More

    ಮಾಸ್ಕ್​ ಧರಿಸೋದು ಜೀವ ವಿರೋಧಿ ಕೃತ್ಯ; ಹುಟ್ಟಿಕೊಂಡಿದ್ದಾರೆ ‘ಆ್ಯಂಟಿ ಮಾಸ್ಕ್​ರ್ಸ್​’

    ವಾಷಿಂಗ್ಟನ್​: ಕೋವಿಡ್​ ಕಾಲಮಾನದಲ್ಲಿ ಹೊಸ ವಿರೋಧಿಗಳ ಪಂಗಡವೊಂದು ಹುಟ್ಟಿಕೊಂಡಿದೆ. ಮಾರ್ಕ್ಸ್ ವಿರೋಧಿಗಳಂತೆ ಇವರು ಮಾಸ್ಕ್​ ವಿರೋಧಿಗಳು. ಇವರನ್ನು ಆ್ಯಂಟಿ ಮಾಸ್ಕ್​ರ್ಸ್​ ಎಂದೇ ಕರೆಯಲಾಗುತ್ತಿದೆ. ಇವರ ವಾದ ಕೇಳಿದ್ರೆ ಖಂಡಿತ ದಂಗಾಗ್ತೀರಾ…!

    ಅಮೆರಿಕದಲ್ಲಿ ಮೊದಲಿನಿಂದಲೂ ಲಾಕ್​ಡೌನ್​ ನಿಯಮಗಳಿಗೆ ಭಾರಿ ವಿರೋಧವಿದೆ. ಲಾಕ್​ಡೌನ್​ ಬೇಡ ಎಂದು ಜನರು ಬೀದಿಗಿಳಿದು ಪ್ರತಿಭಟಿಸಿದ್ದರು. ಈ ಸ್ವಚ್ಛಂದತೆಯ ಕಾರಣದಿಂದಾಗಿಯೇ ಸದ್ಯ ಅಮೆರಿಕದಲ್ಲಿ ಕರೊನಾ ಸೋಂಕಿತರ ಸಂಖ್ಯೆ 25 ಲಕ್ಷ ದಾಟಿದೆ. ಇದೇ ಪ್ರಮಾಣದಲ್ಲಿ ಮುಂದುವರಿದರೆ 3 ಕೋಟಿ ದಾಟುವ ಅಂದಾಜಿದೆ.

    ಇದನ್ನೂ ಓದಿ; ಲಾಕ್​ಡೌನ್​ ಮರೆತು ಬಿಡಿ, ಅನ್​ ಲಾಕ್​ಡೌನ್ 2.0 ಗೆ ಸಿದ್ಧರಾಗಿ; ಶಾಲಾ- ಕಾಲೇಜು, ಮೆಟ್ರೋ ಆರಂಭಕ್ಕೆ ಮಾರ್ಗಸೂಚಿ ಸಜ್ಜು

    ಕರೊನಾ ಸೋಂಕನ್ನು ದೂರವಿಡಲು ವ್ಯಕ್ತಿಗತ ಅಂತರ ಕಾಯ್ದುಕೊಳ್ಳುವುದು ಹಾಗೂ ಮಾಸ್ಕ್​ ಧರಿಸುವುದು ಅನಿವಾರ್ಯವಾಗಿದೆ. ಆದರೆ, ಅಮೆರಿಕದಲ್ಲಿ ಇದಕ್ಕೂ ಭಾರಿ ವಿರೋಧ ವ್ಯಕ್ತವಾಗುತ್ತಿದೆ. ಫ್ಲೋರಿಡಾದಲ್ಲಿ ಆ್ಯಂಟಿ ಮಾಸ್ಕ್​ರ್ಸ್​ ಎಂಬ ಗುಂಪೇ ಹುಟ್ಟಿಕೊಂಡಿದೆ. ನಾವು ಮಾಸ್ಕ್​ ಧರಿಸುವುದಿಲ್ಲ ಎಂದು ಘೋಷಿಸುತ್ತಿದ್ದಾರೆ. ಅದಕ್ಕೆ ಇವರು ನೀಡುತ್ತಿರುವ ಕಾರಣಗಳನ್ನು ಕೇಳಿದ್ರೆ ಅಚ್ಚರಿಯಾಗದೇ ಇರದು.

    ಉಸಿರಾಡಿ ಎಂಬುದು ಭಗವಂತನ ಆಶಯವಾಗಿದ್ದರೆ, ಮಾಸ್ಕ್​ ಧರಿಸಿ ಎಂದು ಆದೇಶಿಸುವ ಮೂಲಕ ಅದಕ್ಕೆ ಧಕ್ಕೆ ಉಂಟು ಮಾಡುತ್ತಿದ್ದೀರಾ ಎಂಬುದು ಮಹಿಳೆಯೊಬ್ಬಳು ಹೇಳಿದ್ದಾಳೆ. ಉಸಿರಾಡುವ ಪ್ರಕ್ರಿಯೆ ಮೇಲೆ ನೀಡುವ ಹಿಡಿತ ಸಾಧಿಸುತ್ತಿದ್ದೀರಾ ಎಂದು ಮತ್ತೊಬ್ಬರು ಪ್ರಶ್ನಿಸಿದ್ದಾರೆ. ಮಾನವೀಯತೆ ವಿರುದ್ಧ ಅಪರಾಧವಾಗಿದೆ ಎಂದು ಮಹಿಳೆಯೊಬ್ಬಳು ವೈದ್ಯರನ್ನೇ ಎಚ್ಚರಿಸಿದ್ದಾಳೆ.

    ಇದನ್ನೂ ಓದಿ; ಕರೊನಾಗೆ ಚುಚ್ಚುಮದ್ದಿಗಿಂತ ಮೂಗಿನ ಔಷಧವೇ ಉತ್ತಮ; ಆಕ್ಸ್​ಫರ್ಡ್​ ವಿವಿ ಸಂಶೋಧಕರ ಅಭಿಮತ

    ಎಲ್ಲಕ್ಕಿಂತ ವಿಚಿತ್ರ ವಾದ ಮಂಡಿಸಿದ ಮಹಿಳೆಯೊಬ್ಬಳು ನಾನು ಅಂಡರ್​ವೇರ್​ ಧರಿಸುವುದಿಲ್ಲ, ಅದೇ ಕಾರಣಕ್ಕೆ ಮಾಸ್ಕ್​ ಕುಡ ಧರಿಸುವುದಿಲ್ಲ ಎಂದಿದ್ದಾಳೆ. ಈ ಅಭಿಪ್ರಾಯಗಳೆಲ್ಲ ವ್ಯಕ್ತವಾಗಿದ್ದು, ಫ್ಲೋರಿಡಾದ ಪಾಮ್​ ಬೀಚ್​ ಕೌಂಟಿಯ (ಸ್ಥಳೀಯಾಡಳಿತ ಸಂಸ್ಥೆ) ಜನಸ್ಪಂದನ ಸಭೆಯಲ್ಲಿ. ಇದಕ್ಕೆ ನೆಟ್ಟಿಗರಿಂದ ಅಷ್ಟೇ ವ್ಯಂಗ್ಯದ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.

    ಅದರದ್ದೊಂದು ಝಲಕ್​ ಇಲ್ಲಿದೆ ಕೇಳಿ…..

    ಮಾಸ್ಕ್​ಗೂ ಅಂಡರ್​ವೇರ್​ಗೂ ಏನ್​ ಸಂಬಂಧ…! ಮಾಸ್ಕ್​ ವಿರೋಧಿಗಳ ಈ ವಾದ ಕೇಳಿ

    ಅಮೆರಿಕದಲ್ಲಿ ಲಾಕ್​ಡೌನ್​ ವಿರುದ್ಧ ಮೊದಲಿನಿಮದಲೂ ಜನರು ಬೀದಿಗಿಳಿದು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇದೀಗ ಫ್ಲೋರಿಡಾದಲ್ಲಿ 'ಮಾಸ್ಕ್​ ವಿರೋಧಿ'ಗಳು ಹುಟ್ಟಿಕೊಂಡಿದ್ದಾರೆ. ಅವರಲ್ಲಿ ಒಬ್ಬಾಕೆಯ ವಾದವೇನು ಎಂಬುದನ್ನು ನೀವೇ ಕೇಳಿ…!

    Posted by Vijayavani on Saturday, June 27, 2020

    ಈ ಸಿಡಿಲು ಬೆಂಗಳೂರಿನಿಂದ ಬೀದರ್​ವರೆಗಿನ ದೂರಕ್ಕೆ ಚಾಚಿಕೊಂಡಿತ್ತು…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts