯೇ ಕಲಿಯಬೇಕು ಅಂತೇನಿಲ್ಲ. ಮನೆಯಲ್ಲೇ ಇದ್ದು ಸಾಕಷ್ಟು ವಿಷಯ ಕಲಿಯಬಹುದು. ನಟನೆಯತ್ತ ವಾಲಿದ ಮೇಲೆ ನೃತ್ಯಕ್ಕೆ ಅಷ್ಟು ಸಮಯ ಸಿಗುತ್ತಿರಲಿಲ್ಲ. ಈಗ ನೃತ್ಯಾಭ್ಯಾಸ ಮುಂದುವರಿಸಿದ್ದೇನೆ. ಅಮ್ಮನೇ ನನಗೆ ಗುರು. ಅಮ್ಮನೊಂದಿಗೆ ಸೇರಿ ನೃತ್ಯ ಕಲಿಯುತ್ತಿದ್ದೇನೆ, ನಟನೆಯ ಕುರಿತು ಪುಸ್ತಕ ಓದಿ ನಟನೆ ಕರಗತ ಮಾಡಿಕೊಳ್ಳುತ್ತಿದ್ದೇನೆ’ ಎನ್ನುತ್ತಾರೆ ಲಾಸ್ಯಾ.

    ಇದನ್ನೂ ಓದಿ: ಭಾರತದ ಕೆಂಪು ದೀಪದ ಹಿಂದಿದೆ ಕರೊನಾ ಭಯಂಕರ ರಹಸ್ಯ- ಎಚ್ಚೆತ್ತುಕೊಳ್ಳದಿದ್ದರೆ ಅಪಾಯ ಎಂದಿದೆ ಅಮೆರಿಕ

    ಟೆಕ್ನಾಲಜಿ ನನಗೆ ರಾಕೆಟ್ ಸೈನ್ಸ್ ಇದ್ದಂತೆ: ‘ನಾನು ನಟನೆಯಲ್ಲಿ ಏಷ್ಟೇ ಪಕ್ವವಾದರೂ ಟೆಕ್ನಾಲಜಿ ವಿಷಯಕ್ಕೆ ಬಂದರೆ ಬಹಳ ಹಿಂದೆ. ಲ್ಯಾಪ್​ಟಾಪ್ ಆನ್ ಮಾಡಿ ಆಫ್ ಮಾಡೋದಷ್ಟೇ ಗೊತ್ತು. ಸ್ವಲ್ಪ ಆಚೆ ಈಚೆ ಆದರೂ ಏನು ಮಾಡಬೇಕು ಅಂತ ಗೊತ್ತಿಲ್ಲ. ಈ ಲಾಕ್​ಡೌನ್ ಸಮಯದಲ್ಲಿ ಒಂದು ಆಪ್ ಬಳಸಿ ಟೆಕ್ನಾಲಜಿ ಬಗ್ಗೆ ಸಾಕಷ್ಟು ತಿಳಿದುಕೊಂಡೆ. ‘ಹೆಲೆನ್’ ಎನ್ನುವ ಮಲಯಾಳಂ ಸಿನಿಮಾ ರಿಮೇಕ್​ನಲ್ಲಿ ನಟಿಸುತ್ತಿದ್ದೇನೆ. ಅದರಲ್ಲಿ ನನ್ನದು ಮೊಲದೊಂದಿಗೆ ಒಂದು ಪಾತ್ರವಿದೆ. ಮುಂದೆ ಶೂಟಿಂಗ್​ಗೆ ಅನುಕೂಲವಾಗಲಿ ಎಂದು ಒಂದು ಮೊಲವನ್ನು ನಿರ್ದೇಶಕರು ಮನೆಗೆ ಕಳುಹಿಸಿದ್ದಾರೆ. ಒಂದಷ್ಟು ಸಮಯ ಅದರೊಂದಿಗೆ ಕಳೆಯಲು ಮೀಸಲಿಟ್ಟಿದ್ದೇನೆ’ ಎಂಬುದು ನಟಿ ಲಾಸ್ಯಾ ಮಾತು.

    ಸಮಾಜ ಸೇವೆಗೂ ಸಮಯ: ‘ಇಲ್ಲಿ ನಮ್ಮ ಸುರಕ್ಷತೆಯೊಂದಿಗೆ ಸಮಾಜ ಸೇವೆಯೂ ಅಷ್ಟೇ ಮುಖ್ಯವಾಗುತ್ತದೆ. ಅನೇಕ ಮಂದಿ ಊಟವಿಲ್ಲದೆ ಪರದಾಡುತ್ತಿದ್ದಾರೆ. ಅವರಿಗೆ ಸಹಾಯ ಮಾಡುವುದು ನಮ್ಮ ಕರ್ತವ್ಯ. ಈ ಕಾರಣದಿಂದಲೇ ಸಣ್ಣ ಪುಟ್ಟ ಸಮಾಜ ಸೇವೆ ಮಾಡುತ್ತಿದ್ದೇನೆ. ಊಟ ನೀಡುವುದಷ್ಟೇ ಅಲ್ಲ ಕೈ. ಬಾಯಿ ಹೇಗೆ ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂಬ ಅರಿವೂ ಈಗ ಅಗತ್ಯ. ನಮ್ಮ ಏರಿಯಾ ಸುತ್ತ ಸೋಂಕು ನಿವಾರಕ ಸಿಂಪಡಿಸುವಾಗ ಅವರೊಂದಿಗೆ ನಾನೂ ತೆರಳಿ ಇದರಿಂದಾಗುವ ಪ್ರಯೋಜನಗಳ ಬಗ್ಗೆ ತಿಳಿಸುತ್ತಿದ್ದೇನೆ’ ಎಂದೂ ಉಚ್ಛರಿಸುತ್ತಾರವರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts