More

    105 ಕೆಜಿ ಅಕ್ಕಿ ಚೀಲ ಹೊತ್ತು ಬೆಟ್ಟ ಏರಿದ

    ಯಲಬುರ್ಗಾ/ಗಂಗಾವತಿ: ಹಿರೇಮ್ಯಾಗೇರಿ ಗ್ರಾಮದ 34 ವರ್ಷದ ವ್ಯಕ್ತಿ 105 ಕೆಜಿಯ ಅಕ್ಕಿ ಚೀಲ ಹೊತ್ತು ಅಂಜನಾದ್ರಿ ಬೆಟ್ಟದ 575 ಮೆಟ್ಟಿಲುಗಳನ್ನು ಭಾನುವಾರ ಕೇವಲ 50 ನಿಮಿಷಗಳಲ್ಲಿ ಏರುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.
    ಹಿರೇಮ್ಯಾಗೇರಿ ಗ್ರಾಮದ ಹನುಮಂತಪ್ಪ ನಿಂಗಪ್ಪ ಪೂಜಾರ ಸಾಹಸ ಮೆರೆದವರು. ಅಕ್ಕಿ ಮೂಟೆಯೊಂದಿಗೆ ಬೆಟ್ಟ ಹತ್ತುವುದು ಅಷ್ಟು ಸುಲಭದ ಕಾರ್ಯವಲ್ಲ. ಆದರೆ, ಹನುಮಂತಪ್ಪ 105 ಕೆ.ಜಿ. ತೂಕದ ಅಕ್ಕಿ ಚೀಲ ಹೊತ್ತು ಸಾಗಿದ್ದು, ಅವರ ಫೋಟೊ, ವಿಡಿಯೋ ಎಲ್ಲೆಡೆ ವೈರಲ್ ಆಗಿವೆ. ಇವರ ಸಾಹಸವನ್ನು ಭಕ್ತರು, ದೇವಸ್ಥಾನದ ಆಡಳಿತ ಮಂಡಳಿ ಮೆಚ್ಚುಗೆ ವ್ಯಕ್ತಪಡಿಸಿದೆ. ಗ್ರಾಮದ ಶರಣಪ್ಪ, ಹನುಮಂತ, ರಮೇಶ ತಳವಾರ್, ಅರುಣ ತಳವಾರ್, ಮುತ್ತಪ್ಪ ವಾಳದ, ಕರಿಯಪ್ಪ ಕಲ್ಗುಡಿ, ಮಲ್ಲಪ್ಪ ಶೆಟ್ಟರ್, ಭೀಮೇಶ ಇದ್ದರು.
    ಕಳೆದ ತಿಂಗಳು ಶ್ರೀರಾಮ ನವಮಿ ದಿನ ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕು ಹುನೂರು ಗ್ರಾಮದ 46 ವರ್ಷದ ರಾಯಪ್ಪ ದಫೇದಾರ್ ಅವರು 101 ಕೆ.ಜಿ. ಜೋಳದ ಚೀಲ ಹೊತ್ತು ಬೆಟ್ಟ ಹತ್ತಿದ್ದನ್ನು ಸ್ಮರಿಸಬಹುದು.

    ಅಂಜನಾದ್ರಿಯ ಆಂಜನೇಯ ದರ್ಶನ ಪಡೆಯಬೇಕು ಎನ್ನುವ ಆಸೆ ಇತ್ತು. ಅದರಂತೆ ದರ್ಶನಕ್ಕೆ ಹೋಗುವುದರ ಜತೆಗೆ ಚೀಲ ಹೊತ್ತುಕೊಂಡು ಹೋಗಬೇಕೆಂದು ನಿರ್ಧರಿಸಿದೆ. 105 ಕೆ.ಜಿ. ತೂಕದ ಅಕ್ಕಿ ಚೀಲ ಹೊತ್ತು ಬೆಟ್ಟ ಏರಿ ಆಂಜನೇಯ ದರ್ಶನ ಪಡೆದಿದ್ದು, ಖುಷಿಯಾಗಿದೆ. ಇದಕ್ಕೆ ಸ್ನೇಹಿತರ ಪ್ರೋತ್ಸಾಹ ಸಾಕಷ್ಟಿದೆ.
    ಹನುಮಂತಪ್ಪ ನಿಂಗಪ್ಪ ಪೂಜಾರ
    ಅಕ್ಕಿ ಚೀಲ ಹೊತ್ತು ಬೆಟ್ಟ ಏರಿದ ಯುವಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts