More

    ಭೂಸಿರಿ ಚಿಟ್ಸ್ ಪ್ರೈವೇಟ್​ ಲಿಮಿಟೆಡ್​​ನ ಮತ್ತೊಂದು ಕರ್ಮಕಾಂಡ; ಗ್ರಾಹಕರ 1.6 ಕೋಟಿ ರೂ. ದುರ್ಬಳಕೆ ಆರೋಪ

    ಬೆಂಗಳೂರು: ಗ್ರಾಹಕರ ಹಣ ದುರುಪಯೋಗ ಆರೋಪಕ್ಕೆ ಗುರಿಯಾಗಿರುವ ಭೂಸಿರಿ ಚಿಟ್ಸ್ ಪ್ರೈವೇಟ್​ ಲಿಮಿಟೆಡ್​ನಲ್ಲಿ ಮತ್ತೊಂದು ಅಕ್ರಮ ಬೆಳಕಿಗೆ ಬಂದಿದ್ದು, ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ಕೂಡ ದಾಖಲಾಗಿದೆ.

    ಬಸವನಗುಡಿಯ ಭೂಸಿರಿ ಚಿಟ್ಸ್ ಪ್ರೈ.ಲಿ. ವ್ಯವಸ್ಥಾಪಕ ನಿರ್ದೇಶಕ ಬಿ.ವೈ.ತಿಮ್ಮೇಗೌಡ (63) ದೂರು ನೀಡಿದ್ದಾರೆ. ಇದರ ಮೇರೆಗೆ ಜ್ಞಾನಜ್ಯೋತಿನಗರದ ಎಸ್. ಮನೋಜ್, ಮೈಸೂರಿನ ಆಶ್ರಿತ ಹೌಸ್ ಬಿಲ್ಡಿಂಗ್ ಸೊಸೈಟಿ ಮಾಜಿ ಅಧ್ಯಕ್ಷ ಚಂದ್ರೇಗೌಡ, ಮಾಜಿ ಉಪಾಧ್ಯಕ್ಷ ಸಿದ್ದೇಗೌಡ ಎಂಬುವರ ವಿರುದ್ಧ ಎಫ್​ಐಆರ್ ದಾಖಲಿಸಿ ತನಿಖೆ ಕೈಗೊಂಡಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

    ಇದನ್ನೂ ಓದಿ: ಬೆಂಗಳೂರಿನಲ್ಲಿ ಮತ್ತೆ ಪುಡಿರೌಡಿಯ ಪುಂಡಾಟ; ಕಾಂಡಿಮೆಂಟ್ಸ್ ಸ್ಟೋರ್​ ನಡೆಸುತ್ತಿದ್ದಾತನ ಮೇಲೆ ಹಲ್ಲೆ

    2013ರಲ್ಲಿ ಕಂಪನಿ ಕಾಯ್ದೆಯಡಿ ಭೂಸಿರಿ ಚಿಟ್ಸ್ ಪ್ರೈ.ಲಿ. ಕಂಪನಿ ನೋಂದಾಯಿಸಲಾಗಿದೆ. 2017ರಲ್ಲಿ ಎಸ್. ಮನೋಜ್, ಆಡಳಿತ ಮಂಡಳಿ ಸಭೆಯಲ್ಲಿ ಹಣಕಾಸು ನಿರ್ದೇಶಕನಾಗಿ ನೇಮಕ ಗೊಂಡಿದ್ದ. ಇದೇ ಅವಧಿಯಲ್ಲಿ ಆಶ್ರಿತ ಹೌಸ್ ಬಿಲ್ಡಿಂಗ್ ಸೊಸೈಟಿ ಕಡೆಯಿಂದ 1 ಕೋಟಿ ರೂ. ಮೊತ್ತದ 3 ಟಿಕೆಟ್ ಚೀಟಿ ಚಂದಾದಾರ ಆಗಿದ್ದರು. 2017ರಲ್ಲಿ ಆರಂಭವಾದ ಚೀಟಿ 25 ತಿಂಗಳ ಅವಧಿ ಆಗಿತ್ತು. ಇದೇ ಸಮಯದಲ್ಲಿ ಆಶ್ರಿತ ಹೌಸ್ ಬಿಲ್ಡಿಂಗ್ ಸೊಸೈಟಿ ಅಧ್ಯಕ್ಷನಾಗಿ ಚಂದ್ರೇಗೌಡ ಮತ್ತು ಉಪಾಧ್ಯಕ್ಷನಾಗಿ ಮನೋಜ್ ತಂದೆ ಸಿದ್ದೇಗೌಡ ಆಗಿದ್ದರು. ಇದರ ನಡುವೆ ಸೊಸೈಟಿ ನಿರ್ದೇಶಕರು ಯೂರೋಪ್ ಪ್ರವಾಸಕ್ಕೆ ಹೋಗುತ್ತಿದ್ದು, ತುರ್ತಾಗಿ ಹಣ ಬೇಕಾಗಿದೆ. 3 ಚೀಟಿಗಳ ಪೈಕಿ ಒಂದರ ಮೊತ್ತ 1 ಕೋಟಿ ರೂ. ಬೇಕೆಂದು ಭೂಸಿರಿ ಚಿಟ್ಸ್ ಪ್ರೈ.ಲಿ.ನಲ್ಲಿ ಮನವಿ ಮಾಡಿದ್ದ.

    ಇದನ್ನೂ ಓದಿ: ಬೆಂಗಳೂರಿನಲ್ಲಿ 24 ಗಂಟೆಗಳ ಕಾಲ ಆಟೋ ಸಂಚಾರ ಬಂದ್; 21 ಸಂಘಟನೆಗಳ ಬೆಂಬಲ

    2017ರಲ್ಲಿ ತನ್ನ ಅಧಿಕಾರ ದುರುಪಯೋಗ ಪಡಿಸಿಕೊಂಡು ಮನೋಜ್, ಚೀಟಿದಾರರ ಬಳಿ ಹಣ ಸಂಗ್ರಹಿಸಿ ಬೋರ್ಡ್ ಗಮನಕ್ಕೆ ತರದೆ ನಗದು ರೂಪದಲ್ಲಿ 40 ಲಕ್ಷ ರೂ. ಲಪಟಾಯಿಸಿದ್ದ. ಇದನ್ನು ಪ್ರಶ್ನಿಸಿದಾಗ ಪ್ರವಾಸದಿಂದ ವಾಪಸ್ ಬಂದ ಮೇಲೆ ಗೊಂದಲ ಬಗೆಹರಿಸುವುದಾಗಿ ಹೇಳಿದ್ದ.

    ಪ್ರವಾಸದಿಂದ ಬಂದ ಮೇಲೆ ಮತ್ತೆ 19.40 ಲಕ್ಷ ರೂ. ಬೇಕೆಂದು ಕೇಳಿದ್ದ. ಇದನ್ನು ತಡೆಹಿಡಿದಾಗ ಮತ್ತೆ ಬಂದು ಚಂದ್ರೇಗೌಡ ಮತ್ತು ಸಿದ್ದೇಗೌಡ ಕಡೆಯಿಂದ 69.40 ಲಕ್ಷ ರೂ. ವಾಪಸ್ ಕೊಡಿಸುವುದಾಗಿ ನಂಬಿಸಿ 19.40 ಲಕ್ಷ ರೂ. ಪಡೆದುಕೊಂಡಿದ್ದ.

    ಇದಾದ ಮೇಲೆ 2ನೇ ಚೀಟಿ ಲೆಕ್ಕದಲ್ಲಿ ಆರ್‌ಟಿಜಿಎಸ್‌ನಲ್ಲಿ ಹಣ ಪಡೆದುಕೊಂಡಿದ್ದ. ಒಟ್ಟಾರೆ ತಂದೆ-ಮಗ ಸೇರಿ ಮೂವರು 1.63 ಕೋಟಿ ರೂ. ದುರುಪಯೋಗ ಪಡಿಸಿಕೊಂಡಿದ್ದಾರೆ. ಇವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ದೂರಿನಲ್ಲಿ ತಿಮ್ಮೇಗೌಡ ಉಲ್ಲೇಖಿಸಿದ್ದಾರೆ. ಇದರ ಮೇರೆಗೆ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಇದನ್ನೂ ಓದಿ: ಸಾರಿಗೆ ನೌಕರರಿಗೂ ಸಂಬಳ ಹೆಚ್ಚಳ; ಮಾ.1ಕ್ಕೆ ಅನ್ವಯಿಸುವಂತೆ ಆದೇಶ ಜಾರಿ

    ಜೈಲು ಸೇರಿದ್ದ ವಂಚಕ: ಭೂಸಿರಿ ಚಿಟ್ಸ್ ಫಂಡ್​ ಪ್ರೈ.ಲಿ.ನಲ್ಲಿ ಗ್ರಾಹಕರ ಹಣ ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ಈಗಾಗಲೇ ಮನೋಜ್ ಸೇರಿದಂತೆ ಇತರರ ವಿರುದ್ಧ ಎಫ್​ಐಆರ್ ದಾಖಲಾಗಿದೆ. ಬಸವನಗುಡಿ ಪೊಲೀಸರು, ಮನೋಜ್ ಸೇರಿದಂತೆ ಕೆಲವರನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದು, ಪ್ರಕರಣ ಸಂಬಂಧ ಆರೋಪಪಟ್ಟಿ ಸಹ ಸಲ್ಲಿಸಿದ್ದಾರೆ.

    ಈ ಪ್ರಕರಣದಲ್ಲಿ ಮನೋಜ್ ಜೈಲಿಗೆ ಹೋಗಿ ಜಾಮೀನಿನ ಮೇಲೆ ಹೊರಬಂದಿದ್ದಾನೆ. ಜೈಲಿಗೆ ಹೋಗಿದ್ದ ಕಾರಣಕ್ಕೆ ಭೂಸಿರಿ ಚಿಟ್ಸ್ ಪ್ರೈ.ಲಿ.ನಲ್ಲಿ ಹಣ ಪಡೆದಿಲ್ಲ ಎಂದು ಸುಳ್ಳು ಹೇಳುತ್ತಿದ್ದಾನೆ. ತಂದೆ-ಮಗ ವಂಚನೆ ಮಾಡಿದ್ದಾರೆ ಎಂದು ತಿಮ್ಮೇಗೌಡ ಗಂಭೀರ ಆರೋಪ ಮಾಡಿದ್ದಾರೆ.

    ಒಬ್ಬರು ಅಥವಾ ಇಬ್ಬರು ಮಕ್ಕಳಿರುವ ದಂಪತಿಗೆ ಭರ್ಜರಿ ಆಫರ್​: ಮೂರನೇ ಮಗುವಿಗೆ ಜನ್ಮನೀಡಿದರೆ 50 ಸಾವಿರ ರೂಪಾಯಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts