More

    ಕಾಂಗ್ರೆಸ್‌ನಿಂದ ಹಿಂದು ವಿರೋಧಿ ಧೋರಣೆ

    ಶ್ರೀರಂಗಪಟ್ಟಣ: ಹಿಂದು ಮುಖಂಡನ ಪರ ನ್ಯಾಯಾಲಯದಲ್ಲಿ ತನ್ನ ಕರ್ತವ್ಯ ನಿರ್ವಹಿಸಿದ ವಕೀಲರಿಗೆ ಕಾಂಗ್ರೆಸ್ ಪಕ್ಷ ರಾಜಕೀಯ ಪ್ರದರ್ಶಿಸಿ ಪಕ್ಷದಿಂದ ಉಚ್ಚಾಟಿಸಿರುವುದು ಸ್ಪಷ್ಟ ಹಿಂದು ವಿರೋಧಿ ನೀತಿಯನ್ನು ಪ್ರದರ್ಶಿಸಿದೆ ಎಂದು ಬಿಜೆಪಿ ಯುವ ಮುಖಂಡ ಎಸ್.ಸಚ್ಚಿದಾನಂದ ವಾಗ್ದಾಳಿ ನಡೆಸಿದರು.
    ಪಟ್ಟಣ ಹೊರವಲಯದ ಖಾಸಗಿ ಹೋಟೆಲ್ ಬಳಿ ಶನಿವಾರ ಬಿಜೆಪಿ, ಜೆಡಿಎಸ್ ಪಕ್ಷಗಳ ಮುಖಂಡರು ಹಾಗೂ ಹಿಂದು ಸಂಘಟನೆಗಳ ಕಾರ್ಯಕರ್ತರೊಂದಿಗೆ ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಅವರಿಗೆ ನ್ಯಾಯಾಲಯದಲ್ಲಿ ವಾದ ಮಂಡಿಸಿ, ಜಾಮೀನು ಕೊಡಿಸಿದ ಕಾಂಗ್ರೆಸ್ ಪಕ್ಷದ ಕಾನೂನು ವಿಭಾಗದ ತಾಲೂಕು ಘಟಕದ ಅಧ್ಯಕ್ಷ ಸ್ಥಾನದಿಂದ ಉಚ್ಚಾಟನೆಗೊಂಡ ವಕೀಲ ಡಿ.ಚಂದ್ರೇಗೌಡರನ್ನು ಸನ್ಮಾನಿಸಿ ಮಾತನಾಡಿದರು.
    ಡಿ.ಚಂದ್ರೇಗೌಡ ಅವರು ವಕೀಲನಾಗಿ ತನ್ನ ವೃತ್ತಿ ಧರ್ಮ ಪಾಲಿಸಿದ್ದಾರೆ. ತನ್ನ ಕಕ್ಷಿದಾರರ ಪರ ನ್ಯಾಯಾಲಯದಲ್ಲಿ ಯಾವುದೇ ಪಕ್ಷ ಅಥವಾ ಧರ್ಮ, ಸಿದ್ಧ್ದಾಂತ ಪ್ರತಿಪಾದಿಸದೆ, ವಾದ ಮಂಡಿಸಿ ನಿರೀಕ್ಷಣಾ ಜಾಮೀನು ಕೊಡಿಸುವಲ್ಲಿ ಸಫಲರಾಗಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷ ತನ್ನ ವಕ್ತಾರರನ್ನು ಉಚ್ಚಾಟಿಸುವ ಮೂಲಕ ಹಿಂದು ವಿರೋಧಿ ನೀತಿ ಅನುಸರಿಸಿದೆ ಎಂದು ಟೀಕಿಸಿದರು.
    ಜೆಡಿಎಸ್‌ನ ಪುರಸಭಾ ಸದಸ್ಯ ಎಸ್.ಪ್ರಕಾಶ್, ಸ್ಥಾಯಿ ಸಮಿತಿ ಅಧ್ಯಕ್ಷ ನಿಂಗರಾಜು, ವಕೀಲರ ಸಂಘದ ಮಾಜಿ ಅಧ್ಯಕ್ಷ ಕುಮಾರ್, ವಿಎಚ್‌ಪಿ ಮುಖಂಡ ಉಮೇಶ್ ಕುಮಾರ್, ಸುಧಾಕರ್, ಹಿಂದೂ ಜಾಗರಣೆ ವೇದಿಕೆ ಸಂಚಾಲಕ ಹರ್ಷ, ಬಿಜೆಪಿ ಮುಖಂಡರಾದ ವಿಶ್ವನಾಥ್, ಸುನೀಲ್, ಹೇಮಂತ್,ರಘು, ಡಿ.ಪಿ.ಚೇತನ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts