More

    ಅನ್ನಭಾಗ್ಯ ಯೋಜನೆ ನೇರ ನಗದು ವರ್ಗಾವಣೆಗೆ ಸಚಿವ ಎಚ್.ಕೆ. ಪಾಟೀಲ ಚಾಲನೆ

    ವಿಜಯವಾಣಿ ಸುದ್ದಿಜಾಲ ಗದಗ 

    ರಾಜ್ಯದ ಜನಸಾಮಾನ್ಯರ ಬದುಕು ಹಸನಾಗಬೇಕು, ಹಸಿವು ಮುಕ್ತವಾಗಬೇಕು. ನೆಮ್ಮದಿಯ ಹಾಗೂ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಅನ್ನಭಾಗ್ಯ ಯೋಜನೆ ಆಸರೆಯಾಗಿದೆ ಎಂದು ಸಚಿವ ಎಚ್. ಕೆ. ಪಾಟೀಲ ಹೇಳಿದರು. 

    ಜಿಲ್ಲಾಡಳಿತ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಅನ್ನಭಾಗ್ಯ ಯೋಜನೆ ನೇರ ನಗದು ವರ್ಗಾವಣೆ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿ, ಸರ್ಕಾರ ನುಡಿದಂತೆ ನಡೆದಿದೆ. ರಾಜ್ಯದ ಜನಸಾಮಾನ್ಯರ ಹಸಿವು ನಿಗಿಸಿದ ಸಾರ್ಥಕ ಭಾವ ಮೂಡಿದೆ. ಸದ್ಯ ಪ್ರತಿ ಪಡಿತರ ಕುಟುಂಬದ ಸದಸ್ಯರಿಗೆ 5 ಕೆ.ಜಿ. ಅಕ್ಕಿ ಹಾಗೂ ೫ ಕೆ.ಜಿ.ಗೆ ತಗಲುಬಹುದಾದ ದುಡ್ಡನ್ನು ವಿತರಿಸಲಾಗುತ್ತಿದೆ ಎಂದರು. 

    ಅನ್ನಭಾಗ್ಯ ಯೋಜನೆಯ ನಗದು ವರ್ಗಾವಣೆಗೆ ಜಿಲ್ಲೆಯಲ್ಲಿ ಸದ್ಯ ಬಿಪಿಎಲ್ ಹಾಗೂ ಎಎಪಿ  ಒಟ್ಟಾರೆ ಅರ್ಹ 188833 ಪಡಿತರ ಚೀಟಿದಾರರಿದ್ದು  643423 ಫಲಾನುಭವಿಗಳಿಗೆ 10. 36 ಕೋಟಿ ರೂ. ನೇರ ನಗದು ಜಮೆ ಮಾಡಲು ಚಾಲನೇ ದೊರಕಿದೆ. ಇದೊಂದು ಕ್ರಾಂತಿಕಾರಕ ಕಾರ್ಯವಾಗಿದ್ದು ಹಸಿವು ಮುಕ್ತ ರಾಜ್ಯ ಮಾಡುವಲ್ಲಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ನೇತೃತ್ವದ ನಮ್ಮ ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದೆ ಎಂದು ಎಚ್.ಕೆ. ಪಾಟೀಲ ಹೇಳಿದರು.

    ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ ಬಡವರ ಹಸಿವು ನಿಗಿಸುವ ಶ್ರೇಷ್ಠ ಯೋಜನೆ ಅನ್ನಭಾಗ್ಯ. ರಾಜ್ಯದಲ್ಲಿ 1.36 ಕೋಟಿ ಬಿ.ಪಿ.ಎಲ್ ಪಡಿತರ ಕುಟುಂಬಗಳಿವೆ. ಸರ್ಕಾರದ ಪ್ರತಿ ಪೈಸೆ ಅರ್ಹರಿಗೆ ತಲುಪಬೇಕು ಮತ್ತು ಅದು ಸದುಪಯೋಗ ಆಗಬೇಕು. ಸರ್ಕಾರ ಅಥವಾ ಅಧಿಕಾರಿ ಉತ್ತಮ ಕೆಲಸ ಮಾಡಿದಾಗ ಅದನ್ನು ಮೆಚ್ಚಿ ಬೆನ್ನು ತಟ್ಟುವ ಕಾರ್ಯವಾಗಬೇಕು ಎಂದು ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದರು.

    ಶಾಸಕ ಜಿ.ಎಸ್.ಪಾಟೀಲ, ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್, ಜಿಪಂ ಸಿಇಒ ಸುಶೀಲಾ ಬಿ, ಜಿಲ್ಲಾ ಪೋಲಿಸ್ ಅಧೀಕ್ಷಕ ಬಿ.ಎಸ್.ನೇಮಗೌಡ, ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ, ಗಂಗಪ್ಪ ಎಂ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts