More

    ಕರಾಚಿಯಲ್ಲಿ ಜನಾಂಗೀಯ ಹಿಂಸಾಚಾರದ ಭೀತಿ

    ಕರಾಚಿ: ಪಾಕಿಸ್ತಾನದ ರಾಜದಾನಿ ಕರಾಚಿ ಜನಾಂಗೀಯ ಹಿಂಸಾಚಾರದ ಭೀತಿಗೆ ಒಳಗಾಗಿದೆ. ಕಳೆದ ಎರಡು ದಿನಗಳಿಂದ ಅಲ್ಲಿ ಭಾರಿ ಪ್ರತಿಭಟನೆ ನಡೆಯುತ್ತಿದ್ದು, ಶಿಯಾ ವಿರೋಧಿ ಪ್ರತಿಭಟನೆ ತೀವ್ರಗೊಂಡಿದೆ. ಕರಾಚಿ ನಗರದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸುನ್ನಿ ಸಮುದಾಯದ ಪ್ರತಿಭಟನಾಕಾರರು ಸೇರಿಕೊಂಡಿದ್ದು, ಶನಿವಾರವೂ ಪ್ರತಿಭಟನೆ ಮುಂದುವರಿಸಿದ್ದಾರೆ. ಪ್ರತಿಭಟನಾಕಾರರಿಗೆ ಸುನ್ನಿ ತೀವ್ರವಾದಿಗಳ ಸಂಪರ್ಕವಿದ್ದು, ಹಿಂಸಚಾರದ ಭೀತಿ ಕಾಡಿದೆ.

    ಸುನ್ನಿ ಸಮುದಾಯ ಪ್ರಾಬಲ್ಯದ ಪಾಕಿಸ್ತಾನದಲ್ಲಿ, ಶಿಯಾ ನಾಯಕರ ವಿರುದ್ಧ ಧರ್ಮನಿಂದನೆ ಆರೋಪ, ಪ್ರತಿಭಟನೆಗಳು ಹೊಸದೇನಲ್ಲ. ಈ ಹಿಂದೆಯೂ ಈ ರೀತಿಯ ಪ್ರತಿಭಟನೆಗಳಾಗಿವೆ. ಕಳೆದ ತಿಂಗಳು ಅಶುರಾ ಮೆರವಣಿಗೆ ನಡೆದ ಸಂದರ್ಭದಲ್ಲಿ ಶಿಯಾ ನಾಯಕರು ಪ್ರವಾದಿಗಳ ಬಗ್ಗೆ ಕೆಟ್ಟ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ ಎಂಬುದು ಸುನ್ನಿ ಸಮುದಾಯದವರ ಆರೋಪ.

    ಇದನ್ನೂ ಓದಿ: ಮಹಿಳೆಯರ ರಕ್ಷಣೆಗೆ ಕೋರ್ಟ್‌ಗಳು ಕೃಷ್ಣನಂತಾಗಬೇಕು ಎಂದ ಹೈಕೋರ್ಟ್

    ಸದ್ಯ ಕರಾಚಿಯಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿರುವವರ ಸಂಖ್ಯೆ 30,000ಕ್ಕೂ ಹೆಚ್ಚು ಎಂಬುದು ರಕ್ಷಣಾ ಪಡೆಗಳ ಲೆಕ್ಕಾಚಾರ. ಇದುವರೆಗೆ ಹಿಂಸಾಚಾರದ ವರದಿ ಇಲ್ಲ. ಸುನ್ನಿ ಆರ್ಗನೈಸೇಶನ್ ಜಮಾತ್​ ಅಹ್ಲೇ ಸುನ್ನತ್ ಮತ್ತು ಇಸ್ಲಾಮಿಸ್ಟ್ ಪಾರ್ಟಿ ತೆಹ್ರೀಕ್ ಏ ಲಬ್ಬೈಕ್​ ಪಾಕಿಸ್ತಾನ್ ಈ ಪ್ರತಿಭಟನೆಯನ್ನು ಆಯೋಜಿಸಿದೆ. (ಏಜೆನ್ಸೀಸ್)

    4 ವರ್ಷ ಪ್ರಯತ್ನಿಸಿದರೂ ಪ್ರಶ್ನೆಪತ್ರಿಕೆ ಸೋರಿಕೆ ಕಿಂಗ್‌ಪಿನ್‌ಗೆ ಸಿಗಲಿಲ್ಲ ಜಾಮೀನು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts