More

    ಆಕಾಶದಲ್ಲೇನಿದು ‘ರುದ್ರಂ’ ಹಾರಾಟ?: ರೇಡಿಯೇಷನ್ನೇ ಇದರ ಟಾರ್ಗೆಟ್​..

    ನವದೆಹಲಿ: ರೇಡಿಯೊ ತರಂಗಾಂತರವೇ ಇದರ ಗುರಿ, ರೇಡಿಯೇಷನ್​ ವಿರುದ್ಧ ಇದು ರುದ್ರ ಭಯಂಕರ. ಅಸಲಿಗೆ ಇದರ ಹೆಸರೇ ರುದ್ರಂ. ಇದು ಇಂದು ಆಕಾಶದಲ್ಲಿ ಹಾರಾಟ ನಡೆಸಿದ್ದಲ್ಲದೆ ತನ್ನ ಶಕ್ತಿಯನ್ನು ಸಾಬೀತುಪಡಿಸಿದೆ.

    ಇದು ಸ್ವದೇಶಿ ನಿರ್ಮಿತ ಆ್ಯಂಟಿ ರೇಡಿಯೇಷನ್​ ಮಿಸ್ಸೈಲ್​ ರುದ್ರಂ ಕುರಿತ ಮಾತು. ವಾಯುಸೇನೆಗೆಂದು ರೂಪಿಸಲಾಗಿರುವ ದೇಶದ ಪ್ರಥಮ ಆ್ಯಂಟಿ ರೇಡಿಯೇಷನ್​ ಕ್ಷಿಪಣಿ ರುದ್ರಂ 1ರ ಪ್ರಾಯೋಗಿಕ ಹಾರಾಟ ಶುಕ್ರವಾರ ಯಶಸ್ವಿಯಾಗಿ ನಡೆದಿದ್ದು, ಇದರ ಬಗ್ಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಹೊಸ ಪೀಳಿಗೆಯ ರೇಡಿಯೇಷನ್​ ನಿರೋಧಕ ಕ್ಷಿಪಣಿ ರುದ್ರಂ ಒಡಿಶಾದ ಕರಾವಳಿಯ ದ್ವೀಪ ಪ್ರದೇಶದಲ್ಲಿನ ದ್ವಿಚಕ್ರ ವಾಹನದಲ್ಲಿರಿಸಿದ್ದ ರೇಡಿಯೇಷನ್​ ಗುರಿಯನ್ನು ಪತ್ತೆ ಹಚ್ಚಿ ಪ್ರಾಯೋಗಿಕ ಪರೀಕ್ಷೆಯಲ್ಲಿ ಯಶಸ್ವಿಯಾಗಿದೆ. ಇದನ್ನು ಎಸ್​ಯು-30 ಎಂಕೆಐ ಯುದ್ಧವಿಮಾನ ಮೂಲಕ ಉಡಾಯಿಸಲಾಗಿದೆ ಎಂದು ಡಿಆರ್​ಡಿಒ ತಿಳಿಸಿದೆ.

    ಈ ಮೂಲಕ ಶತ್ರು ದೇಶಗಳ ರಾಡಾರ್, ಕಮ್ಯುನಿಕೇಷನ್​ ಸೈಟ್ಸ್​ ಮತ್ತು ರೇಡಿಯೋ ತರಂಗಾಂತರದ ಇತರ ಗುರಿಗಳ ವಿರುದ್ಧ ದೇಶದ ತನ್ನದೇ ಆದ ಆ್ಯಂಟಿ ರೇಡಿಯೇಷನ್​ ಕ್ಷಿಪಣಿಯನ್ನು ಹೊಂದಿದಂತಾಗಿದೆ ಎಂದು ಡಿಆರ್​ಡಿಒ ಹೇಳಿಕೊಂಡಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts