More

    ಈ ಸಿಡಿಲು ಬೆಂಗಳೂರಿನಿಂದ ಬೀದರ್​ವರೆಗಿನ ದೂರಕ್ಕೆ ಚಾಚಿಕೊಂಡಿತ್ತು…!

    ನವದೆಹಲಿ: ಸಿಡಿಲು, ಗುಡುಗುಗಳೆಂದರೆ ಸಾಮಾನ್ಯವಾಗಿ ಭಯ ಉಂಟಾಗುತ್ತದೆ. ಆದರೆ, ಇವೇ ಗುಡುಗು, ಸಿಡಿಲುಗಳು ದಾಖಲೆಗೂ ಕಾರಣವಾಗುತ್ತವೆ. ಅತೀ ದೂರಕ್ಕೆ ಚಾಚಿಕೊಂಡ ಸಿಡಿಲು ಹಾಗೂ ಅತಿ ಹೆಚ್ಚು ಕಾಲ ಕಾಣಿಸಿಕೊಂಡ ಸಿಡಿಲಿನ ಹೆಸರಿನಲ್ಲೀಗ ಹೊಸ ದಾಖಲೆಗಳು ನಿರ್ಮಾಣವಾಗಿವೆ.

    ಬ್ರೆಜಿಲ್​ನಲ್ಲಿ 2018ರ ಅಕ್ಟೋಬರ್​ 31ರಂದು ಕಾಣಿಸಿಕೊಂಡ ಸಿಡಿಲು ಅತಿ ಹೆಚ್ಚು ದೂರಕ್ಕೆ ಚಾಚಿಕೊಂಡ ಸಿಡಿಲು ಎಂಬ ಖ್ಯಾತಿಗೆ ಪಾತ್ರವಾಗಿದೆ. ಅಂದಹಾಗೆ ಇದು 709 ಕಿಲೋ ಮೀಟರ್​ವರೆಗೆ ವಿಸ್ತರಿಸಿಕೊಂಡಿತ್ತು. ಅಂದರೆ ಬೆಂಗಳೂರಿನಿಂದ ಬೀದರ್​ಗಿಂತಲೂ ಹೆಚ್ಚು ದೂರಕ್ಕೆ ಚಾಚಿಕೊಂಡ ಸಿಡಿಲು ಇದಾಗಿತ್ತು ಎಂದು ವಿಶ್ವ ಸಂಸ್ಥೆಯ ಹವಾಮಾನ ಇಲಾಖೆ ಅಧಿಕಾರಿಗಳ ಖಚಿತ ಪಡಿಸಿದ್ದಾರೆ.

    ಇದನ್ನೂ ಓದಿ; ಭಾರತದ ನೆರವಿಗೆ ಬರಲಿದೆ ಅಮೆರಿಕ ಸೇನೆ; ಚೀನಾ ಸವಾಲು ಎದುರಿಸಲು ನಿಯೋಜನೆ 

    ಅದೇ ರೀತಿ ಅತಿ ಹೆಚ್ಚು ಕಾಲ ಕಾಣಿಸಿಕೊಂಡ ಸಿಡಿಲು ಎಂಬ ಖ್ಯಾತಿ ಮತ್ತೊಂದು ಸಿಡಿಲಿನದ್ದಾಗಿದೆ. ಕಳೆದ ವರ್ಷ ಮಾರ್ಚ್​ 4ರಂದು ಉತ್ತರ ಅರ್ಜೆಂಟೀನಾದಲ್ಲಿ ಕಾಣಿಸಿಕೊಂಡ ಸಿಡಿಲು 16.73 ಸೆಕೆಂಡ್​ವರೆಗೆ ಪ್ರಕಾಶಮಾನವಾಗಿತ್ತು. ಇದು ಕೂಡ ಮತ್ತೊಂದು ವಿಶ್ವದಾಖಲೆಯಾಗಿದೆ ಎಂದು ವಿಶ್ವ ಹವಾಮಾನ ಇಲಾಖೆ ತಿಳಿಸಿದೆ.

    ಇವುಗಳ ಹೆಗ್ಗಳಿಕೆ ಏನೆಂದರೆ ಈ ಹಿಂದಿನ ದಾಖಲೆಗಳಿಗೆ ಹೋಲಿಸಿದಲ್ಲಿ ಎರಡು ಹೆಚ್ಚು ದೂರ ಹಾಗೂ ಅವಧಿಯದ್ದಾಗಿವೆ. ಹಿಂದಿನ ದಾಖಲೆ ಒಕ್ಲಹಾಮಾದ 321 ಕಿ.ಮೀ ಚಾಚಿಕೊಂಡ ಸಿಡಿಲಿನದ್ದಾಗಿತ್ತು. ದಕ್ಷಿಣ ಫ್ರಾನ್ಸ್​ನಲ್ಲಿ ಅತಿ ಹೆಚ್ಚು ಅವಧಿಗೆ ಕಾಣಿಸಿಕೊಂಡ ಸಿಡಿಲಿನ ದಾಖಲೆ 7.74 ಸೆಕೆಂಡ್​ ಆಗಿತ್ತು.

    ಇದನ್ನೂ ಓದಿ; ಕರೊನಾಗೆ ಚುಚ್ಚುಮದ್ದಿಗಿಂತ ಮೂಗಿನ ಔಷಧವೇ ಉತ್ತಮ; ಆಕ್ಸ್​ಫರ್ಡ್​ ವಿವಿ ಸಂಶೋಧಕರ ಅಭಿಮತ

    ಅಷ್ಟಕ್ಕೂ ಇದನ್ನು ಅಳೆಯುವುದು ಹೇಗೆ ಗೊತ್ತೆ?: ತಾಂತ್ರಿಕತೆ ಮುಂದುವರಿದಂತೆ ಸಿಡಿಲು ಪತ್ತೆ ವ್ಯವಸ್ಥೆಯನ್ನೇ ರೂಪಿಸಲಾಗಿದೆ. ಸಿಡಿಲಿನಿಂದ ಹೊರಹೊಮ್ಮುವ ವಿದ್ಯುತ್​-ಆಯುಸ್ಕಾಂತೀಯ ಕಣಗಳನ್ನು ಆಧರಿಸಿ ಅವುಗಳನ್ನು ಗುರುತಿಸಲಾಗುತ್ತದೆ.

    ಸಿಡಿಲಿನಿಂದಾದ ದುರಂತಗಳದ್ದು ಮತ್ತೊಂದು ಬಗೆಯ ದಾಖಲೆ. 1975ರಲ್ಲಿ ಒಂದೇ ಸಿಡಿಲಿನಿಂದಾಗಿ 21 ಜನರು ಮೃತಪಟ್ಟಿದ್ದರು. ಅವರೆಲ್ಲ ನಿಂತದ್ದ ಗುಡಿಸಲಿಗೆ ಸಿಡಿಲು ಬಡಿದಿತ್ತು. ಮತ್ತೊಂದೆಡೆ, 1994ರಲ್ಲಿ ಈಜಿಪ್ತ್​ನ ಡ್ರೊಂಕಾದಲ್ಲಿ ತೈಲ ಟ್ಯಾಂಕರ್​ಗೆ ಸಿಡಿಲು ಬಡಿದು ಉಂಟಾದ ದುರಂತದಲ್ಲಿ 469 ಮಂದಿ ಪ್ರಾಣ ಕಳೆದುಕೊಂಡಿದ್ದರು. ಎರಡು ದಿನಗಳ ಹಿಂದಷ್ಟೇ ಬಿಹಾರದ ವಿವಿಧೆಡೆ ಸಂಭವಿಸಿದ ಸಿಡಿಲಿನ ದುರಂತದಲ್ಲಿ ನೂರಕ್ಕೂ ಅಧಿಕ ಜನರು ಮೃತಪಟ್ಟಿದ್ದರು.

    ಲಾಕ್​ಡೌನ್​ ಮರೆತು ಬಿಡಿ, ಅನ್​ ಲಾಕ್​ಡೌನ್ 2.0 ಗೆ ಸಿದ್ಧರಾಗಿ; ಶಾಲಾ- ಕಾಲೇಜು, ಮೆಟ್ರೋ ಆರಂಭಕ್ಕೆ ಮಾರ್ಗಸೂಚಿ ಸಜ್ಜು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts