More

  ಚಾಮುಂಡೇಶ್ವರಿ ದೇವಿ ವಾರ್ಷಿಕೋತ್ಸವ

  ಚಿಕ್ಕಮಗಳೂರು: ನಗರದ ಭಾವಸಾರ ಕ್ಷತ್ರಿಯ ಮತ್ತು ಗೋಂದಳಿ ಸಮಾಜದಿಂದ ಆಷಾಢ ಲಕ್ಷ್ಮೀಪೂಜೆ ಮತ್ತು ಶ್ರೀ ಚಾಮುಂಡೇಶ್ವರಿ ದೇವಿಯ ವಾರ್ಷಿಕೋತ್ಸವ ಮಂಗಳವಾರ ವಿಜೃಂಭಣೆಯಿಂದ ನಡೆಯಿತು. ದೇವಿಗೆ ಮುಂಜಾನೆಯಿಂದಲೇ ಪೂಜೆ, ವಿಶೇಷ ಮಂಗಳಾರತಿ ನಡೆಯಿತು.

  ಎಲ್ಲೆಡೆ ಶಾಂತಿ, ಸಮೃದ್ಧಿ, ಆರೋಗ್ಯ ನೆಲೆಸಲಿ ಎನ್ನುವ ದೃಷ್ಟಿಯಿಂದ ಭಾವಸಾರ ಕ್ಷತ್ರಿಯ ಗೋಂದಳಿ ಸಮಾಜದವರು ಅನೇಕ ವರ್ಷಗಳಿಂದ ಚಾಮುಂಡೇಶ್ವರಿ ಮಹೋತ್ಸವ ಆಚರಿಸಿಕೊಂಡು ಬರುತ್ತಿದ್ದಾರೆ ಎಂದು ದೇವಸ್ಥಾನ ಸಮಿತಿ ಅಧ್ಯಕ್ಷ ರಮೇಶ್‌ಬಾಬು ಮಹಡಿಕರ್ ತಿಳಿಸಿದರು.
  ಗೋಂದಳಿ ಸಮಾಜದ ಅಧ್ಯಕ್ಷ ಲೋಕೇಶ್ ಮಾತನಾಡಿ, ಪ್ರತಿ ವರ್ಷ ಆಷಾಢ ಮಾಸದಲ್ಲಿ ಶ್ರೀ ಚಾಮುಂಡೇಶ್ವರಿ ದೇವಿಯ ಮಹೋತ್ಸವ ಜರುಗಲಿದೆ. ಕುಟುಂಬದಲ್ಲಿನ ಕಷ್ಟಗಳನ್ನು ನಿವಾರಿಸುವ ಜತೆಗೆ ಸಾಂಕ್ರಾಮಿಕ ರೋಗಗಳನ್ನು ದೂರ ಮಾಡುವ ಶಕ್ತಿ ದೇವಿಯಲ್ಲಿದೆ ಎಂಬುದು ಇಲ್ಲಿನ ಜನರ ನಂಬಿಕೆ ಎಂದು ಹೇಳಿದರು.
  ಗೌರವಾಧ್ಯಕ್ಷ ಶಂಕರ್ ರಾವ್, ಕಾರ್ಯದರ್ಶಿ ಗಣೇಶ್ ರಾವ್, ಉಪಾಧ್ಯಕ್ಷ ಲಕ್ಷ್ಮಣ್ ರಾವ್, ಸಹ ಕಾರ್ಯದರ್ಶಿ ಶಿವಕುಮಾರ್ ಬೇಂದ್ರೆ, ಮಧುಕರ್ ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts