More

    7.67 ಲಕ್ಷ ಪಡಿತರ ಚೀಟಿದಾರರಿಗೆ ಮತ್ತೊಂದು ಅವಕಾಶ

    ಬೆಂಗಳೂರು: ಕುಟುಂಬದ ಮುಖ್ಯಸ್ಥರನ್ನು ನಮೂದಿಸದೇ ಅನರ್ಹಗೊಂಡಿರುವ 7,67,321 ಪಡಿತರ ಚೀಟಿದಾರರಿಗೆ ಸರ್ಕಾರ ಮತ್ತೊಂದು ಅವಕಾಶ ನೀಡಿದೆ.

    ರಾಜ್ಯದಲ್ಲಿ ಒಟ್ಟು 1,27,74,649 ಅರ್ಹ ಅಂತ್ಯೋದಯ ಅನ್ನ ಯೋಜನೆ ಮತ್ತು ಆದ್ಯತಾ ಪಡಿತರ ಚೀಟಿಗಳಿವೆ. ಈ ಚೀಟಿ ಹೊಂದಿದವರ ಪೈಕಿ 7,67,321 ಕುಟುಂಬಗಳು ಮುಖ್ಯಸ್ಥರು /ಕುಟುಂಬದ ಮುಖ್ಯಸ್ಥರನ್ನು ನಮೂದಿಸದ ಕಾರಣ ಅರ್ನಹಗೊಂಡಿರುವ ಪಡಿತರ ಚೀಟಿದಾರರಿಗೆ ಹಿರಿಯ ಸದಸ್ಯರನ್ನು ಗುರುತಿಸಿ ಡಿಬಿಟಿ ಮೂಲಕ ಮೂಲಕ ಹಣವನ್ನು ಪಾವತಿಸಲು ಸಚಿವ ಸಂಪುಟ ಸಭೆ ನಿರ್ಣಯಿಸಿದೆ.

    ಆಯಾ ಕುಟುಂಬದ ಮುಖ್ಯಸ್ಥರ ನಂತರ ಬರುವ ಅಥವಾ ಸ್ಥಾನಿಕವಾಗಿ ಲಭ್ಯವಾಗುವ ಅತ್ಯಂತ ಹಿರಿಯ ವ್ಯಕ್ತಿಗೆ ಆಧಾರ್ ಬ್ಯಾಂಕ್ ಖಾತೆ, ಪೋಸ್ಟಲ್ ಬ್ಯಾಂಕ್ ಖಾತೆ ಹಾಗೂ ಇತರೆ ಅರ್ಹತೆಗಳನ್ನಾಧರಿಸಿ ಅಂತಹ ಸೂಕ್ತ ವ್ಯಕ್ತಿಯನ್ನು ಗುರುತಿಸಿ ಈ ಯೋಜನೆಯ ಅನುಷ್ಠಾನದಲ್ಲಿ ಸೂಕ್ತ ಕಾರ್ಯತಂತ್ರ ರೂಪಿಸಿ ರಾಜ್ಯದಲ್ಲಿ ಅರ್ಹರಿರುವ ಎಲ್ಲ ಫಲಾನುಭವಿಗಳಿಗೆ ಸರ್ಕಾರದ ಮಾನದಂಡಗಳನ್ವಯ ಡಿಬಿಟಿ ಮೂಲಕ ಹಣ ಸಂದಾಯ ಮಾಡುವ ಯೋಜನೆಗೆ ಒಳಪಡಿಸಲು ಸಚಿವ ಸಂಪುಟವು ನಿರ್ಧರಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts