More

    ಕರಕುಶಲ ಕಲೆಗಿದೆ ಉಜ್ವಲ ಭವಿಷ್ಯ : ಖ್ಯಾತ ವಿನ್ಯಾಸಕಾರ ಸುನಿಲ್ ಸೇಥಿ ಅವರ ಅನಿಸಿಕೆ

    ಕರಕುಶಲ ಕಲೆಗಿದೆ ಉಜ್ವಲ ಭವಿಷ್ಯ : ಖ್ಯಾತ ವಿನ್ಯಾಸಕಾರ ಸುನಿಲ್ ಸೇಥಿ ಅವರ ಅನಿಸಿಕೆಅತ್ಯುತ್ತಮವಾದ ಮರ, ಲೋಹ ಅಥವಾ ಸೋಪಿನ ಕಲ್ಲಿನಿಂದ ಕರಕುಶಲಕರ್ವಿುಗಳು ತಮ್ಮ ಕೈಯ್ಯಾರೆ ಬಿಡಿಸಿರುವ ಸುಂದರ ಆನೆಯ ಕಲಾಕೃತಿಯನ್ನು ವಾಸದ ಕೋಣೆಯಲ್ಲಿ ಇಟ್ಟುಕೊಳ್ಳುವುದು ನಿಜಕ್ಕೂ ನಿಮಗೆ ಹೆಮ್ಮೆ ಎನಿಸುತ್ತದೆ ಅಲ್ಲವೇ? ನಿಜ. ಜತೆಗೆ ಇದು ‘ಭಾರತದಲ್ಲಿಯೇ ತಯಾರಿಸಿದ್ದು’ (ಮೇಡ್ ಇನ್ ಇಂಡಿಯಾ) ಮತ್ತು ಅದು ಭಾರತೀಯ ಕರಕುಶಲ ವಲಯದ ಪ್ರತಿಭೆಯನ್ನು ಉತ್ತೇಜಿಸುತ್ತದೆ ಎಂದರೆ ಯಾರಿಗೆ ಇಷ್ಟವಾಗುವುದಿಲ್ಲ ಹೇಳಿ? ಕೈಯಿಂದ ಮಾಡಲ್ಪಟ್ಟ ಉತ್ಪನ್ನಗಳಿಗೆ ಜಾಗತಿಕವಾಗಿ ಮಾರುಕಟ್ಟೆ ಲಭ್ಯವಿದೆ ಮತ್ತು ಭಾರತ ಕೇವಲ ಅಮೃತಶಿಲೆಯಿಂದ ಮಾಡಿರುವ ಅದ್ಭುತ ತಾಜ್​ವುಹಲ್​ಗೆ ಮಾತ್ರ ಹೆಸರಾಗಿಲ್ಲ. ವಿಶಿಷ್ಟ ವಿನ್ಯಾಸ, ಶ್ರೇಷ್ಠ ಕಲೆಗಾರಿಕೆ, ನಾನಾ ಬಗೆಯ ಬಣ್ಣಗಳು, ವೈವಿಧ್ಯಮಯ ಕಚ್ಚಾ ಸಾಮಗ್ರಿಗಳಿಂದಾಗಿ ವಿಶ್ವದ ಗಮನ ಸೆಳೆದಿರುವುದನ್ನು ಹಲವು ಸಂದರ್ಭಗಳಲ್ಲಿ ಕಾಣಬಹುದಾಗಿದೆ.

    ಜವಳಿ ಸಚಿವಾಲಯದ ಅಧೀನದಲ್ಲಿ ನಡೆಯುತ್ತಿರುವ ಡಿಸಿ ಹ್ಯಾಂಡ್​ಕ್ರಾಫ್ಟ್, ಹಲವು ಉಪಕ್ರಮಗಳ ಮೂಲಕ ಅತ್ಯುತ್ತಮ ಕೆಲಸ ಮಾಡುತ್ತಿದ್ದು, ಅದು ನೇರವಾಗಿ ಗ್ರಾಹಕರು-ಮಾರಾಟಗಾರರು, ಕರಕುಶಲ ಕರ್ವಿುಗಳು- ಗ್ರಾಹಕರ ಸಂವಾದ ಏರ್ಪಡಿಸುತ್ತಿದೆ. ಜತೆಗೆ, ಆಕರ್ಷಕ ಪ್ರದರ್ಶನಗಳನ್ನೂ ಆಯೋಜಿಸುತ್ತಿದೆ, ಮಧ್ಯವರ್ತಿಗಳನ್ನು ಸಂಪೂರ್ಣ ದೂರವಿಟ್ಟಿದೆ. ‘ವೋಕಲ್ ಫಾರ್ ಲೋಕಲ್’ ‘ಸ್ಥಳೀಯ ಉತ್ಪನ್ನಗಳಿಗೆ ದನಿಯಾಗಿ’ ಕರೆ ದಿನೇದಿನೇ ಜನಪ್ರಿಯವಾಗುತ್ತಿದ್ದು, ಸದ್ಯ ಬೇಕಾಗಿರುವುದು ಭರವಸೆಯ ಬೆಳಕು. ದೀಪಾವಳಿಯ ಈ ಸಂದರ್ಭದಲ್ಲಿ ಭಾರತದಲ್ಲಿ ಕೈಯಿಂದ ಮಾಡಲ್ಪಟಿರುವ ಉತ್ಪನ್ನಗಳನ್ನು ಉಡುಗೊರೆಯಾಗಿ ನೀಡುವ ಮೂಲಕ ಕರಕುಶಲ ಕರ್ವಿುಗಳ ಬಾಳಿನಲ್ಲಿ ಬೆಳಕು ಮೂಡಿಸಬೇಕಾಗಿದೆ.

    ಇದು ದೀಪಗಳನ್ನು ನೀಡುವುದಕ್ಕೆ ಮಾತ್ರ ಸಾಂಕೇತಿಕವಾಗಿ ಮೀಸಲಾಗಬಾರದು, ಪೂಜೆಯ ಕೋಣೆಯನ್ನು ಪ್ರವೇಶಿಸುವ ಹಿತ್ತಾಳೆ ಗಣೇಶ, ಸಮೃದ್ಧಿಯ ಸಂದೇಶ ಸಾರುವ ಬೆಳ್ಳಿ ಲಕ್ಷ್ಮೀ ಆಗಿರಬಹುದು, ಅಂಥ ಹಲವು ಉತ್ಪನ್ನಗಳನ್ನು ಈ ಧನ್​ತೇರಸ್ ವೇಳೆ ನಿಮ್ಮ ಪ್ರೀತಿಪಾತ್ರರಿಗೆ, ಆತ್ಮೀಯರಿಗೆ ನೀಡಬಹುದು. ದುರಂತದ ಸಂಗತಿ ಎಂದರೆ, ಒಂದು ಕಾಲದಲ್ಲಿ ಕಸೂತಿಯ ಹೊದಿಕೆ, ಪುಲ್ಕಾರಿ ದುಪ್ಪಟ, ಕಾಂತಾ ಸೀರೆ ಸೇರಿ ಮತ್ತಿತರ ಭಾರತೀಯ ಕರಕುಶಲ ಕರ್ವಿುಗಳು ಸಿದ್ಧಪಡಿಸಿದ ಉತ್ಪನ್ನಗಳನ್ನು ಪ್ರೀತಿಯಿಂದ ಇಷ್ಟಪಡುತ್ತಿದ್ದ ಭಾರತೀಯರು, ಇದೀಗ ಅವುಗಳನ್ನು ಬಿಂಬಿಸುವ ಕಳಪೆ ದರ್ಜೆಯ ಉತ್ಪನ್ನಗಳಿಗೆ ಮಾರು ಹೋಗಿದ್ದಾರೆ. ಕಾರ್ವಿುಕ ಆಧಾರಿತ ತಂತ್ರಜ್ಞಾನಗಳ ಮೂಲಕ ಕೈಯಿಂದ ಮಾಡಲ್ಪಟ್ಟಿರುವ ಸುಂದರ ಉತ್ಪನ್ನಗಳಿಗೆ ಭಾರತ ಹೆಸರುವಾಸಿಯಾಗಿದೆ ಎಂಬುದನ್ನು ನಾವೇ ಮರೆತರೆ ಹೇಗೆ? ಹೆಚ್ಚೆಚ್ಚು ಸ್ಥಳೀಯ ಉತ್ಪನ್ನಗಳನ್ನು ಬಳಸಬೇಕಾಗಿದೆ, ಬೇರೆಯವರಲ್ಲೂ ಅರಿವು ಮೂಡಿಸಬೇಕಿದೆ.

    ಸ್ಥಳೀಯ ಉತ್ಪನ್ನಗಳನ್ನೇ ಖರೀದಿಸಿ ಎಂಬ ಕರೆಗೆ ಒಗೊಟ್ಟು, ಸಣ್ಣ ಅಂಗಡಿಗಳಿಂದ ಹಿಡಿದು ಎಲ್ಲ ಮಳಿಗೆಗಳು ಈ ಹಬ್ಬದ ಋತುವಿಗೆ ಸಿದ್ಧವಾಗಿದ್ದು, ಅಲ್ಲೆಲ್ಲ ಭಾರತೀಯ ವಿನ್ಯಾಸಕಾರರು ಅಭಿವೃದ್ಧಿಪಡಿಸಿರುವ ದೇಶಿ ಸೊಗಡಿನ ಉತ್ಪನ್ನಗಳು ರಾರಾಜಿಸತೊಡಗಿವೆ. ಭಾರತದಲ್ಲಿ ಕೃಷಿಯ ನಂತರ, ಎರಡನೇ ಅತಿ ಹೆಚ್ಚು ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಿರುವವರೆಂದರೆ ಕೈಮಗ್ಗ ಮತ್ತು ಕರಕುಶಲ ಉತ್ಪನ್ನಗಳನ್ನು ದೊಡ್ಡ ಪ್ರಮಾಣದಲ್ಲಿ ರಫ್ತು ಮಾಡುತ್ತಿರುವ ಉದ್ಯಮಿಗಳು ಎಂಬುದು ಗಮನಾರ್ಹ. ಜವಳಿ ಸಚಿವೆ ಸ್ಮೃತಿ ಇರಾನಿ ಮತ್ತು ಅವರ ತಂಡ, ವೋಕಲ್ ಫಾರ್ ಲೋಕಲ್ ಉತ್ತೇಜನಕ್ಕೆ ಸಾಕಷ್ಟು ಕೆಲಸ ಮಾಡುತ್ತಿದೆ. ಆಧುನಿಕ ತಂತ್ರಜ್ಞಾನ ಅಳವಡಿಕೆ ಮತ್ತು ಉನ್ನತೀಕರಣಕ್ಕೆ ಒತ್ತು ನೀಡಲಾಗಿದೆ. ವ್ಯಾಪಾರಿ ಮೇಳಗಳಲ್ಲಿ ಪಾಲ್ಗೊಳ್ಳಲು ಉತ್ತೇಜನ, ಉತ್ಪನ್ನಗಳ ಅಭಿವೃದ್ಧಿಯಲ್ಲಿ ಸಂಶೋಧನೆಗೆ ಒತ್ತು ನೀಡಿರುವ ಪರಿಣಾಮ ಕರಕುಶಲ ಕರ್ವಿುಗಳಿಗೆ ವರ್ಷವಿಡಿ ಉದ್ಯೋಗ ದೊರಕಲು ಸಾಧ್ಯವಾಗುತ್ತಿದೆ. ಈ ವಲಯದಲ್ಲಿ ಗ್ರಾಮೀಣ ಮತ್ತು ಅರೆ-ನಗರ ಪ್ರದೇಶಗಳಲ್ಲಿ ವಾರ್ಷಿಕ ಉದ್ಯೋಗ ಸೃಷ್ಟಿ ಪ್ರಮಾಣ ಶೇ.6ರಿಂದ 7ರಷ್ಟು ಬೆಳವಣಿಗೆ ಹೊಂದುತ್ತಿದೆ. ಜಿಯುಸಿಸಿಐ ಮತ್ತು ಸೆಂಟ್ ಲಾರೆಂಟ್​ನಂಥ ತನ್ನದೇ ಜನಪ್ರಿಯ ಬ್ರಾಂಡ್​ಗಳನ್ನು ಹೊಂದಿರುವ ಕೆರಿಂಗ್, ಭಾರತದಲ್ಲಿ ಕಸೂತಿ ಕಲೆಯ ಘಟಕವನ್ನು ಆರಂಭಿಸಲು ಯೋಜನೆ ರೂಪಿಸಿದೆ, ಆ ಮೂಲಕ ದುಡಿಯುವ ಕೈಗಳ ಸ್ಥಿತಿಗತಿ ಸುಧಾರಿಸುವುದಲ್ಲದೆ, ಕಸೂತಿ ಕಲೆಯ ನೇರ ಕೌಶಲವನ್ನು ಪಡೆಯುವುದಕ್ಕೆ ಮತ್ತು ಕರಕುಶಲಕರ್ವಿುಗಳಿಗೆ ನ್ಯಾಯಯುತ ವೇತನ ದೊರಕಿಸಲು ಸಹಾಯಕವಾಗಲಿದೆ.

    ಲಾಭದ ಉದ್ದೇಶ ಹೊಂದಿಲ್ಲದ ಹಲವು ಕಾರ್ಪೇರೇಟ್ ಸಂಸ್ಥೆಗಳು ಮತ್ತು ಸರ್ಕಾರೇತರ ಸಂಸ್ಥೆಗಳು, ಕರಕುಶಲಕರ್ವಿುಗಳಿಗೆ ಸುಸ್ಥಿರ ರೀತಿಯಲ್ಲಿ ನೆರವು ನೀಡಲು ನಾನಾ ಪ್ರಯತ್ನಗಳನ್ನು ನಡೆಸುತ್ತಿವೆ. ಅವು ಶತಮಾನಗಳಿಂದ ವಂಶಪಾರಂಪರ್ಯವಾಗಿ ಬಂದಿರುವ ಕಲೆಯನ್ನು ಉಳಿಸಲು ಮತ್ತು ಜೀವನೋಪಾಯಗಳನ್ನು ಅರಸಿ ದೊಡ್ಡ ದೊಡ್ಡ ನಗರಗಳಿಗೆ ವಲಸೆ ಹೋಗುವುದನ್ನು ತಡೆಯುವ ಕೆಲಸ ಮಾಡುತ್ತಿವೆ. ಇತರರು, ಭಾದೋಹಿ-ವಾರಾಣಸಿ-ಮಿರ್ಜಾಪುರ ಮತ್ತಿತರ ಕಡೆ ನೆಲಹಾಸು ನೇಯ್ಗೆ ಮಾಡುವ ಘಟಕಗಳನ್ನು ಸ್ಥಾಪಿಸಿ, ನೇಕಾರರಿಗೆ ಸ್ಥಿರ ಆದಾಯ ಗಳಿಸಲು ನೆರವಾಗುತ್ತಿದ್ದಾರೆ.

    ಇತ್ತೀಚೆಗೆ ಕಲೆ ಮತ್ತು ಕರಕುಶಲ ಗ್ರಾಮದ ಬಗ್ಗೆ ಲೇಖನ ಓದಿದಾಗ ನಿಜಕ್ಕೂ ಆಶ್ಚರ್ಯವಾಯಿತು, ಅಲ್ಲಿ ಕೇರಳದ ಪಾರಂಪರಿಕ ಉತ್ಪನ್ನಗಳ ಕೇಂದ್ರವನ್ನು ಸ್ಥಾಪಿಸಲಾಗುತ್ತಿದೆ. ಆ ಕಲಾಗ್ರಾಮದಲ್ಲಿ ಶಿಲ್ಪಿಗಳು ಮತ್ತು ವರ್ಣಚಿತ್ರಗಳನ್ನು ಬಿಡಿಸುವ ಕರಕುಶಲಕರ್ವಿುಗಳು ಸೇರಿ 750 ಕುಶಲಕರ್ವಿುಗಳಿದ್ದಾರೆ. ಇದೇ ಬಗೆಯ ಪುನರುಜ್ಜೀವನ ಕಾರ್ಯಗಳು ಬಣ್ಣದ ಬಣ್ಣದ ಗೊಂಬೆಗಳಿಗೆ ಹೆಸರಾದ ಕರ್ನಾಟಕದ ಚನ್ನಪಟ್ಟಣದಲ್ಲೂ ನಡೆಯಬೇಕಾಗಿದೆ. ಅಲ್ಲಿ ಕೊಂಡಪಲ್ಲಿ ಮತ್ತು ಶಿಶ್ಯಂ ಗೊಂಬೆಗಳು ಹೆಸರುವಾಸಿ. ಕರೊನಾ ಸಾಂಕ್ರಾಮಿಕದಿಂದಾಗಿ ಬೇಡಿಕೆಗಳು ರದ್ದಾಗಿದ್ದು ಅಥವಾ ವಿಳಂಬವಾದ ಕಾರಣಕ್ಕೆ ಹಲವು ಗೊಂಬೆ ವ್ಯಾಪಾರಿಗಳು ಅಂಗಡಿಗಳನ್ನು ಮುಚ್ಚಿದ್ದಾರೆ. ರಾಸಾಯನಿಕವಿಲ್ಲದ ಮತ್ತು ಸುಸ್ಥಿರವಾದ ಅಂತಹ ಗೊಂಬೆಗಳಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆದ್ಯತೆ ಸಿಗುವಂತೆ ಮಾಡಬೇಕಿದೆ. ಅಲ್ಲದೆ, ನಮ್ಮಲ್ಲಿರುವ ವೈವಿಧ್ಯಮಯ ಕರಕುಶಲ ಕಲೆಯನ್ನು ಮರುಸಂಶೋಧಿಸಲು ಭಾರತೀಯ ಗ್ರಾಹಕರನ್ನೂ ತಲುಪುವ ಅವಶ್ಯಕತೆ ಇದೆ.

    ನಮ್ಮ ಕರಕುಶಲ ಕಲೆಯ ವಲಯವನ್ನು ಪುನರುಜ್ಜೀವನಗೊಳಿಸಬೇಕೆಂದರೆ, ಭಾರತೀಯರಾದ ನಾವು ಮೊದಲು ಹೃದಯಪೂರ್ವಕವಾಗಿ ಆ ಕಲೆಗಳನ್ನು ಒಪ್ಪಿಕೊಂಡು, ಭವಿಷ್ಯದ ಸ್ವಾವಲಂಬಿ ಭಾರತ ನಿರ್ವಣಕ್ಕೆ ಈ ಹಬ್ಬದ ಋತುವಿನಲ್ಲಿ ನೀಲಿಕ್ಷೆಯನ್ನು ಸಿದ್ಧಪಡಿಸಬೇಕಾಗಿದೆ.
    (ಲೇಖಕರು ಖ್ಯಾತ ವಿನ್ಯಾಸಕಾರರು ಮತ್ತು ಫ್ಯಾಷನ್ ಡಿಸೈನ್ ಕೌನ್ಸಿಲ್ ಆಫ್ ಇಂಡಿಯಾದ ಅಧ್ಯಕ್ಷರು)

    ವಸತಿ ರಿಯಲ್​ಎಸ್ಟೇಟ್ ಕ್ಷೇತ್ರಕ್ಕೆ ಉಡುಗೊರೆ- ಬಿಲ್ಡರ್​ಗಳಿಗೂ, ಮನೆ ಖರೀದಿದಾರರಿಗೂ ತೆರಿಗೆ ವಿನಾಯಿತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts