More

    ಸಾಕ್ಷಿ ಉಳಿಸದೇ ಪ್ರೇಯಸಿ ಕೊಲೆ: 2 ವರ್ಷ ಆರಾಮಾಗಿ ತಿರುಗಾಡಿಕೊಂಡಿದ್ದ ಆರೋಪಿ ಸಿಕ್ಕಿಬಿದ್ದಿದ್ದೇ ರೋಚಕ!

    ವಿಜಯವಾಡ: ಇಬ್ಬರ ನಡುವಿನ ಪರಿಚಯ ಪ್ರೀತಿಗೆ ತಿರುಗಿ, ದೈಹಿಕ ಸಂಪರ್ಕವರೆಗೂ ಮುಂದುವರಿದು ಕೊನೆಗೆ ಮದುವೆ ಆಗುವಂತೆ ಪ್ರೇಯಸಿ ದುಂಬಾಲು ಬಿದ್ದಾಗ ಯಾವ ಸಾಕ್ಷ್ಯಾಧಾರಗಳನ್ನು ಉಳಿಸಿದಂತೆ ಕೊಲೆ ಮಾಡಿ 2 ವರ್ಷಗಳವರೆಗೆ ಯಾರಿಗೂ ಗೊತ್ತಾಗದಂತೆ ಆರಾಮಾಗಿ ತಿರುಗಾಡಿಕೊಂಡಿದ್ದ ಆರೋಪಿಯೊಬ್ಬ ಪಾಪದ ಕೊಡ ತುಂಬಿದ ಬಳಿಕ ಪೊಲೀಸರಿಗೆ ಸಿಕ್ಕಿಬಿದ್ದಿರುವ ಘಟನೆ ಆಂಧ್ರ ಪ್ರದೇಶದಲ್ಲಿ ನಡೆದಿದೆ.

    ಆರೋಪಿಯ ಹೆಸರು ಕರೀಮ್. ಪೊಲೀಸರಿಂದ ಬಂಧನಕ್ಕೊಳಗಾಗಿರುವ ಕರೀಮ್​ ಗುಂಟೂರು, ವಿಜಯವಾಡ ಮತ್ತು ವಿಶಾಖಪಟ್ಟಣಗಳಲ್ಲಿ ಅಪರಾಧಗಳನ್ನು ಮಾಡಿರುವುದು ಕಂಡುಬಂದಿದೆ. ಮದುವೆಯಾಗುವಂತೆ 2018ರಲ್ಲಿ ಗುಂಟೂರಿನ ಯುವತಿ ಒತ್ತಾಯ ಮಾಡಿದ್ದಕ್ಕೆ ಆಕೆಯನ್ನು ಬರ್ಬರವಾಗಿ ಹತ್ಯೆ ಮಾಡಿದ ಬಳಿಕ ಯಾರಿಗೂ ಸಾಕ್ಷ್ಯಾಧಾರಗಳು ಲಭ್ಯವಾಗದಂತೆ ಆಕೆಯ ಶವವನ್ನು ಸುಟ್ಟು ತಪ್ಪಿಸಿಕೊಂಡಿದ್ದ.

    ಘಟನೆ ಹಿನ್ನೆಲೆ ಏನು?
    ಅಲಿನಗರ ನಿವಾಸಿ ಹಾಗೂ ಬಿ.ಟೆಕ್​ ವಿದ್ಯಾರ್ಥಿನಿ ಶೇಖ್​ ನಜಿಮಾ ಬೇಗಂ ಹಾಗೂ ಅದೇ ಏರಿಯಾದ ಶೇಖ್​ ಕರೀಮ್​ ಎಂಬಾತನೊಂದಿಗೆ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದಳು. ಇದಕ್ಕೂ ಮುನ್ನ ಇಬ್ಬರ ನಡುವೆ ಶಾಲಾ ಅವಧಿಯಲ್ಲೇ (2009) ಪರಿಚಯವಾಗಿತ್ತು. ಇಬ್ಬರ ನಡುವಿನ ಸ್ನೇಹ ಪ್ರೀತಿಗೆ ತಿರುಗಿತ್ತು. ಅಲ್ಲದೆ, ದೈಹಿಕ ಸಂಪರ್ಕದವರೆಗೂ ಮುಂದುವರಿದಿತ್ತು. ಇಬ್ಬರು ಆಗಾಗ ಗುಂಟೂರಿನಲ್ಲಿ ಭೇಟಿಯಾಗುತ್ತಿದ್ದರು. ಹೀಗಿರುವಾಗ ದಿನಕಳೆದಂತೆ ಬೇಗಂ, ಮದುವೆಯಾಗುವಂತೆ ಕರೀಮ್​ನನ್ನು ಒತ್ತಾಯಿಸಲು ಶುರು ಮಾಡಿದಳು. ಮದುವೆಗೆ ಒಪ್ಪದಿದ್ದರೆ ನಮ್ಮ ನಡುವಿನ ಸಂಬಂಧವನ್ನು ಎಲ್ಲರ ಮುಂದೆ ಬಹಿರಂಗ ಪಡಿಸುತ್ತೇನೆಂದು ಎಚ್ಚರಿಕೆ ನೀಡಿದ್ದಳು.

    ಇದನ್ನೂ ಓದಿ: ಪೊಲೀಸ್​ ಕಮಿಷನರ್​ಗೆ ತೀವ್ರ ಅನಾರೋಗ್ಯ; ಹುಬ್ಬಳ್ಳಿಯಿಂದ ಬೆಂಗಳೂರಿಗೆ ಏರ್​ ಲಿಫ್ಟ್​

    ಬೇಗಂ ಒತ್ತಾಯದಿಂದ ತೀವ್ರ ಒತ್ತಡಕ್ಕೆ ಒಳಗಾಗಿದ್ದ ಕರೀಮ್​ ಆಕೆಯನ್ನು ಕೊಲೆ ಮಾಡಲು ಸಂಚು ರೂಪಿಸಿದ್ದ. ತನ್ನು ಪ್ಲ್ಯಾನ್​ನಂತೆಯೇ 2018 ಮೇ 25ರಂದು ಬೇಗಂ ಮತ್ತು ಕರೀಮ್​ ಕೊಠಡಿಯೊಂದಕ್ಕೆ ತೆರಳಿದ್ದರು. ಇಬ್ಬರು ಸಾಕಷ್ಟು ಸಮಯ ಕಳೆದ ಬಳಿಕ ಈ ವೇಳೆ ಬೇಗಂ ಮತ್ತೆ ಮದುವೆ ಪ್ರಸ್ತಾಪ ಮಾಡಿದ್ದಳು. ಆದರೆ, ಆಗಲೇ ಕೊಲ್ಲಲು ಸಂಚು ಮಾಡಿದ್ದ ಕರೀಮ್​, ಆಕೆಯ ಮೇಲೆ ಹಲ್ಲೆ ಮಾಡಿ ಉಸಿಗಟ್ಟಿಸಿ ಕೊಲೆ ಮಾಡಿದ್ದ. ಆ ದಿನ ರಾತ್ರಿ ಶವದೊಂದಿಗೆ ಉಳಿದು ಗೋಡೆ ಕತ್ತರಿಸುವ ಯಂತ್ರದಿಂದ ಶವವನ್ನು ತುಂಡರಿಸಿ, ಬಳಿಕ ತುಂಡುಗಳನ್ನು ಒಂದು ಬ್ಯಾಗ್​ನಲ್ಲಿ ಇಟ್ಟುಕೊಂಡು ನಿರ್ಜನ ಪ್ರದೇಶಕ್ಕೆ ಹೋಗಿ ಬ್ಯಾಗ್​ ಸಮೇತ ಪೆಟ್ರೋಲ್​ ಹಾಕಿ ಸುಟ್ಟು ಹಾಕಿದ್ದ. ಸಾಕ್ಷ್ಯಾಧಾರಗಳು ಲಭ್ಯವಿಲ್ಲದಿದ್ದರಿಂದ ಯಾವುದೇ ಸುಳಿವು ಇರಲಿಲ್ಲ. ಸುಮಾರು ಎರಡು ವರ್ಷಗಳವರೆಗೆ ಆರೋಪಿ ಆರಾಮಾಗಿ ಅಡ್ಡಾಡಿಕೊಂಡು ಇದ್ದ.

    ಪೊಲೀಸ್​ ಬಲೆಗೆ ಬಿದ್ದಿದ್ದು ಹೇಗೆ?
    ಬೇಗಂ, ಕರೀಮ್ ಭೇಟಿಗೆ ತೆರಳಿದ ದಿನ ಸಂಬಂಧಿಕರ ಮದುವೆ ಇದೆ ಎಂದು ಹೇಳಿ ಹೊರಹೋಗಿದ್ದಳು.​ ಆದರೆ, ಮರಳಿ ಬಾರದಿದ್ದಾಗ ತುಂಬಾ ಚಿಂತೆಗೀಡಾಗಿದ್ದ ಪಾಲಕರು ಸಾಕಷ್ಟು ಹುಡುಕಾಟ ನಡೆಸಿದ್ದರು. ಆದರೆ, ಯಾವುದೇ ಸುಳಿವು ಸಿಗದಿದ್ದಾಗ 2018, ಜೂನ್​ 21ರಲ್ಲಿ ನಾಪತ್ತೆ ದೂರು ಸಹ ದಾಖಲಿಸಿದ್ದರು. ಇದಾದ ಕೆಲವೇ ದಿನಗಳಲ್ಲಿ ಸುಟ್ಟ ಸ್ಥಿತಿಯಲ್ಲಿ ಬೇಗಂ ಶವ ಪತ್ತೆಯಾಗಿತ್ತು. ಅನುಮಾನ ಬಂದ ಪೊಲೀಸರು ಡಿಎನ್​ಎ ಪರೀಕ್ಷೆ ನಡೆಸಿದಾಗ ಹೊಂದಾಣಿಕೆಯಾಗಿತ್ತು. ಬಳಿಕ ನಾಪತ್ತೆ ಪ್ರಕರಣ ಕೊಲೆಗೆ ತಿರುಗಿತ್ತು. ಬಳಿಕ ತನಿಖೆಯನ್ನು ತೀವ್ರಗೊಳಿಸಿದ ಪೊಲೀಸರಿಗೆ ಆರೋಪಿ ಕೊಲೆ ಮಾಡಿದ ಎರಡು ವರ್ಷಗಳ ಬಳಿಕ ಸಿಲುಕಿದ್ದಾನೆ. ಕರೀಮ್​ ಇತ್ತೀಚೆಗಷ್ಟೇ ಇನ್ನೊಂದು ಮದುವೆಗೆ ತಯಾರಿ ನಡೆಸಿದ್ದ. ಈ ವಿಚಾರ ಬೇಗಂ ಪಾಲಕರಿಗೆ ತಿಳಿದು ಪೊಲೀಸರಿಗೆ ಮಾಹಿತಿ ಮುಟ್ಟಿದ್ದರು. ಬಳಿಕ ಕರೀಮ್​ನನ್ನು ಬಂಧಿಸಿ ತಮ್ಮದೇ ಶೈಲಿಯಲ್ಲಿ ವಿಚಾರಣೆ ನಡೆಸಿದಾಗ ಎಲ್ಲವನ್ನು ಬಾಯ್ಬಿಟ್ಟಿದ್ದಾನೆ.

    ಇದನ್ನೂ ಓದಿ: ಭಿಕ್ಷುಕಿಯ ಕೈಯಲ್ಲಿ ಪೊಲೀಸರ ಫೈಲ್​!; ಭ್ರಷ್ಟಾಚಾರ ಪ್ರಕರಣ ಮುಚ್ಚಿ ಹಾಕುವ ಯತ್ನ?

    ಕಾಣೆಯಾಗಿದ್ದ ಮಗಳು ಇಂದಲ್ಲ ನಾಳೆ ಬರುತ್ತಾಳೆ ಎಂದು ದಾರಿ ಕಾದಿದ್ದ ಪಾಲಕರಿಗೆ ಇದೀಗ ಮಗಳು ಕೊಲೆಯಾಗಿದ್ದಾಳೆಂದು ತಿಳಿದು ಆಘಾತಕ್ಕೀಡಾಗಿದೆ. ಇದೀಗ ಪ್ರೀತಿಯ ಹೆಸರಲ್ಲಿ ಅನೇಕ ಯುವತಿಯರನ್ನು ಬಲಿಪಡೆದ ಆರೋಪಿಗೆ ಕಠಿಣ ಶಿಕ್ಷೆ ನೀಡುವಂತೆ ಒತ್ತಾಯಗಳು ಕೇಳಿಬಂದಿವೆ. (ಏಜೆನ್ಸೀಸ್​)

    ಚಿರು ಅಗಲಿಕೆಯಿಂದ ಮೇಘನಾ ಮನಸ್ಸಿನಲ್ಲಾದ ಸಂಕಟ ಎಂಥದ್ದು? ಮಾಧ್ಯಮಗಳ ಮುಂದೆ ಕಣ್ಣೀರಿಟ್ಟ ನಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts