More

    ಪ್ರಾಣಿ ಹಿಂಸೆ ತಡೆಗೆ ಕಮಿಟಿ ರಚಿಸಿ

    ಬೆಳಗಾವಿ: ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಪ್ರಾಣಿ ಹಿಂಸೆ ತಡೆ (ಎಸ್‌ಪಿಸಿಎ) ಸಮಿತಿ ಸಭೆ ನಡೆಯಿತು. ಸಭೆಯಲ್ಲಿ ಜಿಲ್ಲೆಯಲ್ಲಿ ಎಸ್‌ಪಿಸಿಎ ಕಮಿಟಿ ರಚನೆ ಕುರಿತು ಚರ್ಚಿಸಲಾಯಿತು.

    ಎಸ್‌ಪಿಸಿಎ ಸಮಿತಿ ಸದಸ್ಯೆ ಡಾ.ಸೋನಾಲಿ ಸರ್ನೋಬತ್ ಮಾತನಾಡಿ, ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಪ್ರಾಣಿ ಹಿಂಸೆ ತಡೆ ಕಮಿಟಿ ರಚಿಸಲಾಗುತ್ತಿದೆ. ಅದೇ ರೀತಿ ಬೆಳಗಾವಿಯಲ್ಲೂ ಕಮಿಟಿ ರಚಿಸಬೇಕು ಎಂದು ಕೋರಿದರು. ಕಮಿಟಿ ರಚಿಸುವುದರಿಂದ ಪ್ರಾಣಿ ಹಿಂಸೆ ತಡೆದು, ಅವುಗಳನ್ನು ರಕ್ಷಿಸಬಹುದು ಎಂದು ತಿಳಿಸಿದರು.

    ಕೇವಲ 1-2 ಗೋವುಗಳಿದ್ದ ಗೋ ಶಾಲೆಗಳು, ಹೆಚ್ಚಿನ ಸಂಖ್ಯೆಯ ಗೋವುಗಳಿವೆ ಎಂದು ತಪ್ಪು ಅಂಕಿ-ಅಂಶ ನೀಡಿ ಸರ್ಕಾರದಿಂದ ಅನುದಾನ ಪಡೆದಿವೆ. ಇದು ಲಾಕ್‌ಡೌನ್ ವೇಳೆ ಹೆಚ್ಚಾಗಿ ಕಂಡು ಬಂದಿದೆ. ಇಂತಹ ಗೋ ಶಾಲೆಗಳ ಮೇಲೆ ಅಧಿಕಾರಿಗಳು ನಿಗಾ ವಹಿಸಿ, ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.

    ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ, ಇಂತಹ ಗೋ ಶಾಲೆಗಳ ಕುರಿತು ಮಾಹಿತಿ ಕಲೆ ಹಾಕುತ್ತೇವೆ. ಪ್ರಾಣಿ ಹಿಂಸೆ ತಡೆಯುವುದಕ್ಕೆ ಹಾಗೂ ಎಸ್‌ಪಿಸಿಎ ಸಮಿತಿ ರಚನೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ದನಗಳ ಪುನರ್ವಸತಿ ಕೇಂದ್ರಗಳು ಮತ್ತು ಆಸ್ಪತ್ರೆಗಳ ಕುರಿತು ಚರ್ಚಿಸಲಾಯಿತು. ಬಳಿಕ ಪಾಲಿಕೆ ಆಯುಕ್ತ ಕೆ.ಎಚ್. ಜಗದೀಶ ಅವರೊಂದಿಗೆ ಈ ಕುರಿತು ಚರ್ಚಿಸಲಾಯಿತು.

    ಎಸ್‌ಪಿಸಿಎ ಸದಸ್ಯ ಶಿವಾನಂದ ಡಂಬಳ, ಸಾಮಾಜಿಕ ಕಾರ್ಯಕರ್ತ ಜಗದೀಶ ಮಠದ, ಪ್ರಾಣಿ ಕಲ್ಯಾಣ ವಿಭಾಗದ ಉಪನಿರ್ದೇಶಕ ಅಶೋಕ ಕೊಲ್ಲಾ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts