More

    ಇಷ್ಟಲಿಂಗ ಪೂಜೆಯಿಂದ ಮನಶುದ್ಧಿ, ಬಸವತತ್ವ ಪ್ರಚಾರಕ ಅಶೋಕ ಬರಗುಂಡಿ ಅನಿಸಿಕೆ

    ಯಲಬುರ್ಗಾ: ಪುಣ್ಯಕ್ಷೇತ್ರಗಳಲ್ಲಿ ಸ್ನಾನ ಮಾಡಿದರೆ ದೇಹ ಶುದ್ಧಿಯಾಗಬಹುದೇ ವಿನಹ ಮನ ಶುದ್ಧಿಯಾಗಲಾರದು. ಇಷ್ಟಲಿಂಗ ಪೂಜೆಯಿಂದ ಭಾವ, ಮನಶುದ್ಧಿಯಾಗುತ್ತದೆ ಎಂದು ಬಸವತತ್ವ ಪ್ರಚಾರಕ ಅಶೋಕ ಬರಗುಂಡಿ ಹೇಳಿದರು.

    ತಾಲೂಕಿನ ಕಲ್ಲಭಾವಿ ಗ್ರಾಮದಲ್ಲಿ ಲಿಂ.ಶ್ರೀ ಮಲ್ಲಿನಾಥ ಶರಣರ ಸ್ಮರಣಾರ್ಥ ಇತ್ತೀಚೆಗೆ ಹಮ್ಮಿಕೊಂಡಿದ್ದ 183ನೇ ಮಾಸಿಕ ಶಿವಾನುಭವ ಹಾಗೂ ವಚನ ಚಿಂತನಾ ಗೋಷ್ಠಿ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಮನುಷ್ಯತ್ವ ಬೆಳಗಲು ಬಸವತತ್ವ ಹಣತೆ ಪ್ರಜ್ವಲಿಸಲಿ. ನಿತ್ಯ ಸ್ವಾರ್ಥ ಕೇಂದ್ರಿತವಾಗುತ್ತಿರುವ ಸಮಾಜ ಹಾಗೂ ಯಾಂತ್ರಿಕವಾಗುತ್ತಿರುವ ಬದುಕನ್ನು ಸರಿದಾರಿಗೆ ತರಲು ಮನುಷ್ಯತ್ವ ಮತ್ತು ಮಾನವೀಯತೆಯ ಜ್ಯೋತಿ ಬೆಳಗಬೇಕಿದೆ. ಬಸವಾದಿ ಶರಣರ ವಚನಗಳ ಸಾರ ತಿಳಿದಾಗ ಜೀವನದಲ್ಲಿ ನೆಮ್ಮದಿ ಕಾಣಲು ಸಾಧ್ಯವಾಗುತ್ತದೆ ಎಂದರು.

    ಬಸವದಳದ ಪ್ರಮುಖರಾದ ಅಮರೇಶಪ್ಪ ಗಡಿಹಳ್ಳಿ, ರುದ್ರಪ್ಪ ಹಳ್ಳಿ, ಮಹಾದೇವಪ್ಪ ತೆನ್ನಳ್ಳಿ, ಅಮರೇಶಪ್ಪ ಬಳ್ಳಾರಿ, ಎಸ್.ಎ.ಮುಗದ, ತಿಮ್ಮನಗೌಡ ಚಿಲ್ಕರಾಗಿ ಮಾತನಾಡಿದರು.

    ಗಣ್ಯರಾದ ವಿರೂಪಾಕ್ಷಯ್ಯ ಹಿರೇಮಠ, ವೀರಭದ್ರಪ್ಪ ಕುರಕುಂದಿ, ಹನುಮಗೌಡ ಬಳ್ಳಾರಿ, ಎಸ್.ಎ.ಕವಳಿಕಾಯಿ, ಬಸವರಾಜಪ್ಪ ಇಂಗಳದಾಳ, ರೇಣುಕಪ್ಪ ಮಂತ್ರಿ, ನಾಗನಗೌಡ ಜಾಲಿಹಾಳ, ಪಾಲಾಕ್ಷಪ್ಪ ಹುಣಶಿಹಾಳ, ಶಂಕ್ರಪ್ಪ ತರಲಕಟ್ಟಿ, ದೇವಪ್ಪ ವಾಲ್ಮೀಕಿ, ಮುದಿಯಪ್ಪ ಮೇಟಿ, ಸಣ್ಣಅಮರಪ್ಪ ಅಳ್ಳಳ್ಳಿ, ಗುಂಡಪ್ಪ ಹಡಪದ, ಮೌನೇಶ ಪತ್ತಾರ, ಲೋಕೇಶ ನಾಯ್ಕ, ಮುದಿಯಪ್ಪ ಕಲ್ಲಭಾವಿ, ಶ್ರೀಕಾಂತಗೌಡ ಮಾಲಿಪಾಟೀಲ್, ಬಸಣ್ಣ ದೇವಲ್, ಅಮರೇಶ ದೇವಲ್ ಸೇರಿದಂತೆ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts