More

    ಶಿಕ್ಷಕರ ಅಕ್ರಮ ನೇಮಕಾತಿ ಪ್ರಕರಣ; 61 ಶಿಕ್ಷಕರ ಬಳಿಕ ಮತ್ತೆ 8 ಜನರ ಬಂಧನ

    ಬೆಂಗಳೂರು: 2012-2013 ಹಾಗೂ 2014-15ನೇ ಸಾಲಿನ ಸರ್ಕಾರಿ ಪ್ರೌಢಶಾಲೆಗಳ ಗ್ರೇಡ್-2 ಸಹಶಿಕ್ಷಕರು ಮತ್ತು ಗ್ರೇಡ್-1 ದೈಹಿಕ ಶಿಕ್ಷಕರ ನೇಮಕಾತಿಯಲ್ಲಿ ನಡೆದ ಅಕ್ರಮಗಳಿಗೆ ಸಂಬಂಧಿಸಿದಂತೆ ಈಗಾಗಲೇ 61 ಶಿಕ್ಷಕರ ಬಂಧನವಾಗಿದ್ದು, ಅದರ ಬೆನ್ನಿಗೆ ಮತ್ತೆ 8 ಶಿಕ್ಷಕರ ಬಂಧಿಸಲಾಗಿದೆ.

    ಈ ಎರಡೂ ಅಕ್ರಮ ಪ್ರಕರಣಗಳಿಗೆ ಸಂಬಂಧಿಸಿದಂತೆ ಈಗಾಗಲೇ ಶಿಕ್ಷಣ ಇಲಾಖೆಯ ಇಬ್ಬರು ನಿರ್ದೇಶಕರು, ಮೂವರು ನಿವೃತ್ತ ಸಹ ನಿರ್ದೇಶಕರು, ಒಬ್ಬ ಪ್ರಥಮ ದರ್ಜೆ ಸಹಾಯಕ, ಒಬ್ಬ ಕಂಪ್ಯೂಟರ್ ಪ್ರೋಗ್ರಾಮರ್ ಹಾಗೂ 61 ಆರೋಪಿ ಶಿಕ್ಷಕರನ್ನು ದಸ್ತಗಿರಿ ಮಾಡಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಅಲ್ಲದೆ ಮೇಲ್ಕಂಡ ಎರಡೂ ಪ್ರಕರಣಗಳಲ್ಲಿ ನ್ಯಾಯಾಲಯಕ್ಕೆ ಆರೋಪಿತರ ವಿರುದ್ಧ ದೋಷಾರೋಪಣ ಪಟ್ಟಿ ಸಲ್ಲಿಸಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿರುತ್ತದೆ.

    ಈ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಮುಂದುವರೆದ ಭಾಗವಾಗಿ ನಿನ್ನೆ ನಡೆದ ವಿಶೇಷ ಕಾರ್ಯಾಚರಣೆಯಲ್ಲಿ 8 ಆರೋಪಿ ಶಿಕ್ಷಕರನ್ನು ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿರುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

    2012-13 ನೇ ಸಾಲಿನಲ್ಲಿ ನೇಮಕಾತಿಗೆ ಸಂಬಂಧ ಬಂಧಿತ ಶಿಕ್ಷಕರು

    1) ಶ್ರೀಕಾಂತ, ಸಹ ಶಿಕ್ಷಕ, ಸರ್ಕಾರಿ ಪ್ರೌಢಶಾಲೆ, ಮದಬಾವಿ, ಬಾಗಲಕೋಟೆ ಜಿಲ್ಲೆ.

    2) ನಾಯಕ್ ಪ್ರಕಾಶ್ ರತ್ನು, ಸಹ ಶಿಕ್ಷಕ, ಸರ್ಕಾರಿ ಪ್ರೌಢಶಾಲೆ, ಕೊಲ್ದಾರ, ಬಸವನಬಾಗೇವಾಡಿ ತಾಲ್ಲೂಕು, ವಿಜಯಪುರ ಜಿಲ್ಲೆ

    3) ಮಹಬೂಬ್ ಬಾಷಾ. ಬಿ.ಆರ್, ಸಹ ಶಿಕ್ಷಕ, ಸರ್ಕಾರಿ ಪ್ರೌಢಶಾಲೆ, ಕಮರೂರು, ಸೊರಬಾ ತಾಲ್ಲೂಕು, ಶಿವಮೊಗ್ಗ ಜಿಲ್ಲೆ

    4) ಸುಜಾತಾ ಭಂಡಾರಿ, ಸಹ ಶಿಕ್ಷಕಿ, ಕರ್ನಾಟಕ ಪಬ್ಲಿಕ್ ಸ್ಕೂಲ್, ಮಳಗಿ, ಮುಂಡಗೋಡ ತಾಲೂಕು, ಉತ್ತರ ಕನ್ನಡ ಜಿಲ್ಲೆ.

    2014-15 ನೇ ಸಾಲಿನಲ್ಲಿ ನೇಮಕಾತಿ ಅಕ್ರಮ ಸಂಬಂಧ ಬಂಧಿತ ಶಿಕ್ಷಕರು

    1) ದೀಪಾರಾಣಿ. ಜಿ.ಎನ್, ಸಹ ಶಿಕ್ಷಕಿ, ಸರ್ಕಾರಿ ಪ್ರೌಢಶಾಲೆ, ಬುಕ್ಕಾಪಟ್ಟಣ, ಕೊರಟಗೆರೆ ತಾಲ್ಲೂಕು, ಮಧುಗಿರಿ ಶೈಕ್ಷಣಿಕ ಜಿಲ್ಲೆ.

    2) ಮೋಹನ್ ಕುಮಾರ್.ಜಿ.ಕೆ, ಸಹ ಶಿಕ್ಷಕ, ಸರ್ಕಾರಿ ಪ್ರೌಢಶಾಲೆ, ನಾಗಲಮಡಿಕೆ, ಪಾವಗಡ ತಾಲ್ಲೂಕು, ಮಧುಗಿರಿ ಶೈಕ್ಷಣಿಕ ಜಿಲ್ಲೆ

    3) ಮಂಜುನಾಥ. ಎಸ್, ಸಹ ಶಿಕ್ಷಕ, ಸರ್ಕಾರಿ ಪ್ರೌಢಶಾಲೆ, ವಲ್ಲೂರು, ಪಾವಗಡ ತಾಲ್ಲೂಕು, ಮಧುಗಿರಿ ಶೈಕ್ಷಣಿಕ ಜಿಲ್ಲೆ.

    4) ಶಾಂತಿಲಾಲ್ ಚೌಹಾಣ್, ಸಹ ಶಿಕ್ಷಕ, ಸರ್ಕಾರಿ ಪ್ರೌಢಶಾಲೆ, ಹಿರಿಯೂರು ಟೌನ್, ಚಿತ್ರದುರ್ಗ

    ಸಿನಿಮಾ ಹೀರೋಯಿನ್​ಗೆ ಹೋಲಿಸಿದ್ದಕ್ಕೆ ಪತಿಗೆ ಊಟ ಹಾಕಲ್ಲ ಎಂದ ಪತ್ನಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts