More

    ಯುವ ಜನರಲ್ಲಿ ದೇಶಭಕ್ತಿಯ ಅರಿವು

    ಲಿಂಗಸುಗೂರು: ಪಟ್ಟಣದಲ್ಲಿ ನಡೆಯಲಿರುವ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದಲ್ಲಿ ಯುವ ಜನಾಂಗ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಧಾರ್ಮಿಕ ಮತ್ತು ಆಧ್ಯಾತ್ಮಿಕ ಪ್ರವಚನ, ಮಾರ್ಗದರ್ಶನ ಆಲಿಸಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಕೇಂದ್ರದ ಮಾಜಿ ಸಚಿವ ಬಸವರಾಜ ಪಾಟೀಲ್ ಆನ್ವರಿ ಹೇಳಿದರು.

    ದಸರಾ ಧರ್ಮ ಸಮ್ಮೇಳನ ವೇದಿಕೆ ವೀಕ್ಷಣೆ ನಂತರ ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡಿ, ಸ್ವಾತಂತ್ರ್ಯ ಪೂರ್ವದಿಂದಲೂ ರಂಭಾಪುರಿ ಪೀಠದಿಂದ ದಸರಾ ದರ್ಬಾರ್ ನಡೆಸಿ ಧರ್ಮ ಜಾಗೃತಿ ಕಾರ್ಯ ನಡೆಸಲಾಗುತ್ತಿದೆ. ಸಮಾಜದಲ್ಲಿನ ಕಲುಷಿತ ವಾತಾವರಣದಿಂದಾಗಿ ಇಂತಹ ಧರ್ಮ ಸಮ್ಮೇಳನಗಳ ಅಗತ್ಯಯಿದ್ದು, ಯುವ ಸಮುದಾಯದಲ್ಲಿ ದೇಶಭಕ್ತಿ, ಧರ್ಮಾಭಿಮಾನದ ಅರಿವು ಮೂಡಲಿದೆ ಎಂದರು.

    ನಗರದಲ್ಲಿ ಅ.15ರಿಂದ 24ರವರೆಗೆ ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ಡಾ.ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರ ಸಾನ್ನಿಧ್ಯದಲ್ಲಿ ದಸರಾ ಧರ್ಮ ಸಮ್ಮೇಳನ ನಡೆಯುತ್ತಿರುವುದು ಈ ಭಾಗದ ಭಕ್ತರಲ್ಲಿನ ಸಂತಸ ಇಮ್ಮಡಿಗೊಳಿಸಿದೆ. ಶ್ರೀ ಪೀಠದ ಮಾನವ ಧರ್ಮಕ್ಕೆ ಜಯವಾಗಲಿ ಎಂಬ ಉಕ್ತಿಯಂತೆ ಈ ಕಾರ್ಯಕ್ರಮ ಜಿಲ್ಲೆಗೆ ಸೀಮಿತವಾಗದೆ, ನಾಡಿನ ನಾನಾ ಮೂಲೆಗಳಿಂದ ಜಾತಿ ಭೇದ ಮರೆತು ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿ ಸಮ್ಮೇಳನ ಯಶಸ್ವಿಗೊಳಿಸಬೇಕು ಎಂದರು.

    ಅಮರೇಶ್ವರ ಗುರುಗಜದಂಡ ಶಿವಾಚಾರ್ಯರು, ಸಮ್ಮೇಳನ ಸೇವಾ ಸಮಿತಿ ಪ್ರಮುಖರಾದ ಮಲ್ಲಣ್ಣ ವಾರದ, ಚಂದ್ರಪ್ಪಗೌಡ ಯರದಿಹಾಳ, ಬಸವರಾಜಗೌಡ ಗಣೇಕಲ್, ಮಹಾಂತೇಶ ಪಾಟೀಲ್, ಚನ್ನಬಸವ ವಿಟ್ಲಾಪುರ, ಅಮರೇಶ ಹಟ್ಟಿ, ಗುರುಪಾದಯ್ಯ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts