More

    ಲವ್ ಮಾಕ್​ಟೇಲ್ ಹಾಡಿಗೆ ಅನಿರುದ್ಧ ಫಿದಾ

    ಬೆಂಗಳೂರು: ಸ್ಯಾಂಡಲ್​ವುಡ್​ನ ತಾರಾ ಜೋಡಿ ‘ಡಾರ್ಲಿಂಗ್’ ಕೃಷ್ಣ ಮತ್ತು ಮಿಲನಾ ನಾಗರಾಜ್ ಫೆ. 14ರಂದು ವಿವಾಹವಾಗಿದ್ದರು. ಅದೇ ದಿನ ‘ಲವ್ ಮಾಕ್​ಟೇಲ್ 2’ ಚಿತ್ರದ ‘ನಿನದೇನೆ ಜನುಮ..’ ಹಾಡು ಸಹ ಬಿಡುಗಡೆ ಆಗಿತ್ತು. ಇದೀಗ ಆ ಹಾಡಿನ ಬಗ್ಗೆ ತಮಿಳಿನ ಖ್ಯಾತ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದ್ರನ್ ಫಿದಾ ಆಗಿದ್ದಾರೆ. ‘ಲವ್ ಮಾಕ್​ಟೇಲ್ 2’ ಚಿತ್ರಕ್ಕೆ ನಕುಲ್ ಅಭ್ಯಂಕರ್ ಸಂಗೀತ ನಿರ್ದೇಶನ ಮಾಡುವುದರ ಜತೆಗೆ ‘ನಿನದೇನೆ ಜನುಮ’ ಹಾಡಿಗೆ ಧ್ವನಿ ಸಹ ನೀಡಿದ್ದಾರೆ. ಯೂಟ್ಯೂಬ್​ನಲ್ಲಿ ಈ ಹಾಡಿಗೆ ಒಳ್ಳೇ ಪ್ರತಿಕ್ರಿಯೆ ಸಿಕ್ಕಿದ್ದು, ಅನಿರುದ್ಧ್ ಸ್ನೇಹಿತನ ಕೆಲಸವನ್ನು ಮೆಚ್ಚಿದ್ದಾರೆ.

    ‘ನಾನು ಮತ್ತು ನಕುಲ್ ಒಟ್ಟಿಗೆ ಹಲವು ಆಲ್ಬಂಗಳಿಗೆ ಒಟ್ಟಿಗೆ ಕೆಲಸ ಮಾಡಿದ್ದೇವೆ. ಈಗ ‘ಲವ್ ಮಾಕ್​ಟೇಲ್ 2’ ಚಿತ್ರದ ಹಾಡಿಗೆ ನಕುಲ್ ಸಂಗೀತ ನೀಡಿ ಧ್ವನಿಯನ್ನೂ ನೀಡಿದ್ದಾರೆ. ಚೆನ್ನಾಗಿ ಹಾಡು ಮೂಡಿಬಂದಿದೆ. ಅವರಿಗೂ ಮತ್ತು ಇಡೀ ತಂಡಕ್ಕೂ ಒಳ್ಳೆಯದಾಗಲಿ ಎಂದು ಕಿರು ವಿಡಿಯೋ ತುಣುಕಿನ ಮೂಲಕ ಶುಭ ಹಾರೈಸಿದ್ದಾರೆ. ಅಂದಹಾಗೆ, ಕನ್ನಡ ಸೇರಿ ದಕ್ಷಿಣದ ಎಲ್ಲ ಭಾಷೆಯ ಹಾಡುಗಳಿಗೆ ನಕುಲ್ ಧ್ವನಿಯಾಗಿದ್ದಾರೆ. ಸಂಗೀತ ನಿರ್ದೇಶನದಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಈ ಬಗ್ಗೆ ಮಾತನಾಡುವ ಡಾರ್ಲಿಂಗ್ ಕೃಷ್ಣ, ‘ಬೇರೆ ಇಂಡಸ್ಟ್ರಿಯವರು ನಮ್ಮ ಚಿತ್ರದ ಬಗ್ಗೆ ಮಾತನಾಡುತ್ತಾರೆ ಎಂದರೆ ನಮಗೂ ಖುಷಿ. ಅದೇ ರೀತಿ ‘ಲವ್ ಮಾಕ್​ಟೇಲ್ 2’ ಚಿತ್ರದ ಶೇ. 65 ಭಾಗದ ಶೂಟಿಂಗ್ ಮುಗಿದಿದೆ. ಸೆಪ್ಟೆಂಬರ್ ವೇಳೆಗೆ ಬಿಡುಗಡೆ ಪ್ಲಾನ್ ಇದೆ. ಈ ನಡುವೆ ನಾಗೇಂದ್ರ ಪ್ರಸಾದ್ ಅವರ ನಿರ್ದೇಶನದ ಸಿನಿಮಾ ಸೇರಿ ಹಲವು ಚಿತ್ರಗಳ ಕೆಲಸದಲ್ಲಿದ್ದೇನೆ’ ಎಂಬುದ ಕೃಷ್ಣ ಮಾತು.

    ಹಾಡುಗಳಲ್ಲಿ ಸ್ವಚ್ಛ ಕರ್ನಾಟಕದ ಜಪ

    ಸಾಮಾಜಿಕ ಸಂದೇಶ ಸಾರುವ ‘ಸ್ವಚ್ಛ ಕರ್ನಾಟಕ’ ಸಿನಿಮಾತಂಡ ಇತ್ತೀಚೆಗಷ್ಟೇ ಹಾಡುಗಳನ್ನು ಬಿಡುಗಡೆ ಮಾಡಿದೆ. ಶೀರ್ಷಿಕೆಗೆ ತಕ್ಕಂತೆ ಇಡೀ ಚಿತ್ರದಲ್ಲಿ ಸ್ವಚ್ಛತೆಯ ಬಗ್ಗೆಯೇ ಬೋಧನೆ ಮಾಡಲಾಗಿದೆ. ಸ್ವಚ್ಛತೆಯ ವಿಚಾರದಲ್ಲಿ ಪ್ರತಿ ನಾಗರಿಕನ ಕರ್ತವ್ಯ ಏನು? ಅದಕ್ಕಾಗಿ ಆತ ಮಾಡಬೇಕಿರುವ ಕೆಲಸ ಮತ್ತು ಆತನ ಜವಾಬ್ದಾರಿಗಳನ್ನು ಈ ಸಿನಿಮಾದಲ್ಲಿ ಹೇಳಲಾಗಿದೆ. ವಿಶೇಷ ಎಂಬಂತೆ ಎಲ್. ರವಿಕುಮಾರ್ ನಿರ್ದೇಶನದ ಈ ಚಿತ್ರದಲ್ಲಿ ಹಿರಿಯ ಗೀತ ಸಾಹಿತಿ ದೊಡ್ಡರಂಗೇಗೌಡರು ಚಿತ್ರದ ಗೀತೆಗಳಿಗೆ ಸಾಹಿತ್ಯವನ್ನೂ ಬರೆದು ತಂದೆಯ ಪಾತ್ರದಲ್ಲಿಯೂ ನಟಿಸಿದ್ದಾರೆ. ಇನ್ನು ಹಾಡುಗಳ ಬಿಡುಗಡೆ ಕಾರ್ಯಕ್ರಮ ಆಗಿದ್ದರಿಂದ ಬಿಬಿಎಂಪಿ ವಿಶೇಷ ಆಯುಕ್ತ ರಣದೀಪ್, ಮಾಜಿ ಶಾಸಕ ಹೇಮಚಂದ್ರ ಸಾಗರ್, ಮೋಹನ್ ಕೊಂಡಜ್ಜಿ, ಜ್ಯೋತಿಷಿ ರಾಘವೇಂದ್ರ ಮೋಕ್ಷಗುಂಡಂ ಗುರೂಜಿ, ರಮೇಶ್ ಕಾಮತ್ ಆಗಮಿಸಿ ಶುಭ ಹಾರೈಸಿದ್ದಾರೆ. ಚಿತ್ರದಲ್ಲಿ ಅರ್ಜುನ್ ಮತ್ತು ಅಂಜಲಿ ನಾಯಕ-ನಾಯಕಿಯರಾಗಿದ್ದಾರೆ. ರಾಜ್ ಭಾಸ್ಕರ್ ಸಂಗೀತ ಸಂಯೋಜನೆ ಮಾಡಿದ್ದಾರೆ. ನಿರ್ದೇಶನದ ಜತೆಗೆ ನಿರ್ವಣದ ಜವಾಬ್ದಾರಿಯನ್ನೂ ರವಿಕುಮಾರ್ ನಿರ್ವಹಿಸಿದ್ದಾರೆ.

    ಸ್ಯಾಂಡಲ್​ವುಡ್​ನಲ್ಲಿ ಮತ್ತೆ ಡ್ರಗ್ಸ್​ ಮಾಫಿಯಾ ಸದ್ದು; ನಿರ್ಮಾಪಕರೊಬ್ಬರ ಕಚೇರಿ ಮೇಲೆ ಪೊಲೀಸರ ದಾಳಿ

    ಮಹಿಳಾ ದಿನಾಚರಣೆಯಂದೇ ನಡೆಯಿತು ದುರಂತ!; ಹೆಣ್ಣು ಮಗುವನ್ನೂ ಕೊಂದು ಆತ್ಮಹತ್ಯೆ ಮಾಡಿಕೊಂಡ ತಾಯಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts