

ಬೆಂಗಳೂರುವ: ಕನ್ನಡ ಚಿತ್ರರಂಗದಲ್ಲಿ ಈ ಹಿಂದೆ ಕೆಲವೊಂದು ಚಿತ್ರಗಳಲ್ಲಿ ದೇವರು ಮತ್ತು ಧರ್ಮಕ್ಕೆ ಅಪಮಾನ ಮಾಡುವ ಸಾಕಷ್ಟು ದೃಶ್ಯಗಳಿವೆ. ಆಗೆಲ್ಲ ಸುಮ್ಮನಿದ್ದವರು, ಅದೊಂದು ಅವಮಾನ ಎಂದು ಭಾವಿಸದವರು ಈಗ ಮಾತ್ರ ಯಾಕೆ ಗಲಾಟೆ ಮಾಡುತ್ತಿದ್ದಾರೆ ಎಂಬ ಪ್ರಶ್ನೆಯೊಂದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಕೇಳಿಬರುತ್ತಿದೆ.
ಬೆಂಗಳೂರು: 'ಹೆಡ್ ಬುಷ್' ಚಿತ್ರದಲ್ಲಿ ದೈವದ ಬಗ್ಗೆ ಹಗುರವಾದ ಪದಗಳ ಬಳಕೆ ಮಾಡುವುದರ ಜತೆಗೆ ಸಂಪ್ರದಾಯ ಬದ್ಧ ದೈವ ಆಚರಣೆಯನ್ನ ಚಿತ್ರದಲ್ಲಿ ಬೇಕಾಬಿಟ್ಟಿ ತೋರಿಸಲಾಗಿದೆ ಎಂಬ ಆಕ್ಷೇಪಗಳು ಚಿತ್ರದ ಕುರಿತು ಕೇಳಿಬರುತ್ತಿದೆ. ಈ ಎಲ್ಲ ವಿವಾದಗಳಿಂದ ಚಿತ್ರದ ಗಳಿಕೆ ಕಡಿಮೆಯಾಗಿದೆ. ಈ ನಿಟ್ಟಿನಲ್ಲಿ ಸೋಷಿಯಲ್ ಮೀಡಿಯಾದಲ್ಲಿ 'ಬಡವರ ಮಕ್ಕಳು ಬೆಳೆಯಬೇಕು ಕಣ್ರಯ್ಯ ...' ಎಂಬ ಅಭಿಯಾನದ ಜತೆಗೆ 'ಬಡವರ ಮೆನ ಮಕ್ಕಳು ಹೀರೋ ಆಗ್ಬಾರ್ದಾ?' ಎಂಬ ಇನ್ನೊಂದು ಅಭಿಯಾನವೂ ಪ್ರಾರಂಭವಾಗಿದೆ.
ಉಪೇಂದ್ರ ಗಣೇಶನಿಗೆ ಗನ್ ಹಿಡಿದಾಗ ಧರ್ಮಕ್ಕೆ ಅಪಚಾರ ಆಗಲಿಲ್ಲ, ನಿರ್ದೇಶಕ ಗುರುಪ್ರಸಾದ್ ಮಠದೊಳಗೆ ಕಾವಿಧಾರಿಗಳು ಎಣ್ಣೆ ಹೊಡೀತಾರೆ ಅಂದಾಗ ಧರ್ಮಕ್ಕೆ ಅಪಮಾನ ಆಗಲಿಲ್ಲ, ಶೂದ್ರರ ಹುಲಿವೇಷಧಾರಿಗೆ ಹೊಡೆದಾಗ ಧರ್ಮಕ್ಕೆ ಅಪಚಾರವಾಗಲಿಲ್ಲ, ದಲಿತರ ಗುಳಿಗದೈವಕ್ಕೆ ದಣಿಯ ಗುಲಾಮರು ಹೊಡೆದಾಗ ಧರ್ಮಕ್ಕೆ ಅವಮಾನವಾಗಲಿಲ್ಲ, 'ಕಠಾರಿವೀರ ಸುರಸುಂದರಾಂಗಿ ಸಿನಿಮಾದಲ್ಲಿ ಉಪೇಂದ್ರ ಹಿಂದೂ ದೇವರ ಪಾತ್ರಧಾರಿಗಳನ್ನು ಬೂಟುಕಾಲಲ್ಲಿ ಒದ್ದು ಫೈಟ್ ಮಾಡುವಾಗ ಆಗದ ಅವಮಾನ, ವೀರಗಾಸೆ ವೇಷ ಧರಿಸಿ ಜಯರಾಜ್ ಕೊಲ್ಲಲು ಬಂದ ಖಳರಿಗೆ ನಾಯಕ ಹೊಡೆದಾಗ ಮಾತ್ರ ಧರ್ಮಕ್ಕೆ ಅಪಮಾನವಾಗುತ್ತದೆ? ಎಂದು ಪ್ರಶ್ನಿಸಲಾಗುತ್ತಿದೆ. ಬಡವರ ಮನೆಯಿಂದ ಬಂಡ ಧನಂಜಯ್ ಮೇಲೆ ಯಾಕೆ ಪ್ರತಾಪವನ್ನು ತೋರಿಸುತ್ತಿದ್ದೀರಾ? ಬಡವರ ಮನೆ ಮಕ್ಕಳು ಯಾಕೆ ಹೀರೋ ಆಗ್ಬಾರ್ದಾ? ಎಂದು ಪ್ರಶ್ನಿಸಲಾಗುತ್ತಿದೆ.